“IPL ಮ್ಯಾಜಿಕ್: ಕಳೆದ 5 ವರ್ಷಗಳಲ್ಲಿ BCCI ಖಜಾನೆ ₹14,627 ಕೋಟಿ ಹೆಚ್ಚಳ”.

 “IPL ಮ್ಯಾಜಿಕ್: ಕಳೆದ 5 ವರ್ಷಗಳಲ್ಲಿ BCCI ಖಜಾನೆ ₹14,627 ಕೋಟಿ ಹೆಚ್ಚಳ”.

ನವದೆಹಲಿ: ವಿಶ್ವ ಕ್ರಿಕೆಟ್‌ನ ಬೃಹತ್ ಸಂಸ್ಥೆ ಬಿಸಿಸಿಐ ಕಳೆದ ಐದು ವರ್ಷಗಳಲ್ಲಿ ಸಾವಿರಾರು ಕೋಟಿ ರೂ. ಆದಾಯ ಗಳಿಸಿದೆ. 2019 ರಲ್ಲಿ ಬಿಸಿಸಿಐ ಬ್ಯಾಂಕ್ ಬ್ಯಾಲೆನ್ಸ್ ₹6,059 ಕೋಟಿ ಇದ್ದರೆ, ಈಗ ಅದು ₹20,686 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಅಂದರೆ, ಈ ಅವಧಿಯಲ್ಲಿ ಖಜಾನೆ ₹14,627 ಕೋಟಿ ರೂ.ಗಳಷ್ಟು ಹೆಚ್ಚಾಗಿದೆ.

2023-24 ಹಣಕಾಸು ವರ್ಷದಲ್ಲಿ ಮಾತ್ರ ಬಿಸಿಸಿಐ ₹4,193 ಕೋಟಿಆದಾಯ ಗಳಿಸಿದೆ. 2019 ರಿಂದ ಸಾಮಾನ್ಯ ನಿಧಿ ₹3,906 ಕೋಟಿ ಯಿಂದ ₹7,988 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಇದಲ್ಲದೆ, ತೆರಿಗೆಗಾಗಿ ಮಾತ್ರ ₹3,150 ಕೋಟಿ ಮೀಸಲಿರಿಸಲಾಗಿದೆ.

ಆದಾಯದಲ್ಲಿ ಇಳಿಕೆ

ಹಿಂದಿನ ವರ್ಷ ಅಂತರರಾಷ್ಟ್ರೀಯ ಪಂದ್ಯಗಳ ಮಾಧ್ಯಮ ಹಕ್ಕುಗಳಿಂದ ಬಿಸಿಸಿಐ ₹2,524.80 ಕೋಟಿ ಗಳಿಸಿದ್ದರೆ, ಈ ಬಾರಿ ಅದು ಕೇವಲ ₹813.14 ಕೋಟಿಗೆ ಇಳಿದಿದೆ. ಅದೇ ರೀತಿ, ಟೀಂ ಇಂಡಿಯಾ ಪ್ರವಾಸಗಳಿಂದ ಬಂದ ಆದಾಯ ₹642.78 ಕೋಟಿ ಯಿಂದ ₹361.22 ಕೋಟಿರೂ.ಗೆ ಇಳಿದಿದೆ. ಬ್ಯಾಂಕ್ ಬಡ್ಡಿ ಆದಾಯವೂ ₹986.45 ಕೋಟಿ ಯಿಂದ ₹533.05 ಕೋಟಿ ರೂ.ಗಳಿಗೆ ಕುಸಿದಿದೆ.

ಖರ್ಚು ಹೆಚ್ಚಳ:  ಬಿಸಿಸಿಐ ವೆಚ್ಚ ಸಹ ಗಣನೀಯವಾಗಿ ಏರಿಕೆಯಾಗಿದೆ. ಹಿಂದಿನ ₹1,167.99 ಕೋಟಿ ವೆಚ್ಚ ಈಗ ₹1,623.08 ಕೋಟಿ ರೂ.ಗಳಿಗೆ ಏರಿದೆ. ಜೊತೆಗೆ,

* ₹1,200 ಕೋಟಿ – ಮೂಲಸೌಕರ್ಯ ಅಭಿವೃದ್ಧಿಗೆ

* ₹350 ಕೋಟಿ – ಪ್ಲಾಟಿನಂ ಜುಬಿಲಿ ಬೆನೆವೊಲೆಂಟ್ ಫಂಡ್‌ಗೆ

* ₹500 ಕೋಟಿ – ಕ್ರಿಕೆಟ್ ಅಭಿವೃದ್ಧಿ ನಿಧಿಗೆ ಹಂಚಿಕೆ ಮಾಡಲಾಗಿದೆ.

ಸೆಪ್ಟೆಂಬರ್ 28ರಂದು ನಡೆಯಲಿರುವ ವಾರ್ಷಿಕ ಮಹಾಸಭೆಯಲ್ಲಿ ಬಿಸಿಸಿಐ ಇನ್ನಷ್ಟು ವಿವರಗಳನ್ನು ಬಹಿರಂಗಪಡಿಸುವ ನಿರೀಕ್ಷೆಯಿದೆ.

For More Updates Join our WhatsApp Group

:https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *