IT Returns : ಕೊನೆಯ ಕ್ಷಣದ ಸರ್ಕಸ್

ಇದು ಜುಲೈ ತಿಂಗಳು ಪ್ರತಿ ವರ್ಷದ ಮಾರ್ಚ್ 31 ರ ನಂತರ 120 ದಿನಗಳ ಒಳಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದು ಆದಾಯ ತೆರಿಗೆ ಕಾಯ್ದೆ 1961 ರ ಪ್ರಕಾರ ನಿಯಮ. ಇದಕ್ಕಾಗಿ ವರುಷಗಳ ಹಿಂದೆ ನಾವು ಪ್ರತಿಯೊಂದನ್ನು ಪೇಪರ್ ರಿಟರ್ನ್ ಮೂಲಕ ಸಲ್ಲಕೆ ಮಾಡುತ್ತಿದ್ದೆವು ಮತ್ತು ಜುಲೈ 31ರ ನಂತರವೂ ಬಡ್ದಿ ಸಮೇತ ನಾವು ಆದಾಯ ತೆರಿಗೆ ವಿವರಗಳನ್ನು ಸಲ್ಲಿಸುತ್ತಿದ್ದ ಕಾಲವದು. ಆಗಲೂ ಆದಾಯ ತೆರಿಗೆ 271ಎಫ್ ಅಡಿಯಲ್ಲಿ ಲೇಟ್ ಫೀ ಇದ್ದರೂ ಇಲಾಖೆ ಅಷ್ಟಾಗಿ ಕಠಿಣ ಕ್ರಮ ಕೈಗೊಳ್ಳೂತಿದ್ದದ್ದು ತೀರಾ ಕೆಲವು ಕೇಸುಗಳಲ್ಲಿ ಮಾತ್ರ. ಆದರೆ ಈಗ ಕಾಲ  ಬದಲಾಗಿದೆ ಎಲ್ಲವೂ ಆನ್ ಲೈನ್, ಪ್ರತಿ ಆದಾಯ ತೆರಿಗೆ ಪಾವತಿದಾರ ತನ್ನ ಮನೆಯಲ್ಲಿ ಕುಳಿತುಕೊಂಡು ತನ್ನ ಲ್ಯಾಪ್ ಟಾಪ್ ನಿಂದ ಕ್ಷಣಾರ್ಧದಲ್ಲಿ ಫೈಲ್ ಮಾಡಬಹುದು ಆದರೆ ಸಮಸ್ಯೆ ಇರುವುದೇ ಇಲ್ಲಿ.

ಈಗಾಗಲೇ ಪ್ರತಿ ವರ್ಷವೂ ಆದಾಯ ತೆರಿಗೆ ಪಾವತಿದಾರರ ಸಂಖ್ಯೆ ಏರುತ್ತಿದ್ದು ಪ್ರತಿಯೊಬ್ಬರು ಜುಲೈನಲ್ಲಿ ಹೆಚ್ಚು ರಿಟರ್ನ್್ಸ ಸಲ್ಲಿಸುತ್ತಾರೆ, ಅದರಲ್ಲೂ ಜುಲೈ ಕೊನೆಯ ವಾರವಂತೂ ಕೋಟ್ಯಂತರ ರಿಟರ್ನ್್ಸ ಸಲ್ಲಿಕೆಯಾಗುತ್ತವೆ.  ನಮ್ಮ ಮನಸ್ಥಿತಿ ಹೇಗಿದೆ ಅಂದರೆ ಪ್ರತಿ ವರ್ಷವೂ ಕೊನೆಯ ದಿನದ ಕೊನೆಯ ಕ್ಷಣದ ವರೆಗೂ ಕಾಯುವುದು. ಇದರಿಂದ ಈಗಾಗಲೆ ಆದಾಯ ತೆರಿಗೆ ಸರ್ವರ್ ನಿಧಾನಗತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ತೆರಿಗೆ ಸಲಹೆಗಾರರು, ಲೆಕ್ಕ ಪರಿಶೋಧಕರ ನಿದ್ರೆಗೆಡಿಸಿದೆ.

ಸಮಯ ಹೆಚ್ಚಿಸಲು ಕಾರಣ: ಪ್ರತಿ ಹಣಕಾಸು ವರ್ಷ ಕಳೆದ ನಂತರ ಪ್ರತಿಯೊಬ್ಬರ ಆದಾಯ ತೆರಿಗೆ ಖಾತೆಗೆ ಟಿಡಿಎಸ್ ಹಣ ಬರಬೇಕಾದರೆ ಅದು ಮೇ 31ರ ನಂತರವೇ, ಕಾರಣ ಕೊನೆಯ ತ್ರೆöÊ ಮಾಸಿಕದ ಟಿಡಿಎಸ್ ರಿಟರ್ನ್ ಸಲ್ಲಿಕೆಗೆ ಸಮಯ ಇರುವುದರಿಂದ ಅನೇಕ ಸಂಸ್ಥಗಳು ಕೊನೆಯ ಹಂತದಲ್ಲೂ ಬೇರೆ ಬೇರೆ ಕಾರಣಗಳಿಗಾಗಿ ತಮ್ಮ ಟಿಡಿಎಸ್ ರಿಟರ್ನ್ ಸಲ್ಲಿಸುತ್ತಾರೆ. ಇದಾದ ನಂತರ ಪ್ರತಿಯೊಬ್ಬರ ಟಿಡಿಸ್ ಮೊತ್ತ ಫಾರ್ಮ್ 26ಎ ನಲ್ಲಿ ಬಂದಾಗ ಮಾತ್ರ ನಾವು ಫೈಲ್ ಮಾಡಿದಾಗ ಟ್ಯಾಕ್ಸ್ ಅಡ್ಜಸ್ಟ್ ಆಗಲು ಸಾಧ್ಯ. ಇಲ್ಲವಾದಲ್ಲಿ ರಿಟರ್ನ್ ಇನ್ ವ್ಯಾಲಿಡ್ ಆಗುವ ಸಾಧ್ಯತೆ ಇರುತ್ತದೆ ಅಧವಾ ಮುಂದಿನ ದಿನಗಳಲ್ಲಿ ಡಿಮ್ಯಾಂಡ್ ನೋಟೀಸ್ ಬರುವ ಸಾಧ್ಯತೆ ಇರುತ್ತದೆ, ಹಾಗಾಗಿ ನಿಮ್ಮ ಯಾವುದೇ ವರಮಾನವಿದ್ದರೂ ಸಹ ಎಲ್ಲವನ್ನು ಕೂಲಂಕುಶವಾಗಿ ಪರಿಶೀಲಿಸಿ ರಿಟರ್ನ್ ಸಲ್ಲಿಸುವುದು ಖಂಡಿತ ಅವಶ್ಯ.

ಪ್ರತಿಯೊಬ್ಬ ಬ್ಯುಸಿನೆಸ್ ಮೆನ್, ಪ್ರೊಫೆಶನಲ್, ಕಾಂಟ್ರಾಕ್ಟರ್, ಪಿಂಚಣಿದಾರರು, ವೇತನದಾರರು ಅವರ ವ್ಯಾಪಾರ ವ್ಯವಹಾರ, ಮಾಸಿಕ ವರಮಾನ ಅದಕ್ಕೆ ಸಂಬAಧಿಸಿದೆ ಬ್ಯಾಂಕ್ ಖಾತೆ ವಿವರ ಚೆಕ್ ಮಾಡಿಕೊಳುವುದು ಅವಶ್ಯ, ಆದರೆ ಕೆಲವು ಬ್ಯಾಂಕುಗಳಲ್ಲಿ ಬ್ಯಾಂಕ್ ಸ್ಟೇಟ್ ಮೆಂಟ್ ಕೊಡಲು  ಕನಿಷ್ಟ ಪಿಡಿಎಫ್ ರೂಪದಲ್ಲಿ ಕೊಡಲೂ ಪ್ರತಿ ಪುಟಕ್ಕೆ ಹಣ ಪಾವತಿಸಬೇಕು, ಬ್ಯಾಂಕ್ ಖಾತೆ ವಿವರ ಬೇಕಾ? ಅಂತ ಕೇಳುವವರೂ ನಮ್ಮ ನಡುವೆ ಇದ್ದಾರೆ.

ಇದರ ಜೊತೆಗೆ ಇತ್ತೀಚಿನ ದಿನಗಳಲ್ಲಿ ಶೇರ್ ಮಾರ್ಕೆಟ್ಟಿನಲ್ಲಿ ಹೂಡುವವರು, ಕ್ರಿಪ್ಟೋ ಕರೆನ್ಸಿಯಲ್ಲಿ, ಮ್ಯೂಟ್ಯುಯಲ್ ಫಂಡ್ಸ್ ಇನ್ವೆಸ್ಟ್ ಮಾಡುವವರು ಹೆಚ್ಚಾಗಿದ್ದು ಅದೆಲ್ಲವನ್ನು ಆನುಯಲ್ ಇನ್ಫರ್ಮೇಶನ್ ಸ್ಟೇಟ್ಮೆಂಟಿನ್ಲಿ ಒಮ್ಮೆ ಚೆಕ್ ಮಾಡಿಕೊಂಡು ಫೈಲ್ ಮಾಡುವುದು ಕೂಡ ಅತೀ ಅಗತ್ಯ. ಇನ್ನು ಕ್ಯಾಶ್ ಲೆಸ್ ವ್ಯವಹಾರ ಆರಂಭವಾದಾಗಿನಿAದ ನಾವು ಕೊಳ್ಳುವ 5 ರೂಪಾಯಿ ಚಾಕೊಲೇಟ್ ಮತ್ತು ಲಕ್ಷಾಂತರ ರೂಪಾಯಿ ವ್ಯವಹಾರವೂ ಸಹ ಬ್ಯಾಂಕ್ ಮೂಲಕ ದಾಖಲಾಗುವುದರಿಂದ ಪ್ರತಿಯೊಂದನ್ನು ಚೆಕ್ ಮಾಡಿ ಫೈಲ್ ಮಾಡಲು ಅದಕ್ಕೆ ಅದರದ್ದೇ ಆದ ಸಮಯ ಬೇಕೇ ಬೇಕಾಗುತ್ತದೆ. ಆದರೆ ಇರುವ 120 ದಿನದಲ್ಲಿ ಮೇ 31 ರ ವರೆಗೆ ಟಿಡಿಎಸ್ ನಿರೀಕ್ಷೆ ಮಾಡುವವರು ಫೈಲ್ ಮಾಡಲು ಆಗದು, ಉಳಿದವರು ತ್ವರಿತವಾಗಿ ಫೈಲ್ ಮಾಡುವುದಿಲ್ಲ ಹಾಗಾಗಿ ಎಲ್ಲರೂ ಜುಲೈ 15 ನಂತರ ಫೈಲ್ ಮಾಡಲು ಶುರುಮಾಡುತ್ತಾರೆ. ಈಗಾಗಲೇ ಆದಾಯ ತೆರಿಗೆ ಇಲಾಖೆ ಘೋಷಿಸಿರುವಂತೆ 4ಕೋಟಿಗೂ ಹೆಚ್ಚು ಐಟಿ ರಿಟರ್ನ್ ಸಲ್ಲಿಕೆಯಾಗಿದ್ದು ಇನ್ನುಳಿದದ್ದು ಬೆರಳೆಣಿಕೆಯ ದಿನ, ಸರ್ವರ್ ಸಮಸ್ಯೆ ತೀವ್ರವಾಗಿದ್ದು ಆಧಾರ್  ಓಟಿಪಿ ಬಂದರೂ ವೆರಿಫೈ ಸರಿಯಾಗಿ ಆಗುತ್ತಿಲ್ಲ, ಇಂತಿಪ್ಪ ಸಮಯದಲ್ಲಿ ಸರ್ಕಾರ ಆದಾಯ ತೆರಿಗೆ ವಿವರಗಳನ್ನು ಸಲ್ಲಿಸಲು ಕೊನೆಯ ದಿನವನ್ನು ವಿಸ್ತರಿಸದಿದ್ದರೆ ಅನಿವಾರ್ಯವಾಗಿ ಲೇಟ್ ಪೀ ಕಟ್ಟುವುದರ ಮೂಲಕವೆ ಸಲ್ಲಿಕೆಯಾಗಬೇಕಾದ ಅನಿವಾರ್ಯತೆ. ಹಾಗಾಗಿ ಹಣಕಾಸು ಸಚಿವಾಲಯ ಏನು ಮಾಡುತ್ತದೆ, ಸಿಬಿಡಿಟಿ ತೆರಿಗೆದಾರರ ಮತ್ತು ತೆರಿಗೆ ತಜ್ಣರ ಸಮಸ್ಯೆಯನ್ನು ಆಲಿಸಿ ಮುಂದೂಡುತ್ತಾ? ಕಾದು ನೋಡಬೇಕಿದೆ.

ಎಚ್ ಆರ್. ಪ್ರಭಾಕರ್.

ತೆರಿಗೆ & ಆರ್ಥಿಕ ತಜ್ಣ

96635 58316

Leave a Reply

Your email address will not be published. Required fields are marked *