3 ವರ್ಷಗಳಲ್ಲಿ ನಿಜವಾದ ನೇಮಕಾತಿ ಕೇವಲ 8,157, ಬಿಜೆಪಿ ಆಕ್ರೋಶ
ಬೆಂಗಳೂರು : ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಧಾರವಾಡದಲ್ಲಿ ಸಾವಿರಾರು ಉದ್ಯೋಗಾಕಾಂಕ್ಷಿಗಳಿಂದ ಬೃಹತ್ ಪ್ರತಿಭಟನೆ ಬೆನ್ನಲ್ಲೇ ಪ್ರತಿಕ್ರಿಯಿಸಿದ್ದ ಸಿಎಂ ಸಿದ್ದರಾಮಯ್ಯ, ಕಳೆದ 2.5 ವರ್ಷಗಳಲ್ಲಿ 40,000ಕ್ಕೂ ಹೆಚ್ಚು ನೇಮಕಾತಿಗಳನ್ನು ವಿವಿಧ ಇಲಾಖೆಗಳಲ್ಲಿ ಮಾಡಲಾಗಿದೆ ಎಂದು ತಿಳಿಸಿದ್ದರು. ಆದ್ರೆ ಮುಖ್ಯಮಂತ್ರಿಗಳ ಹೇಳಿಕೆ ಹಸೀ ಸುಳ್ಳು ಎಂದು ವಿಪಕ್ಷ ಬಿಜೆಪಿ ಆರೋಪಿಸಿದ್ದು, ಮಿಂಚಿನ ವೇಗಕ್ಕಿಂತಲೂ ಸಿದ್ದರಾಮಯ್ಯನವರು ಹೇಳುವ ಸುಳ್ಳಿನ ವೇಗವೇ ಹೆಚ್ಚು ಎಂದು ವ್ಯಂಗ್ಯವಾಡಿದೆ.
ಸುಳ್ಳು ಹೇಳಿದರೂ ಸತ್ಯದ ತಲೆ ಮೇಲೆ ಹೊಡೆದಂತೆ ಹೇಳಬೇಕು ಎಂಬ ನಾಣ್ಣುಡಿ ಇದೆ. ಆದರೆ ಸಿದ್ದರಾಮಯ್ಯ ಅವರು ಸತ್ಯದ ತಲೆ ಮೇಲೆ ಮಾತ್ರವಲ್ಲ, ಸತ್ಯದ ಪೂರ್ತಿ ದೇಹದ ಮೇಲೆಯೇ ಹೊಡೆಯುವಂತಹ ಸುಳ್ಳು ಹೇಳಿದ್ದಾರೆ. ತಮ್ಮ ಕರ್ನಾಟಕ ನಿರ್ನಾಮದ ಬೋಗಸ್ ಗ್ಯಾರಂಟಿ ಸರ್ಕಾರದ ಈ ಅವಧಿಯಲ್ಲಿ 40 ಸಾವಿರಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಿದ್ದೇವೆ ಎಂದು ನಿನ್ನೆ ಹಸಿಹಸಿ ಸುಳ್ಳು ಹೇಳಿದ್ದರು. ಆದರೆ ಕಾಂಗ್ರೆಸ್ ಸರ್ಕಾರದ ಈ ಅವಧಿಯಲ್ಲಿ ನೇಮಕಾತಿ ಪೂರ್ಣಗೊಂಡ ಸರ್ಕಾರಿ ಹುದ್ದೆಗಳು ಕೇವಲ 8,157 ಹಾಗೂ ನೇಮಕಾತಿ ಪ್ರಗತಿಯಲ್ಲಿರುವ ಹುದ್ದೆಗಳು ಕೇವಲ 3,081. ಈ ಮಾಹಿತಿಯನ್ನು ಸ್ವತಃ ಸಿಎಂ ಸಿದ್ದರಾಮಯ್ಯನವರೇ ಎರಡು ತಿಂಗಳ ಹಿಂದೆ ನಡೆದ ಚಳಿಗಾಲದ ಅಧಿವೇಶನದಲ್ಲಿ ತಿಳಿಸಿದ್ದಾರೆ ಎಂದು ಬಿಜೆಪಿ ಹೇಳಿದೆ.
For More Updates Join our WhatsApp Group :




