ಪವಿತ್ರ ರಾಜಕಾರಣವನ್ನು ಜೆಡಿಯು ನಂಬಿದೆ: ಮಹಿಮಾ ಪಟೇಲ್

ತುಮಕೂರು: ಭಾಷೆ ನಮ್ಮ ಆಲೋಚನೆಗಳನ್ನು ವಿಸ್ತಾರಗೊಳಿಸುತ್ತದೆ. ನಾವು ಹೆಚ್ಚು ಹೆಚ್ಚು ಭಾಷೆಗಳನ್ನು ಕಲಿತಷ್ಟು ನಮ್ಮ ಜ್ಞಾನ ವೃದ್ಧಿಗೆ ಸಹಕಾರಿಯಾಗಲಿದೆ ಎಂದು ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಜ.ಪಟೇಲ್ ತಿಳಿಸಿದರು.

ನಗರದ ಕನ್ನಡ ಭವನದಲ್ಲಿ ಜೆಡಿಯು-ಕರ್ನಾಟಕ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜೋತ್ಸವ, ರಾಜ್ಯಮಟ್ಟದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಕನಕ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವು ಮಾತನಾಡುವ ಸಂದರ್ಭದಲ್ಲಿ ಹೆಚ್ಚು ಕ್ರಿಯಾತ್ಮಕ(ಧನಾತ್ಮಕ)ಪದಗಳನ್ನು ಬಳಕೆ ಮಾಡಿದಷ್ಟು ಅದು ಕೇಳುಗರ ಮೇಲೆ ಸಕಾರಾತ್ಮಕ ಪರಿಣಾಮ ಬೀರಬಲ್ಲದು ಎಂದರು.

ಯುವಕ

ಭಾಷೆ ನಿಂತ ನೀರಲ್ಲ. ಅದು ನಿರಂತರವಾಗಿ ಬದಲಾಣೆ ಕಾಣುತ್ತಿರುತ್ತದೆ. ನಾವು ಕನ್ನಡದಲ್ಲಿ ಆಲೋಚಿಸಿ, ಹಿಂದಿಗೆ ತರ್ಜುಮೆ ಮಾಡಿ ಮಾತನಾಡಲು ಸಾಧ್ಯವಿಲ್ಲ. ಹಾಗಾಗಿ ನಾವು ಯಾವ ಭಾಷೆಯನ್ನು ಮಾತನಾಡುತ್ತೇವೆಯೋ, ಅದೇ ಭಾಷೆಯಲ್ಲಿ ಆಲೋಚಿಸಿದರೆ ಹೆಚ್ಚು ಪರಿಣಾಮಕಾರಿಯಾಗಿ ಪ್ರಸೆಂಟ್ ಮಾಡಲು ಸಾಧ್ಯ ಹಾಗೂ ಯಾವ ಭಾಷೆಯ ಬಗ್ಗೆಯೂ ದ್ವೇಷ ಬೆಳೆಸಿಕೊಳ್ಳದೆ, ನಮ್ಮ ಭಾಷೆಯನ್ನು ಬೆಳೆಸಲು ನಾವೆಲ್ಲರೂ ಮುಂದಾಗಬೇಕೆoದು ಅವರು ತಿಳಿಸಿದರು.

ರಾಜಕಾರಣ ಇಂದು ದಂಧೆಯಾಗಿ ಮಾರ್ಪಟ್ಟಿದೆ. ಇದನ್ನು ಸಂಪೂರ್ಣವಾಗಿ ಬದಲಾಯಿಸುವ ಪ್ರಯತ್ನ ಆಗಬೇಕಿದೆ. ಆಗ ಮಾತ್ರ ಯುವಜನರಿಗೆ ರಾಜಕಾರಣದಲ್ಲಿ ನಂಬಿಕೆ ಬರಲು ಸಾಧ್ಯ. ಈ ನಿಟ್ಟಿನಲ್ಲಿ ಜೆಡಿಯು ರಾಜಕಾರಣವೆಂಬುದು ಪವಿತ್ರ, ಅದು ಸೇವೆಗೆ ಇರುವ ಅವಕಾಶ ಎಂದು ನಂಬಿ, ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಇಂದಲ್ಲ ನಾಳೆ ಜನರು ಇದನ್ನು ಅರ್ಥ ಮಾಡಿಕೊಂಡು ನಮ್ಮ ಕಡೆ ಬರಲಿದ್ದಾರೆ ಎಂಬ ವಿಶ್ವಾಸವನ್ನು ಮಹಿಮಾ ಜ.ಪಟೇಲ್ ವ್ಯಕ್ತಪಡಿಸಿದರು.

ಹಿರಿಯ ವಿದ್ವಾಂಸ ಡಾ.ಹೆಚ್.ವಿ.ವೀರಭದ್ರಯ್ಯ ಮಾತನಾಡಿ, ಕನ್ನಡ ಪುರಾತನದಿಂದ ಇಂದಿನವರೆಗೂ ಬೆಳೆದಿರುವುದು ತಾಯಂದಿ0ದಲೇ ಹೆಚ್ಚು. ಅವರು ಬೀಸುವಾಗು, ಕುಟ್ಟವಾಗ, ಕಳೆ ತೆಗೆಯುವಾಗ, ನಾಟಿ ಮಾಡುವಾಗ ಹಾಡಿದ ಜನಪದ ತಲೆಮಾರಿ ನಿಂದ ತಲೆಮಾರಿಗೆ ಹರಿದುಕೊಂಡು ಬಂದು ಸಮೃದ್ಧ ಭಾಷೆಯಾಗಿ ರೂಪಗೊಂಡಿದೆ. ಶಾಲಾ, ಕಾಲೇಜುಗಳಲ್ಲಿ ಕಲಿಸುವ ಶಿಷ್ಟ ಭಾಷೆಗಿಂತ, ನಮ್ಮ ಜನಪದರ ಬಾಯಲ್ಲಿನ ಕನ್ನಡ ಭಾಷೆ ಉತ್ಕೃಷ್ಟ. ಜನಪದರು ತಮ್ಮ ಹಾಡುಗಳ ಮೂಲಕ ಬದುಕನ್ನು ಕಟ್ಟುವುದರ ಜೊತೆಗೆ, ನಾಡನ್ನು ಕಟ್ಟಿದ್ದಾರೆ ಎಂದರು.

ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿದ್ದ ಹಿರೇಮಠದ ಡಾ.ಶ್ರೀಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ರಾಜಕಾರಣದಲ್ಲಿ ಜನನಾಯಕರಿಗಿಂತ ಧನ ನಾಯಕರೇ ಹೆಚ್ಚಾಗಿದ್ದಾರೆ. ಹಣವಿಲ್ಲದೆ ಒಂದು ಗ್ರಾ.ಪಂ.ಚುನಾವಣೆಯನ್ನು ಗೆಲ್ಲಲ್ಲು ಸಾಧ್ಯವಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ಸಾತ್ವಿಕರಿಗೆ ರಾಜಕಾರಣ ಸಲ್ಲದು ಎಂಬ ರೀತಿಯಲ್ಲಿ ವ್ಯವಸ್ಥೆ ರೂಪುಗೊಂಡಿದೆ. ಇಂದಿನ ವ್ಯವಸ್ಥೆಗೆ ಮಾಧ್ಯಮಗಳು ಮತ್ತು ಮಠಗಳೂ ಕಾರಣವಾಗಿವೆ. ಯುವಜನರು ಕೆಟ್ಟದ್ದರ ವಿರುದ್ಧ ಹೋರಾಟದ ಪ್ರವೃತ್ತಿ ಬೆಳೆಸಿಕೊಂಡರೆ, ಕೆಡುವ ಮುನ್ನ ವ್ಯವಸ್ಥೆಯನ್ನು ಬದಲಾಯಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.

ಇದೇ ವೇಳೆ ಜೆಡಿಯು ಪಕ್ಷದ ಹೊಸ ಪದಾಧಿಕಾರಿಗಳಿಗೆ ನೇಮಕಾತಿ ಪತ್ರವನ್ನು ವಿತರಿಸಲಾಯಿತು. ವೇದಿಕೆಯಲ್ಲಿ ಕನ್ನಡಿಗರ ವಿಜಯಸೇನೆಯ ಸಂಸ್ಥಾಪಕ ಅಧ್ಯಕ್ಷರಾದ ವಿಜಯಕುಮಾರ್, ಜೆಡಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಕೆ.ಜಿ.ಎಲ್.ರವಿ, ಹೆಚ್, ಸಿ.ಸುರೇಶ್, ಯುವ ಜನತಾದಳದ ರಾಜ್ಯಾಧ್ಯಕ್ಷ ಡಾ.ನಾಗರಾಜು, ಜೆಡಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ಪಿ.ಯಶೋಧ, ಜಯಕರ್ನಾಟಕ ರಾಜ್ಯ ಸಂಘಟನಾ ಕಾರ್ಯದರ್ಶಿ ದಿವ್ಯ ಸೋಮಶೇಖರ್, ಜೆಡಿ(ಯು) ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಪನಾಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಎಸ್, ರೆಡ್ಡರ್, ಜೆಡಿಯು ರಾಜ್ಯ ರೈತ ಘಟಕದ ಅಧ್ಯಕ್ಷ ಡಿ.ಕೆ.ಶ್ರೀನಿವಾಸ್, ಜೆಡಿಯು ರಾಜ್ಯ ವಕ್ತಾರರಾದ ರಮೇಶಗೌಡ, ಬಿ.ಮೋಹನಕುಮಾರ್, ರಾಜ್ಯ ಮಹಿಳಾ ಉಪಾಧ್ಯಕ್ಷೆ ಶಕುಂತಲ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಜೂನಿಯರ್ ಪುನಿತ್ ರಾಜಕುಮಾರ್ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು.

Pragati TV Social Connect for more latest u

Leave a Reply

Your email address will not be published. Required fields are marked *