JEE ಫಲಿತಾಂಶ ಪ್ರಕಟ : ಟಾಪ್‌ 20ಯಲ್ಲಿ ರಾಜ್ಯದ ಇಬ್ಬರು…!

ಬೆಂಗಳೂರು:  ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯ ಫಲಿತಾಂಶ ನಿನ್ನೆ ಭಾನುವಾರ ಪ್ರಕಟವಾಗಿದ್ದು, ದೇಶದ ಟಾಪ್ 20 ರ ರ್ಯಾಂಕ್ ವಿಜೇತರಲ್ಲಿ ಇಬ್ಬರು ಬೆಂಗಳೂರಿನ ವಿದ್ಯಾರ್ಥಿಗಳಾಗಿದ್ದಾರೆ. 360 ರಲ್ಲಿ 325 ಅಂಕಗಳನ್ನು ಗಳಿಸಿದ ಶಾನ್ ಥಾಮಸ್ ಕೋಶಿ (AIR 15) ಮತ್ತು ಅಮೋಘ್ ಅಗರ್ವಾಲ್ (ಜೆಇಇ ಮೇನ್ಸ್‌ನಲ್ಲಿ ಶೇಕಡಾ 100 ರಷ್ಟು ಅಂಕ ಗಳಿಸಿದ್ದರು) 360 ರಲ್ಲಿ 322 ಅಂಕಗಳೊಂದಿಗೆ ದೇಶ ಮಟ್ಟದಲ್ಲಿ 20ನೇ ರ್ಯಾಂಕ್ ಗಳಿಸಿದ್ದಾರೆ.

ಪ್ರೋಗ್ರಾಮಿಂಗ್ ಬಗ್ಗೆ ಒಲವು ಹೊಂದಿರುವ ಶಾನ್ ಆಗಾಗ್ಗೆ ತನ್ನ ಬಿಡುವಿನ ವೇಳೆಯಲ್ಲಿ ಉಪಯುಕ್ತ ಅಪ್ಲಿಕೇಶನ್‌ಗಳನ್ನು ರಚಿಸುತ್ತಿರುತ್ತಾರೆ. TNIE ಯೊಂದಿಗೆ ಮಾತನಾಡಿದ ಶಾನ್ ಅವರ ತಾಯಿ ರೋಸ್ ಮೇರಿ ಜಾನ್, ಇನ್ಫೋಸಿಸ್ ಉದ್ಯೋಗಿ, ಮಗನಿಗೆ ಪ್ರೋಗ್ರಾಮಿಂಗ್ ಅಂದರೆ ತುಂಬಾ ಇಷ್ಟ. ಇತ್ತೀಚೆಗೆ ಎಲ್ಲಾ ಫೋಟೋಗಳನ್ನು PDF ಸ್ವರೂಪಕ್ಕೆ ಸ್ವಯಂಚಾಲಿತವಾಗಿ ಏಕೀಕರಿಸುವ ಅಪ್ಲಿಕೇಶನ್ ನ್ನು ರಚಿಸಿದ್ದಾನೆ ಎಂದರು.

ಜನರು ತಮ್ಮ ಖರ್ಚುವೆಚ್ಚಗಳನ್ನು ಮಾಡಿರುವ ಬಗ್ಗೆ ತಿಳಿದುಕೊಳ್ಳುವ ಹಣಕಾಸು ಅಪ್ಲಿಕೇಶನ್ ನ್ನು ಸಹ ಮಾಡಿದ್ದರು. ಶಾನ್ GEAR ಇಂಟರ್‌ನ್ಯಾಶನಲ್ ಸ್ಕೂಲ್‌ನ ವಿದ್ಯಾರ್ಥಿಯಾಗಿದ್ದಾರೆ. ಅವರ ತಂದೆ ನಿಶಿಲ್ ಕೋಶಿ IIT ಖಾರಗ್ ಪುರದ ಹಳೆಯ ವಿದ್ಯಾರ್ಥಿಯಾಗಿದ್ದಾರೆ, 1993 ರಲ್ಲಿ 257 ನ್ನು ಗಳಿಸಿ ಈಗ ಸ್ಟಾರ್ಟ್‌ಅಪ್ ಹೊಂದಿದ್ದಾರೆ.

ತನ್ನ ತಂದೆಯ ಪ್ರಯಾಣದಿಂದ ಸ್ಫೂರ್ತಿ ಪಡೆದ ಬೆಂಗಳೂರಿನ ವಿದ್ಯಾರ್ಥಿ ಶಾನ್ ಥೋಮಸ್ ಐಐಟಿ-ಬಾಂಬೆಯನ್ನು ಆಯ್ಕೆ ಮಾಡಿಕೊಳ್ಳಲು ಮತ್ತು ಎಲೆಕ್ಟ್ರಿಕ್ಸ್ ಮತ್ತು ಎಲೆಕ್ಟ್ರಾನಿಕ್ಸ್ ನಲ್ಲಿ ಮುಂದುವರಿಯಲು ರೊಬೊಟಿಕ್ಸ್ ಕ್ಷೇತ್ರದಲ್ಲಿ ಕೆಲಸ ಮಾಡಲು ಯೋಜಿಸುತ್ತಾನೆ.

ಟಾಪ್ 20 ರಲ್ಲಿ ಸ್ಥಾನ ಪಡೆದ ಬೆಂಗಳೂರಿನ ಮತ್ತೊಬ್ಬ ವಿದ್ಯಾರ್ಥಿ ಅಮೋಘ್ ಅಗರ್ವಾಲ್, ಜೆಇಇ ಮೇನ್ಸ್‌ನಲ್ಲಿ ರಾಜ್ಯದಲ್ಲಿ 100ರಷ್ಟು ಅಂಕ ಪಡೆದ ಕೆಲವೇ ವಿದ್ಯಾರ್ಥಿಗಳಲ್ಲಿ ಒಬ್ಬರು. ಸಾಫ್ಟ್‌ವೇರ್ ಕಂಪನಿಯೊಂದರ ಸಹ ಸಂಸ್ಥಾಪಕ ಸಲೀಲ್ ಅಗರ್ವಾಲ್ ಮತ್ತು ಗೃಹಿಣಿ ಆವಂತಿಕಾ ಅವರ ಪುತ್ರ ಅಮೋಘ್, “ಎರಡು ವರ್ಷಗಳ ನನ್ನ ಕಠಿಣ ಪರಿಶ್ರಮಕ್ಕೆ ಕೊನೆಗೂ ಫಲ ಸಿಕ್ಕಿದೆ. ನಾನು ಅತ್ಯುತ್ತಮ IIT ಗಳಲ್ಲಿ ಒಂದಾದ – IIT ಬಾಂಬೆಗೆ ಅರ್ಜಿ ಸಲ್ಲಿಸುತ್ತೇನೆ ಎಂದಿದ್ದಾರೆ.

ವೇಳಾಪಟ್ಟಿ ಮಾಡಿಕೊಂಡು ಅಧ್ಯಯನ ಮಾಡುತ್ತಿದ್ದೆ. ಕೆಲವೊಮ್ಮೆ ನನ್ನ ಮನಸ್ಸನ್ನು ರಿಫ್ರೆಶ್ ಮಾಡಲು ಕ್ರೀಡೆಗಳನ್ನು ಆಡುತ್ತಿದ್ದೆ ಎನ್ನುತ್ತಾರೆ. 11 ನೇ ತರಗತಿಯಲ್ಲಿ ಮನೆಯಿಂದ ಕಾಲೇಜಿಗೆ ಪ್ರಯಾಣಿಸುತ್ತಾ ಕಲಿತರೆ 12ನೇ ತರಗತಿಯಲ್ಲಿ ಹಾಸ್ಟೆಲ್ ಗೆ ಸೇರಿದ್ದರು.

ಕಂಪ್ಯೂಟರ್ ಸೈನ್ಸ್ ಇಂಜಿನಿಯರ್ ಆಗಬೇಕೆಂಬ ಹಂಬಲ ಹೊಂದಿರುವ ಅಮೋಘ್ ಅವರ ಸಾಧೆ ಬಗ್ಗೆ ಕೇಳಿದಾಗ ಕಷ್ಟಪಟ್ಟು ಸಾಧನೆ ಮಾಡಲು ನೋಡುತ್ತೇನೆ ಎಂದರು. ಈ ಬಾರಿ ಕರ್ನಾಟಕದ ಹಲವಾರು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದು, ಅಗ್ರ 100 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

Leave a Reply

Your email address will not be published. Required fields are marked *