“ತಲಾಖ್-ಎ-ಹಸನ್ ಪದ್ಧತಿ ನಾಗರಿಕ ಸಮಾಜದಲ್ಲಿ ಸಮ್ಮತವೇ? — ಸುಪ್ರೀಂ ಕೋರ್ಟ್ ಗಂಭೀರ ಪ್ರಶ್ನೆ”.

 “ತಲಾಖ್-ಎ-ಹಸನ್ ಪದ್ಧತಿ ನಾಗರಿಕ ಸಮಾಜದಲ್ಲಿ ಸಮ್ಮತವೇ? — ಸುಪ್ರೀಂ ಕೋರ್ಟ್ ಗಂಭೀರ ಪ್ರಶ್ನೆ”.

ನವದೆಹಲಿ : ಮುಸ್ಲಿಂಸಮುದಾಯದಲ್ಲಿ ಸಾಮಾನ್ಯವಾಗಿ ಕಂಡುಬರುವ ವಿಚ್ಛೇದನ ಪ್ರಕ್ರಿಯೆಯಾದ ತಲಾಖ್-ಎ-ಹಸನ್ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನಾಗರಿಕ ಸಮಾಜದಲ್ಲಿ ಈ ಪದ್ಧತಿಗೆ ಅವಕಾಶ ನೀಡಬಹುದೇ ಎಂದು ನ್ಯಾಯಾಲಯ ಪ್ರಶ್ನಿಸಿದೆ. ಪತಿಯ ಉಪಸ್ಥಿತಿಯಿಲ್ಲದೆ ವಕೀಲರ ಮೂಲಕ ವಿಚ್ಛೇದನ ಪ್ರಕ್ರಿಯೆಗಳನ್ನು ಒಳಗೊಂಡ ಪ್ರಕರಣವನ್ನು ಸುಪ್ರೀಂ ಕೋರ್ಟ್ ಪ್ರಸ್ತುತ ವಿಚಾರಣೆ ನಡೆಸುತ್ತಿದೆ.

ಮುಸ್ಲಿಂ ಪುರುಷರು ತ್ರಿವಳಿ ತಲಾಖ್ ಮೂಲಕ ತಮ್ಮ ಪತ್ನಿಯರಿಗೆ ವಿಚ್ಛೇದನ ನೀಡುವ ಪದ್ಧತಿಯನ್ನು ಸುಪ್ರೀಂ ಕೋರ್ಟ್ ಬುಧವಾರ ಪ್ರಶ್ನಿಸಿದೆ. ವಿಚ್ಛೇದನ ನೋಟಿಸ್‌ನಲ್ಲಿ ಪತಿಯ ಸಹಿ ಇಲ್ಲದಿದ್ದರೆ, ಅದನ್ನು ಮಾನ್ಯ ವಿಚ್ಛೇದನವೆಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಮುಸ್ಲಿಂ ಪುರುಷರು ತ್ರಿವಳಿ ತಲಾಖ್ ಉಚ್ಚರಿಸುವ ಏಕಪಕ್ಷೀಯ ಹಕ್ಕನ್ನು ಪ್ರಶ್ನಿಸಿ ಪತ್ರಕರ್ತರೊಬ್ಬರು ಅರ್ಜಿ ಸಲ್ಲಿಸಿದ್ದರು. ಈ ವಿಚ್ಛೇದನ ಪದ್ಧತಿಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಪತ್ರಕರ್ತೆ ಬೆನಜೀರ್ ಹೀನಾ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಹೂಡಿದ್ದರು.ಈ ಪದ್ಧತಿಯು ತರ್ಕಬದ್ಧವಲ್ಲದ, ಅನಿಯಂತ್ರಿತ ಮತ್ತು ಸಂವಿಧಾನದ 14, 15, 21 ಮತ್ತು 25 ನೇ ವಿಧಿಗಳನ್ನು ಉಲ್ಲಂಘಿಸುತ್ತದೆ ಎಂದು ಹೀನಾ ವಾದಿಸಿದ್ದರು.

ನ್ಯಾಯಮೂರ್ತಿಗಳಾದ ಉಜ್ವಲ್ ಭೂಯಾನ್ ಮತ್ತು ಎನ್.ಕೆ. ಸಿಂಗ್ ಅವರನ್ನು ಒಳಗೊಂಡ ಪೀಠವು, ಒಂದು ವಿಷಯವು ಒಟ್ಟಾರೆಯಾಗಿ ಸಮಾಜದ ಮೇಲೆ ಪರಿಣಾಮ ಬೀರಿದಾಗ, ನ್ಯಾಯಾಲಯವು ಮಧ್ಯಪ್ರವೇಶಿಸಬೇಕಾಗಬಹುದು ಎಂದು ಹೇಳಿದೆ.

ತಲಾಖ್ಹಸನ್ ಎಂದರೇನು? ತಲಾಖ್​-ಎ- ಹಸನ್ ಎಂದರೆ ಪತಿ ತನ್ನ ಪತ್ನಿಗೆ ಮೂರು ಬಾರಿ ವಿಚ್ಛೇದನ ನೀಡುತ್ತಾನೆ. ಮೂರು ತಿಂಗಳಲ್ಲಿ ಮೂರು ಬಾರಿ ವಿಚ್ಛೇದನ ನೀಡುತ್ತಾನೆ. ಮೊದಲ ವಿಚ್ಛೇದನ: ಮಹಿಳೆ ಮುಟ್ಟಿನ ನಂತರ ಪತಿ ಲೈಂಗಿಕ ಸಂಭೋಗವನ್ನು ಹೊಂದಿರದಿದ್ದರೆ, ಪತಿ ಮೊದಲ ವಿಚ್ಛೇದನವನ್ನು ನೀಡುತ್ತಾನೆ.

ಎರಡನೇ ವಿಚ್ಛೇದನ: ಅದಾದ ನಂತರ, ಮುಂದಿನ ಮುಟ್ಟು ಬಂದು ಆಕೆ ಶುದ್ಧಳಾದಾಗ, ಅವನು ಈ ಎರಡನೇ ತುಹಾರ್‌ನಲ್ಲಿ ಎರಡನೇ ವಿಚ್ಛೇದನವನ್ನು ನೀಡುತ್ತಾನೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *