ಅಮೆರಿಕ-ಇಸ್ರೇಲ್ ದಾಳಿಗೆ ಪ್ರತಿಯಾಗಿ ಇರಾನ್ ಬೇಡಿಕೆ.
ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧ ನಿರೀಕ್ಷೆಮೀರಿ ಮುಂದುವರಿಯುತ್ತಿದೆ. ಇಸ್ರೇಲ್, ಅಮೆರಿಕದ ಜಂಟಿ ದಾಳಿಗಳಿಗೆ ಇರಾನ್ ಪ್ರತಿರೋಧ ಮುಂದುವರಿದಿದೆ. ಪ್ರತಿರೋಧ ಮಾತ್ರವಲ್ಲ, ಇರಾನ್ನಿಂದ ಮಾರಕವಾದ ಪ್ರತಿದಾಳಿಗಳೂ ಆಗುತ್ತಿವೆ. ಜಾಗತಿಕ ತೈಲ ಮಾರುಕಟ್ಟೆ ಭಾರೀ ವ್ಯತ್ಯಯ ಕಾಣುತ್ತಿದೆ. ಇಡೀ ಜಗತ್ತಿಗೆ ಮಾರಕವಾದ ಈ ಯುದ್ಧವನ್ನು ಆರಂಭಿಸಿದಷ್ಟು ಸುಲಭವಾಗಿ ನಿಲ್ಲಿಸಲು ಆಗುತ್ತಿಲ್ಲ. ಇರಾನ್ ಈ ಯುದ್ಧ ನಿಲ್ಲಿಸುವ ಅವಕಾಶಕ್ಕೆ ಸಿದ್ಧ ಇದೆ. ಆದರೆ, ಮೂರು ಷರತ್ತುಗಳನ್ನು ಹಾಕಿದೆ. ಈ ಷರತ್ತುಗಳು ಹೀಗಿವೆ:
- ಅಮೆರಿಕ ಮತ್ತು ಇಸ್ರೇಲ್ನಿಂದ ತತ್ಕ್ಷಣವೇ ಎಲ್ಲಾ ಮಿಲಿಟರಿ ದಾಳಿಗಳು ನಿಲ್ಲಬೇಕು. ಪೂರ್ಣ ನಿಂತ ಬಳಿಕವಷ್ಟೇ ಸಂಧಾನ ಅಥವಾ ಮಾತುಕತೆ ಸಾಧ್ಯ ಎಂದಿದೆ ಇರಾನ್.
- ಕದನ ವಿರಾಮ ತಾತ್ಕಾಲಿಕ ಆಗಿರಕೂಡದು. ಭವಿಷ್ಯದಲ್ಲಿ ಇಂಥ ದಾಳಿಗಳನ್ನು ಮಾಡುವುದಿಲ್ಲ ಎಂದು ಗ್ಯಾರಂಟಿ ಕೊಡಬೇಕು ಎಂದು ಇರಾನ್ ಹಾಕಿರುವ ಮತ್ತೊಂದು ಷರತ್ತು.
- ತನ್ನ ಸಾರ್ವಭೌಮ ಹಕ್ಕುಗಳನ್ನು ಮಾನ್ಯ ಮಾಡಬೇಕು. ಈ ಸಂಘರ್ಷದಲ್ಲಿ ತನಗೆ ಆಗಿರುವ ಹಾನಿಗಳಿಗೆ ಪರಿಹಾರ ಕೊಡಬೇಕು ಎಂದು ಇರಾನ್ ಒತ್ತಾಯಿಸಿದೆ.
ಮಧ್ಯಪ್ರಾಚ್ಯ ಯುದ್ಧದಿಂದ ಭಾರತದ ಮೇಲೇನು ಪರಿಣಾಮ?
ಅತಿಹೆಚ್ಚು ತೈಲ ಮತ್ತು ಅನಿಲ ಬಳಸುವ ದೇಶಗಳಲ್ಲಿ ಭಾರತವೂ ಒಂದು. ಹೆಚ್ಚಿನವನ್ನು ಭಾರತ ವಿದೇಶಗಳಿಂದಲೇ ಆಮದು ಮಾಡಿಕೊಳ್ಳುತ್ತದೆ. ಹೀಗಾಗಿ, ತೈಲ ಬಿಕ್ಕಟ್ಟು ಶುರುವಾದರೆ ಭಾರತದ ಆರ್ಥಿಕತೆಯ ಮೇಲೆ ನಾನಾ ಪರಿಣಾಮಗಳಾಗುತ್ತವೆ. ಕೆಲ ಸಂಭಾವ್ಯ ಪರಿಣಾಮಗಳಿವು…
ಹಾರ್ಮುಜ್ ಜಲಸಂಧಿ ಪೂರ್ಣ ಬಂದ್ ಆಗಿಬಿಟ್ಟರೆ?
ಯುದ್ಧ ಮುಂದುವರಿಯುವುದರ ಜೊತೆಗೆ ಹಾರ್ಮುಜ್ ಜಲಸಂಧಿ ಪೂರ್ಣ ಬಂದ್ ಆಗಿಬಿಡುವ ಸಾಧ್ಯತೆ ಇಲ್ಲದಿಲ್ಲ. ವಿಶ್ವದ ಹೆಚ್ಚಿನ ತೈಲ ಮತ್ತು ಅನಿಲ ಸರಬರಾಜು ಈ ಮಾರ್ಗದಲ್ಲೇ ಸಾಗುವುದು. ಭಾರತ ಸೇರಿ ಹಲವು ರಾಷ್ಟ್ರಗಳಿಂದ ವಿವಿಧ ಸರಕುಗಳು ಗಲ್ಫ್ ದೇಶಗಳಿಗೆ ರಫ್ತಾಗಲು ಈ ಮಾರ್ಗ ಮುಖ್ಯ. ಈ ಜಲಸಂಧಿ ಬಂದ್ ಆಗಿ ಹೋದರೆ ಹಲವಾರು ರಾಷ್ಟ್ರಗಳಿಗೆ ಬಹಳ ಹಿನ್ನಡೆಯಾಗಬಹುದು. ಭಾರತದ ಮೇಲೆ ಬಹಳ ದೊಡ್ಡ ಪರಿನಾಮ ಆಗಬಹುದು.
For More Updates Join our WhatsApp Group :




