ಕೋವಿಡ್ ರೂಪಾಂತರಿ ಎದುರಿಸಲು ಜಿಲ್ಲೆ ಸನ್ನದ್ಧವಾಗಿದೆಯೇ?

ತುಮಕೂರು: ಕೋವಿಡ್-ಜೆಎನ್1 ಹೊಸ ರೂಪಾಂತರಿಯಾಗಿ ಮತ್ತೆ ಪ್ರವೇಶಿಸುತ್ತಿರುವ ಕೋವಿಡ್-19 ಸಾಂಕ್ರಾಮಿಕ ಎದುರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆರೋಗ್ಯ ಇಲಾಖೆಗೆ ಅಲರ್ಟ್ ಸಂದೇಶ ರವಾನಿಸಿರುವ ಬೆನ್ನಿಗೆ ಆರೋಗ್ಯ ಇಲಾಖೆ ಮಾರ್ಗಸೂಚಿಯನ್ನು ಪ್ರಕಟಿಸಿ ಕೋವಿಡ್ ತಪಾಸಣೆ, ಚಿಕಿತ್ಸೆಗೆ ಆಸ್ಪತ್ರೆಗಳನ್ನು ಅಣಿಗೊಳಿಸಲು ಮುಂದಾಗಿದೆ.

ತುಮಕೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ನಿಟ್ಟಿನಲ್ಲಿ ಜಿಲ್ಲಾಸ್ಪತ್ರೆ, ತಾಲ್ಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇಲಾಖೆ ಮಾರ್ಗಸೂಚಿಯನುಸಾರ ಕೋವಿಡ್ ಚಿಕಿತ್ಸೆಗೆ ವ್ಯವಸ್ಥೆ ಮಾಡಿಕೊಳ್ಳಲು ಸೂಚನೆಗಳನ್ನು ನೀಡಿದ್ದು, ಕೋವಿಡ್ ಪ್ರಕರಣ ಪತ್ತೆಹಚ್ಚಲು ಆರ್‌ಟಿಪಿಸಿಆರ್ ಪರೀಕ್ಷೆ ನಡೆಸುವಂತೆ ನಿರ್ದೇಶಿಸಿದ್ದಾರೆ. ತಾಲ್ಲೂಕು ಆಸ್ಪತ್ರೆಗಳಲ್ಲಿ ತಲಾ ಹತ್ತು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಲಾ ಎರಡು ಶಂಕಿತ ಪ್ರಕರಣಗಳನ್ನು ಗುರುತಿಸಲು ಕ್ರಮ ವಹಿಸಲಾಗಿದೆ ಎಂದು ಡಿಎಚ್‌ಓ ಡಾಮಂಜುನಾಥ್ ಪ್ರಜಾಪ್ರಗತಿಗೆ ಪ್ರತಿಕ್ರಿಯಿಸಿದ್ದಾರೆ.

ಯುವಕ

ಇನ್ನೂ ಜಿಲ್ಲಾಸ್ಪತ್ರೆಯಲ್ಲಿ 400 ಬೆಡ್‌ಗಳಿದ್ದು, ಎಲ್ಲಾ ಬೆಡ್‌ಗಳಿಗೂ ಆಕ್ಸಿಜನ್ ಪೂರೈಕೆ ವ್ಯವಸ್ಥೆಯಿದೆ. ಇದೇ ರೀತಿ ಜಿಲ್ಲೆಯಾದ್ಯಂತ ಒಟ್ಟು 1290 ಬೆಡ್‌ಗಳು ಲಭ್ಯವಿದ್ದು, ಹಿಂದಿನ ಅನುಭವಗಳ ಆಧಾರದಲ್ಲಿ ಕೋವಿಡ್ ಪರಿಸ್ಥಿತಿಯನ್ನು ಎದುರಿಸಲು ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗುವುದು. ಅಗತ್ಯ ಔಷಧಿಗಳ ದಾಸ್ತಾನು ಮಾಡಲಿದ್ದು, ಯಾವುದೇ ರೀತಿ ಜ್ವರ, ನೆಗಡಿ , ಕೆಮ್ಮಿನ ರೋಗ ಲಕ್ಷಣಗಳು ಕಂಡು ಬಂದರೆ ಸಾರ್ವಜನಿಕರು ವೈದ್ಯರನ್ನು ಸಂಪರ್ಕಿಸುವುದು ಮುಖ್ಯ. ಗುಂಪು ಸಮೂಹದಲ್ಲಿ ಅಂತರ ಕಾಪಾಡುವುದು, 60 ವರ್ಷ ಮೇಲ್ಪಟ್ಟವರು, ರೋಗ ಗುಣ ಲಕ್ಷಣ  ಹೊಂದಿರುವವರು ಫೇಸ್‌ಮಾಸ್ಕ್ ಧರಿಸುವುದು, ವೈಯಕ್ತಿಕ ಸ್ವಚ್ಛತೆ ಸೇರಿದಂತೆ ಕೋವಿಡ್ ನಿಯಮಗಳನ್ನು ಪಾಲಿಸುವುದು ಮುಖ್ಯ ಎಂದು ಡಿಎಚ್‌ಓ ಪ್ರತಿಕ್ರಿಯಿಸಿದ್ದಾರೆ.

ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕರಾದ  ಡಾ.ಎಚ್.ವೀಣಾ ಅವರು ಪ್ರತಿಕ್ರಿಯಿಸಿ  ಕೋವಿಡ್ -19ರ ಸಂದರ್ಭದಲ್ಲಿ ಪೂರ್ಣ ಪ್ರಮಾಣದ ಕೋವಿಡ್ ಚಿಕಿತ್ಸಾ ಆಸ್ಪತ್ರೆಯಾಗಿ ಪರಿವರ್ತನೆಯಾಗಿದ್ದ ಜಿಲ್ಲಾಸ್ಪತ್ರೆಯಲ್ಲಿ 400 ಆಕ್ಸಿಜನ್ ಬೆಡ್‌ಗಳ ಜೊತೆಗೆ ಪ್ರಸ್ತುತ ಹೆಚ್ಚುವರಿಯಾಗಿ ಟ್ರೋಮಾ ಕೇರ್ ಆಸ್ಪತ್ರೆಯಲ್ಲಿ 100 ಬೆಡ್‌ಗಳು ಲಭ್ಯವಿದೆ. 46 ಐಸಿಯು ಯೂನಿಟ್‌ಗಳಿದ್ದು, ಆರ್‌ಟಿಪಿಸಿಆರ್‌ಲ್ಯಾಬ್, 52 ಆಕ್ಸಿಜನ್ ಕಾನ್ಸರ್‌ಟ್ರೇಟರ್‌ಗಳು ಲಭ್ಯವಿದೆ. ಎರಡು ಆಕ್ಸಿಜನ್ ಪಿಎಸ್‌ಎ ಪ್ಲ್ಯಾಂಟ್ಸ್ಗಳ ಮೂಲ ಆಸ್ಪತ್ರೆಯಲ್ಲಿ ಕೃತಕ ಆಮ್ಲಜನಕವನ್ನು ಈಗಾಗಲೇ ಉತ್ಪಾದಿಸುತ್ತಿದ್ದು, 6 ಕೆಎಲ್ ಸಾಮಾರ್ಥ್ಯದ ಲಿಕ್ವಿಡ್ ಆಕ್ಸಿಜನ್ ಘಟಕವನ್ನು ಆಸ್ಪತ್ರೆ ಒಳಗೊಂಡಿದೆ. ಆಸ್ಪತ್ರೆಗೆ ಬರುವ ಕೋವಿಡ್ ಶಂಕಿತರನ್ನು ಪತ್ತೆ ಹಚ್ಚಿ ಅಗತ್ಯ ಚಿಕಿತ್ಸೆ ನೀಡಲು ಕ್ರಮವಹಿಸಲಾಗುವುದು ಎಂದು ನುಡಿದರು.

ಆತಂಕ, ಆದರೆ ಮೊದಲ ಅಲೆಯಷ್ಟೇ ತೀವ್ರತೆಯಿರೋಲ್ಲ ಎಂಬ ನಂಬಿಕೆ: ಕೋವಿಡ್ ರೂಪಾಂತರಿ ಸೋಂಕು ಆವರಿಸುತ್ತಿರುವ ಕುರಿತು ಜಿಲ್ಲೆಯ ಜನತೆಯಲ್ಲಿ ಒಂದು ರೀತಿಯ ಆತಂಕ ಮನೆ ಮಾಡಿದ್ದರೂ, ಮೊದಲ ಅಲೆಯಷ್ಟು ತೀವ್ರತೆ ಇರೋಲ್ಲ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸುತ್ತಿರುವುದು ಕಂಡುಬ0ದಿದೆ.

Pragati TV Social Connect for more latest u

Leave a Reply

Your email address will not be published. Required fields are marked *