ಯಶ್ ಕ್ಲ್ಯಾಶ್ ತಪ್ಪಿಸಿದ್ದರೂ, ತೆಲುಗು ರಾಜ್ಯಗಳಲ್ಲಿ ‘ಧುರಂಧರ್ 2’ ಆ್ಯಡ್ವಾನ್ಸ್ ಬುಕಿಂಗ್ ಹೈಪ್ ‘ಉಸ್ತಾದ್ ಭಗತ್ ಸಿಂಗ್’ ಗೆ ಸವಾಲು.
‘ಟಾಕ್ಸಿಕ್’ vs ‘ಧುರಂಧರ್ 2’ ಎಂಬ ಟಾಕ್ ಜೋರಾಗಿತ್ತು. ಆದರೆ, ಯಶ್ ಅವರು ತಮ್ಮ ಚಿತ್ರವನ್ನು ಮುಂದಕ್ಕೆ ಹಾಕಿಕೊಳ್ಳುವ ಮೂಲಕ ಕ್ಲ್ಯಾಶ್ ತಪ್ಪಿಸಿದರು. ಹೀಗಾಗಿ, ‘ಧುರಂಧರ್ 2’ ಸೋಲೋ ರಿಲೀಸ್ ಕಾಣಲಿದೆ ಎನ್ನುವಾಗಲೇ ಪವನ್ ಕಲ್ಯಾಣ್ ಅವರ ‘ಉಸ್ತಾದ ಭಗತ್ ಸಿಂಗ್’ ಸಿನಿಮಾ ರಿಲೀಸ್ ಆಗುತ್ತಿದೆ. ಆದರೆ, ಈ ಚಿತ್ರಕ್ಕೆ ತೆಲುಗು ಭಾಗದಲ್ಲೇ ‘ಧುರಂಧರ್ 2’ ಸಿನಿಮಾ ಹೊಡೆತ ಕೊಡೋ ಸಾಧ್ಯತೆ ಇದೆ ಎಂದು ವರದಿ ಆಗಿದೆ.
‘ಧುರಂಧರ್ 2’ ಚಿತ್ರದ ದೊಡ್ಡ ಬಲ ಎಂದರೆ, ‘ಧುರಂಧರ್’ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ಮೊದಲ ಭಾಗ ಹಿಂದಿಯಲ್ಲಿ ಮಾತ್ರ ರಿಲೀಸ್ ಆಗಿತ್ತು. ಆದರೆ, ಸೀಕ್ವೆಲ್ ಹಿಂದಿ ಜೊತೆ ಕನ್ನಡ, ತೆಲುಗು ಮೊದಲಾದ ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಇದು ‘ಉಸ್ತಾದ್ ಭಗತ್ ಸಿಂಗ್’ ಚಿತ್ರಕ್ಕೆ ಸಾಕಷ್ಟು ಹೊಡೆತ ಕೊಡೋ ಸಾಧ್ಯತೆ ಇದೆ. ಈ ಸಿನಿಮಾ ರಿಮೇಕ್. ಅಲ್ಲದೆ, ಹೆಚ್ಚು ಹೈಪ್ ಇಲ್ಲ. ಇದು ಚಿತ್ರಕ್ಕೆ ಹಿನ್ನಡೆ ಆಗುವ ಸಾಧ್ಯತೆ ಇದೆ.
‘ಉಸ್ತಾದ್ ಭಗತ್ ಸಿಂಗ್’ ರಿಮೇಕ್ ಮತ್ತು ಈ ಸಿನಿಮಾ ಪೂರ್ಣಗೊಳ್ಳಲು ಸಾಕಷ್ಟು ಸಮಯ ಹಿಡಿದಿದೆ. ಈ ಕಾರಣದಿಂದ ಚಿತ್ರಕ್ಕೆ ತೊಂದರೆ ಆಗುತ್ತಿದೆ. ಅಲ್ಲದೆ, ಈ ಮೊದಲು ರಿಲೀಸ್ ಆದ ಪವನ್ ಕಲ್ಯಾಣ್ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಗಮನ ಸೆಳೆಯಲು ವಿಫಲವಾಗಿವೆ. ಈ ಕಾರಣದಿಂದಲೂ ಚಿತ್ರಕ್ಕೆ ಹೆಚ್ಚಿನ ಹೈಪ್ ಸಿಗುತ್ತಿಲ್ಲ. ಆದರೆ, ‘ಧುರಂಧರ್ 2’ ಹಾಗಲ್ಲ. ದಕ್ಷಿಣದಲ್ಲೂ ಈ ಸಿನಿಮಾ ಪಾರುಪತ್ಯ ಸಾಧಿಸಿದೆ. ‘ಧುರಂಧರ್ 2’ ಚಿತ್ರದಲ್ಲಿ ರಣವೀರ್ ಸಿಂಗ್ ನಟಿಸಿದ್ದಾರೆ. ಈ ಚಿತ್ರಕ್ಕೆ, ರಣವೀರ್ ಸಿಂಗ್ ನಾಯಕ. ಆದಿತ್ಯ ಧಾರ್ ಅವರ ನಿರ್ದೇಶನ ಚಿತ್ರಕ್ಕೆ ಇದೆ.
For More Updates Join our WhatsApp Group :




