ಗರ್ಭಿಣಿಯರಲ್ಲಿ ನೀರಿನ ಕೊರತೆ ಅಪಾಯಕಾರಿಯೇ?

ಗರ್ಭಿಣಿಯರಲ್ಲಿ ನೀರಿನ ಕೊರತೆ ಅಪಾಯಕಾರಿಯೇ?

ಚಳಿಗಾಲದಲ್ಲಿ ನೀರು ಕಡಿಮೆ ಕುಡಿದರೆ ಸಿ-ಸೆಕ್ಷನ್ ಹೆರಿಗೆ ಹೆಚ್ಚಾಗುತ್ತಾ?

ಚಳಿಗಾಲದಲ್ಲಿ ಸಾಮಾನ್ಯವಾಗಿ ಬಾಯಾರಿಕೆ ಕಡಿಮೆ ಇರುತ್ತದೆ, ಆದರೆ ಇದರರ್ಥ ಕಡಿಮೆ ನೀರು ಕುಡಿಯಬೇಕು ಎಂದಲ್ಲ. ಅದರಲ್ಲಿಯೂ ಚಳಿಗಾಲದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದು ಗರ್ಭಿಣಿಯರಿಗೆ ಮುಖ್ಯವಾಗಿದೆ. ಏಕೆಂದರೆ ದೇಹದಲ್ಲಿ ನೀರಿನ ಕೊರತೆಯಿದ್ದರೆ, ಅದು ತಾಯಿ ಮತ್ತು ಮಗುವಿನ ಮೇಲೆ ಪರಿಣಾಮ ಬೀರಬಹುದು. ಅನೇಕ ಸಂದರ್ಭಗಳಲ್ಲಿ, ಇದು ಹೆರಿಗೆಯ ಸಮಯದಲ್ಲಿ ತೊಂದರೆಗಳನ್ನು ಉಂಟುಮಾಡಬಹುದು ಅಥವಾ ಅಕಾಲಿಕ ಜನನಕ್ಕೆ ಕಾರಣವಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಗರ್ಭಿಣಿಯರು ದಿನಕ್ಕೆ ಎಷ್ಟು ಲೋಟ ನೀರು ಕುಡಿಯಬೇಕು, ನೀರಿನ ಅಂಶ ಕಡಿಮೆಯಾದರೆ ಸಿ-ಸೆಕ್ಷನ್ ಹೆರಿಗೆಯ ಅಪಾಯ ಹೆಚ್ಚಾಗುತ್ತದೆಯೇ ತಿಳಿದುಕೊಳ್ಳಿ.

ದೆಹಲಿಯ ಆರ್‌ಎಂಎಲ್ ಆಸ್ಪತ್ರೆಯ ಪ್ರಸೂತಿ ವಿಭಾಗದ ಡಾ. ಸಲೋನಿ ಚಡ್ಡಾ ಹೇಳುವ ಪ್ರಕಾರ, ಗರ್ಭಿಣಿಯರು ಚಳಿಗಾಲದಲ್ಲಿಯೂ ಸಹ ಪ್ರತಿದಿನ 8 ರಿಂದ 10 ಗ್ಲಾಸ್ ನೀರು ಕುಡಿಯಬೇಕು. ಇದಕ್ಕಿಂತ ಕಡಿಮೆ ಕುಡಿಯುವುದರಿಂದ ಮೂತ್ರನಾಳದ ಸೋಂಕು, ದೇಹದಲ್ಲಿ ಊತ ಮತ್ತು ಆಮ್ನಿಯೋಟಿಕ್ ದ್ರವದ ಪ್ರಮಾಣದಲ್ಲಿ ಇಳಿಕೆಯಾಗುವ ಅಪಾಯ ಹೆಚ್ಚಾಗುತ್ತದೆ. ಆಮ್ನಿಯೋಟಿಕ್ ದ್ರವದ ಪ್ರಮಾಣ ಕಡಿಮೆಯಾದರೆ, ಅದು ಸಿಸೇರಿಯನ್ ಹೆರಿಗೆಯ ಅಪಾಯವನ್ನು ಹೆಚ್ಚಿಸುತ್ತದೆ.

ನೀರು ಕಡಿಮೆ ಕುಡಿಯುವುದರಿಂದ ಸಿಸೆಕ್ಷನ್ ಹೆರಿಗೆಯ ಅಪಾಯ ಹೆಚ್ಚಾಗುತ್ತದೆಯೇ?

ಸಾಮಾನ್ಯವಾಗಿ ನೀರು ಕಡಿಮೆ ಕುಡಿಯುವುದರಿಂದ ದೇಹದಲ್ಲಿ ಆಮ್ನಿಯೋಟಿಕ್ ದ್ರವದ ಪ್ರಮಾಣ ಕಡಿಮೆಯಾಗುತ್ತದೆ. ಅದರ ಮಟ್ಟವು ಆರಂಭಿಕ ಹಂತದಲ್ಲಿ ಕಡಿಮೆಯಾದರೆ, ಅದು ಮಗುವಿನ ಕೈಗಳು, ಪಾದಗಳು ಅಥವಾ ಮುಖದ ಮೇಲೆ ಒತ್ತಡವನ್ನು ಉಂಟುಮಾಡಬಹುದು, ಇದು ಆಮ್ನಿಯೋಟಿಕ್ ಬ್ಯಾಂಡ್ ಸಿಂಡ್ರೋಮ್‌ನಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ, ಚಳಿಗಾಲದಲ್ಲೂ ಮಹಿಳೆಯರು ನೀರು ಕುಡಿಯುವುದನ್ನು ಕಡಿಮೆ ಮಾಡಬಾರದು. ದಿನಕ್ಕೆ ಕನಿಷ್ಠ 2.5 ರಿಂದ 3 ಲೀಟರ್ ನೀರನ್ನು ಕುಡಿಯುವುದು ಒಳ್ಳೆಯದು. ಜೊತೆಗೆ ನೀರಿನ ಕೊರತೆ ನೀಗಿಸಲು ಎಳನೀರು, ಸೂಪ್‌ ಗಳನ್ನು ಸೇವಿಸಬಹುದು ಆದರೆ ಹೆಚ್ಚು ಚಹಾ ಅಥವಾ ಕಾಫಿ ಕುಡಿಯುವುದನ್ನು ತಪ್ಪಿಸಿ, ಏಕೆಂದರೆ ಇವುಗಳಿಂದ ದೇಹದಲ್ಲಿ ನಿರ್ಜಲೀಕರಣ ಉಂಟಾಗುತ್ತದೆ.

ಚಳಿಗಾಲದಲ್ಲಿ ನೀರು ಕುಡಿಯಲು ಸಿಂಪಲ್ ಸಲಹೆಗಳು:

  • ಎದ್ದ ತಕ್ಷಣ 1 ಲೋಟ ನೀರು ಕುಡಿಯುವುದನ್ನು ಮರೆಯಬೇಡಿ.
  • ಸಾಮಾನ್ಯ ತಾಪಮಾನದಲ್ಲಿ ನೀರು ಕುಡಿಯಿರಿ.
  • ಒಂದೇ ಬಾರಿಗೆ ಹೆಚ್ಚು ನೀರು ಕುಡಿಯಬೇಡಿ.

ದೇಹ ನಿರ್ಜಲೀಕರಣಗೊಂಡಿರುವುದನ್ನು ಗುರುತಿಸುವುದು ಹೇಗೆ?

  • ಮೂತ್ರದ ಬಣ್ಣ ಹಳದಿ.
  • ತುಟಿಗಳು ಒಣಗಿರುತ್ತವೆ.
  • ದಣಿದ ಭಾವನೆ.
  • ನಿರಂತರ ತಲೆನೋವು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *