ಖೋರ್ ಅಲ್ ಜುಬೈರ್ ನಲ್ಲಿ ತೈಲ ಟ್ಯಾಂಕರ್ ಗುರಿಯಾಗಿತ್ತು
ಟೆಹ್ರಾನ್ : ಇರಾಕ್‌ನ ಖೋರ್ ಅಲ್ ಜುಬೈರ್ ಬಂದರಿನ ಬಳಿ ಇರಾನ್ನ ಹಡಗು ಅಮೆರಿಕದ ಒಡೆತನದ ಕಚ್ಚಾ ತೈಲ ಟ್ಯಾಂಕರ್ ಸಫೀಯಾ ವಿಷ್ಣುವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಇದರ ಜೊತೆಗೆ ಮಾಲ್ಡೀವ್ಸ್ನ ಇನ್ನೊಂದು ಟ್ಯಾಂಕರ್ ಮೇಲೂ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ಭಾರತೀಯ ಪ್ರಜೆ ಪ್ರಾಣ ಕಳೆದುಕೊಂಡಿದ್ದಾರೆ. ಈ ಮೂಲಕ ಗಲ್ಫ್ ಪ್ರದೇಶದಲ್ಲಿ ನಡೆಯುತ್ತಿರುವ ಯುದ್ಧ ಮತ್ತೋರ್ವ ಭಾರತೀಯನನ್ನು ಬಲಿ ತೆಗೆದುಕೊಂಡಿದೆ. ಈ ದಾಳಿಯಲ್ಲಿ ಒಬ್ಬ ಭಾರತೀಯ ಪ್ರಜೆ ಪ್ರಾಣ ಕಳೆದುಕೊಂಡಿದ್ದು, ಹಡಗಿನಲ್ಲಿದ್ದ ಉಳಿದ 27 ಸಿಬ್ಬಂದಿಯನ್ನು ರಕ್ಷಿಸಿ ಬಸ್ರಾಗೆ ಸ್ಥಳಾಂತರಿಸಲಾಗಿದೆ.
ಜಾಗತಿಕ ಕಡಲ ಕಾರ್ಯಪಡೆಯ ಶೇ. 15ಕ್ಕಿಂತ ಹೆಚ್ಚು ಜನರು ಭಾರತೀಯರು ಇರುವುದರಿಂದ, ಮುಂದಿನ ಯಾವುದೇ ದಾಳಿಯಲ್ಲಿ ಇನ್ನಷ್ಟು ಭಾರತೀಯ ಪ್ರಜೆಗಳು ಅಪಾಯಗಳಿವೆ ಎಂದು ಮೂಲಗಳು ಎಚ್ಚರಿಸಿವೆ.
ಯುನೈಟೆಡ್ ಅರಬ್ ಎಮಿರೇಟ್ಸ್, ಸೌದಿ ಅರೇಬಿಯಾ ಮತ್ತು ಕುವೈತ್ ಸೇರಿದಂತೆ ಗಲ್ಫ್ ದೇಶಗಳಲ್ಲಿ ಸುಮಾರು 9ರಿಂದ 10 ಮಿಲಿಯನ್ ಭಾರತೀಯರು ವಾಸಿಸುತ್ತಿದ್ದಾರೆ ಮತ್ತು ಕೆಲಸ ಮಾಡುತ್ತಿದ್ದಾರೆ. ಇರಾನ್ ಯುಎಸ್ ನೆಲೆಗಳು ಮತ್ತು ತೈಲ ಸೌಲಭ್ಯಗಳನ್ನು ಹೊಂದಿರುವ ಗಲ್ಫ್ ಸಹಕಾರ ಮಂಡಳಿಯ ರಾಜ್ಯಗಳನ್ನು ಗುರಿಯಾಗಿಸಿಕೊಂಡು 1,000ಕ್ಕೂ ಹೆಚ್ಚು ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಹಾರಿಸಿರುವುದರಿಂದ ಅಲ್ಲಿನ ಭಾರತೀಯ ಸಮುದಾಯವು ಹೆಚ್ಚಿನ ಅಪಾಯವನ್ನು ಎದುರಿಸುತ್ತಿದೆ.
For More Updates Join our WhatsApp Group :




