ಹಿಂದೂ ಧರ್ಮದ ಪ್ರಕಾರ ಕೆಲವು ಸಂಪ್ರದಾಯಗಳು, ರೂಢಿ ಕಟ್ಟಳೆಗಳಿದ್ದು, ಅದರಲ್ಲಿ ಮಲಗುವ ದಿಕ್ಕಿಗೂ ಸಹ ಕೆಲವು ನಿಯಮವಿದೆ. ಅದರಂತೆ ಹಿರಿಯರು ಹೇಳುವ ಪ್ರಕಾರ ಉತ್ತರಕ್ಕೆ ತಲೆ ಹಾಕಿ ಮಲಗಬಾರದು, ಏಕೆಂದರೆ ಇದು ಸಾವಿಗೆ ಕಾರಣವಾಗುತ್ತದೆ. ಯಮದೂತರು ಉತ್ತರ ದಿಕ್ಕಿನಲ್ಲಿ ಸಂಚರಿಸುತ್ತಾರೆ. ಆದ್ದರಿಂದ, ಆ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಸಾವು ಬರುತ್ತದೆ ಎಂದು ನಂಬಲಾಗಿದೆ.
ಆದರೆ ಇದು ಕೇವಲ ಮೂಡನಂಬಿಕೆಯಾಗಿ ಉಳಿದಿಲ್ಲ, ಯಾಕೆಂದರೆ ವಿಜ್ಞಾನವೂ ಕೂಡ ಈ ನಂಬಿಕೆಯನ್ನು ಬೆಂಬಲಿಸುತ್ತದೆ. ದಕ್ಷಿಣ ದಿಕ್ಕಿನಲ್ಲಿ ಮಲಗುವುದು ಒಳ್ಳೆಯದಲ್ಲ ಎಂದು ವಿಜ್ಞಾನವೂ ಸಾಬೀತುಪಡಿಸಿದೆ. ಭೂಮಿಯ ಆಯಸ್ಕಾಂತ ಶಕ್ತಿಯು ನಿರಂತರವಾಗಿ ದಕ್ಷಿಣದಿಂದ ಉತ್ತರಕ್ಕೆ ಪ್ರವಹಿಸುತ್ತಿರುತ್ತದೆ. ಅದೇ ರೀತಿ, ನಮ್ಮ ದೇಹವು ಸಹ ಕಾಂತಕ್ಷೇತ್ರದಂತೆ ಕಾರ್ಯನಿರ್ವಹಿಸುತ್ತದೆ. ಹೃದಯವು ದೇಹದ ಕೇಂದ್ರ ಭಾಗವಾಗಿದ್ದು,ಇಲ್ಲಿಂದ ರಕ್ತವು ದೇಹದ ಎಲ್ಲಾ ಭಾಗಗಳಿಗೆ ಪರಿಚಲನೆಯಾಗುತ್ತದೆ. ನಂತರ ಅದು ಹೃದಯಕ್ಕೆ ಮರಳುತ್ತದೆ. ಭೂಮಿಯ ಕಾಂತೀಯ ಪ್ರಭಾವವು ಉತ್ತರ ಮತ್ತು ದಕ್ಷಿಣ ದಿಕ್ಕುಗಳಲ್ಲಿ ಕೇಂದ್ರೀಕೃತವಾಗಿರುವುದರಿಂದ ಒಬ್ಬರು ತಮ್ಮ ತಲೆಯನ್ನು ಉತ್ತರಕ್ಕೆ ಮುಖ ಮಾಡಿ ಮಲಗಬಾರದು ಎಂದು ಹೇಳಲಾಗುತ್ತದೆ.
ಉತ್ತರ ದಿಕ್ಕಿನಲ್ಲಿ ಮಲಗುವುದರಿಂದ ದೇಹದ ಕಾಂತಕ್ಷೇತ್ರದ ಮೇಲೆ ಭೂಕಾಂತೀಯ ಕ್ಷೇತ್ರದ ಪ್ರಭಾವದಿಂದಾಗಿ ರಕ್ತದ ಹರಿವಿನಲ್ಲಿ ಏರಿಳಿತಗಳು ಉಂಟಾಗುತ್ತವೆ. ಉತ್ತರ ದಿಕ್ಕಿನಲ್ಲಿ ಮಲಗುವುದರಿಂದ ಮೆದುಳಿಗೆ ರಕ್ತದ ಹರಿವು ಹೆಚ್ಚಾಗುತ್ತದೆ ಏಕೆಂದರೆ ರಕ್ತದಲ್ಲಿನ ಕಬ್ಬಿಣವು ಉತ್ತರ ದಿಕ್ಕಿಗೆ ಹೆಚ್ಚು ಆಕರ್ಷಿತವಾಗುತ್ತದೆ. ಇದು ಹೃದಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ, ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿತ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ವಿಜ್ಞಾನ ಹೇಳುತ್ತದೆ. ರಾತ್ರಿಯಲ್ಲಿ ಉತ್ತರ ದಿಕ್ಕಿನಲ್ಲಿ ಮಲಗುವುದರಿಂದ ಸರಿಯಾಗಿ ನಿದ್ರೆ ಬರುವುದಿಲ್ಲ. ಇದು ತಲೆನೋವು ಮತ್ತು ತಲೆತಿರುಗುವಿಕೆಗೆ ಕಾರಣವಾಗಬಹುದು, ಇದು ನಿಮ್ಮ ನಿದ್ರೆಯ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ.
For More Updates Join our WhatsApp Group :
