ಸೌದೆ ಒಲೆ ಬಳಕೆ ಅಪಾಯಕರವೇ? ವೈದ್ಯರಿಂದ ಎಚ್ಚರಿಕೆ.

ಸೌದೆ ಒಲೆ ಬಳಕೆ ಅಪಾಯಕರವೇ? ವೈದ್ಯರಿಂದ ಎಚ್ಚರಿಕೆ.

ಸೌದೆ ಹೊಗೆ ಕ್ಯಾನ್ಸರ್ ಸೇರಿದಂತೆ ಹಲವು ರೋಗಗಳಿಗೆ ಕಾರಣವಾಗಬಹುದು.

ಬೆಂಗಳೂರು : ಎಲ್​​ಪಿಜಿ ಸಿಲಿಂಡರ್​​ಗಳ ಅಭಾವದಿಂದ ಜನರೀಗ ಮತ್ತೆ ಸಾಂಪ್ರದಾಯಿಕ ಸೌದೆ ಒಲೆಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ ವೈದ್ಯರು ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಕ್ಯಾನ್ಸರ್, ಟಿಬಿ, ಅಸ್ತಮಾ ಸೇರಿದಂತೆ ನೂರಾರು ರೋಗಗಳಿಗೆ ಇವೇ ತವರುಮನೆ ಎಂದು ಎಚ್ಚರಿಸಿದ್ದಾರೆ. ಸೌದೆಯಿಂದ ಹೊರ ಬರುವ ಹೊಗೆ ಲಂಗ್ಸ್ ಕ್ಯಾನ್ಸರ್, ಟಿಬಿ, ಬ್ರೆಸ್ಟ್ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್​​ಗೆ ಕಾರಣವಾಗುತ್ತದೆ.

ಈ ಹೊಗೆಯಲ್ಲಿ ಬೆಂಜೀನ್ ಮತ್ತು ಪಾಲಿ ಸೈಕ್ಲಿಕ್ ಆರೋಮ್ಯಾಟಿಕ್ ಹೈಡ್ರೋಕಾರ್ಬನ್​​ಗಳು ಹೊರ ಹೊಮ್ಮುತ್ತವೆ ಎಂದು ತಿಳಿಸಿದ್ದಾರೆ. ಆದರೆ ಇವು ಅಲ್ಪ ಕಾಲದಲ್ಲಿ ದೊಡ್ಡ ಪರಿಣಾಮ ಬೀರಲ್ಲ. ಬದಲಾಗಿ ದೀರ್ಘ ಕಾಲದಲ್ಲಿ ಸೌದೆ ಒಲೆಗಳ ಬಳಕೆ ಮಾರಕ ರೋಗಗಳಿಗೆ ಕಾರಣವಾಗಬಹುದು. ಹೀಗಾಗಿ ಅಡುಗೆ ಮಾಡಲು ಸಾಧ್ಯವಾದಷ್ಟು ಒಣ ಸೌದೆ ಬಳಸಿ, ಹಸಿ ಸೌದೆಗಳ ಬಳಕೆ ಬೇಡ. ಇದರಿಂದ ಸಂಭಾವ್ಯ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಸಲಹೆ ನೀಡಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *