ಚರ್ಚ್ ಸ್ಟ್ರೀಟ್ ನ ಐಷಾರಾಮಿ ಬ್ಯಾಸ್ಟಿಯನ್ ಪಬ್ ಪರಿಶೀಲನೆ.
ಬೆಂಗಳೂರು : ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಒಡೆತನದ ಐಷಾರಾಮಿ ಪಬ್ ಮೇಲೆ ಬೆಂಗಳೂರಿನಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿರುವ ಜನಪ್ರಿಯ ಬ್ಯಾಸ್ಟಿಯನ್ ಪಬ್ ಮೇಲೆ ಐಟಿ ದಾಳಿ ನಡೆದಿದೆ. ಈ ದಾಳಿಯ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.
ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ಈಗಾಗಲೇ ಹಲವು ಪ್ರಕರಣಗಳಲ್ಲಿ ವಿಚಾರಣೆಯನ್ನು ಎದುರಿಸುತ್ತಿದ್ದಾರೆ. ಈ ಐಟಿ ದಾಳಿಯು ಆ ಹಿಂದಿನ ಪ್ರಕರಣಗಳ ಮುಂದುವರಿದ ಭಾಗವೇ ಅಥವಾ ಪಬ್‌ಗೆ ಸಂಬಂಧಿಸಿದ ಇತರ ವಿವಾದಗಳಿಗೆ ಸಂಬಂಧಿಸಿದ್ದೇ ಎಂಬ ಪ್ರಶ್ನೆಗಳು ಮೂಡಿವೆ. ಬ್ಯಾಸ್ಟಿಯನ್ ಪಬ್ ಬೆಂಗಳೂರಿನ ಅತ್ಯಂತ ದುಬಾರಿ ಪಬ್‌ಗಳಲ್ಲಿ ಒಂದಾಗಿದೆ. ಐಟಿ ಅಧಿಕಾರಿಗಳು ಸದ್ಯ ಪಬ್‌ನಲ್ಲಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
For More Updates Join our WhatsApp Group :




