ಸಿವಿಲ್ ಪ್ರಕರಣ ಇತ್ಯರ್ಥ ಪಡಿಸುವುದಕ್ಕೆ ಇದು ಸಕಾಲ..!

ತುಮಕೂರು : ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ತುಮಕೂರು ಇವರ ಸಹಯೋಗದಲ್ಲಿ ಸರ್ವರಿಗೂ ನ್ಯಾಯ ಸಿಗುವ ದೃಷ್ಟಿಯಿಂದ ಲೋಕ್ ಅದಾಲತ್ ನಡೆಸುತ್ತದೆ. ಅದೇ ರೀತಿ ಫೆಬ್ರವರಿ 11ನೇ ತಾರೀಕು ಎಲ್ಲಾ ರೀತಿಯ ವ್ಯಾಜ್ಯ ಪೂರ್ವ ಹಾಗೂ ಬಾಕಿ ಇರುವ ಪ್ರಕರಣಗಳ ತ್ವರಿತ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗಿದೆ.

ವ್ಯಾಜ್ಯ ಪೂರ್ವ ಪ್ರಕರಣಗಳಾದ ಚೆಕ್ಕು ಅಮಾನ್ಯ, ಬ್ಯಾಂಕ್ ವಸೂಲಾತಿ, ಕಾರ್ಮಿಕ ವಿವಾದಗಳು, ಕಾರ್ಮಿಕರ ವೇತನ, ವಿದ್ಯುತ್ ಹಾಗೂ ನೀರಿನ ಶುಲ್ಕ ವ್ಯಾಜ್ಯ ಸೇರಿದಂತೆ ಹಲವು ವೈವಾಹಿಕ ಹಾಗೂ ಸಿವಿಲ್ ಪ್ರಕರಣಗಳನ್ನ ಇತ್ಯರ್ಥ ಪಡಿಸಲಾಗುತ್ತದೆ. ನೊಂದಣಿ ಮೂಲಕ ರಿಜಿಸ್ಟರ್ ಮಾಡಿಕೊಂಡು ಪ್ರಕರಣದ ಶೀಘ್ರ ಇತ್ಯರ್ಥ ಮಾಡಿಕೊಳ್ಳಬಹುದಾಗಿದೆ ಎಂದು ನ್ಯಾಯಾಧಿಶರಾದ ಕೆಬಿ ಗೀತಾ ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶೆ ನೂರುನ್ನಿಸಾ ತಿಳಿಸಿದ್ದಾರೆ.

Pragati TV Social Connect for more latest u

Leave a Reply

Your email address will not be published. Required fields are marked *