ನವದೆಹಲಿ : ಭಾರತದ ಹಿರಿಯ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರನ್ನು ‘ವಿಶ್ವದ ಎಂಟನೇ ಅದ್ಭುತ’ ಎಂದು ಬಣ್ಣಿಸಿದ್ದಾರೆ. ಇದರೊಂದಿಗೆ ಜಸ್ಪ್ರೀತ್ ಬುಮ್ರಾ ಅವರನ್ನು ‘ರಾಷ್ಟ್ರೀಯ ಸಂಪತ್ತು’ ಎಂದು ಘೋಷಿಸುವ ಮನವಿಗೆ ಸಹಿ ಹಾಕುವ ಇಚ್ಛೆಯನ್ನು ಅವರು ವ್ಯಕ್ತಪಡಿಸಿದ್ದಾರೆ.
ಅವರು (ಬುಮ್ರಾ) ನಮಗಾಗಿ ಆಡುತ್ತಿರುವುದು, ಹೀಗಾಗಿ ನಾವು (ಭಾರತ) ಅದೃಷ್ಟವಂತರು ಎಂದು ಹೇಳಿದ್ದಾರೆ. ಟೀಂ ಇಂಡಿಯಾದ ಗೆಲುವಿನ ಪರೇಡ್ ಮುಗಿದ ಬಳಿಕ ವಾಂಖೆಡೆ ಸ್ಟೇಡಿಯಂನಲ್ಲಿ ವಿರಾಟ್ ಈ ವಿಷಯಗಳನ್ನು ಹೇಳಿದ್ದಾರೆ. ಭಾರತದ T20 ವಿಶ್ವಕಪ್ 2024 ಗೆಲುವಿನಲ್ಲಿ ಜಸ್ಪ್ರೀತ್ ಬುಮ್ರಾ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಅವರು ಗುಣಗಾನ ಮಾಡಿದರು.
ಬುಮ್ರಾ ಅದ್ಭುತ ಪ್ರದರ್ಶನ ನೀಡಿದರು : ಬುಮ್ರಾ 8.26 ರ ಸರಾಸರಿಯಲ್ಲಿ ರನ್ ನೀಡಿದರು. ಈ ವಿಶ್ವಕಪ್‌ನಲ್ಲಿ ಮೂರನೇ ಅತಿ ಹೆಚ್ಚು ವಿಕೆಟ್ (15) ಪಡೆದ ಬೌಲರ್ ಸಹ ಎನಿಸಿಕೊಂಡರು. ಬುಮ್ರಾ ಅವರು ಸ್ಪರ್ಧೆ ಉದ್ದಕ್ಕೂ ತಮ್ಮ ಅಸಾಧಾರಣ ಪ್ರದರ್ಶನಕ್ಕಾಗಿ ‘ಪ್ಲೇಯರ್ ಆಫ್ ದಿ ಟೂರ್ನಮೆಂಟ್’ ಪ್ರಶಸ್ತಿಗೂ ಭಾಜನರಾದರು.
ಈ ಬಗ್ಗೆ ವಿರಾಟ್ ಕೊಹ್ಲಿಯೊಂದಿಗೆ ಮಾತನಾಡುವಾಗ, ಜಸ್ಪ್ರೀತ್ ಬುಮ್ರಾ ಅವರನ್ನು ವಿಶ್ವದ ಎಂಟನೇ ಅದ್ಭುತವನ್ನಾಗಿ ಮಾಡುವ ಅರ್ಜಿಗೆ ಸಹಿ ಹಾಕಲು ನೀವು ಸಿದ್ಧರಿದ್ದೀರಾ? ಎಂದು ಆತಿಥೇಯ ಗೌರವ್ ಕಪೂರ್ ಕೇಳಿದಾಗ, ಕೊಹ್ಲಿ ‘ಹೌದು’ ಎಂದಿದ್ದು, ಜಸ್ಪ್ರೀತ್ ಬುಮ್ರಾ ಅವರ ಅರ್ಜಿಗೆ ನಾನು ಸಹಿ ಹಾಕುತ್ತೇನೆ ಎಂದು ಹೇಳಿದ್ದಾರೆ