Jn. NTR ಅಭಿನಯದ ‘ದೇವರ’ ಟ್ರೇಲರ್​​ ಬಿಡುಗಡೆಗೆ ಮುಹೂರ್ತ ಫಿಕ್ಸ್

ಜೂ.ಎನ್​​ಟಿಆರ್ ದೇವರ ಪೋಸ್ಟರ್

ದಕ್ಷಿಣ ಚಿತ್ರರಂಗದ ಜನಪ್ರಿಯ ನಟ ಜೂನಿಯರ್ ಎನ್​​ಟಿಆರ್ ಅಭಿನಯದ ಮುಂದಿನ ಬಹುನಿರೀಕ್ಷಿತ ಚಿತ್ರ ‘ದೇವರ’. ಬಿಡುಗಡೆ ದಿನಾಂಕ ಘೋಷಣೆಯಾಗಿದ್ದು, ಸಿನಿಮಾ ವೀಕ್ಷಿಸಲು ಅಭಿಮಾನಿಗಳು ಕಾತರರಾಗಿದ್ದಾರೆ. ‘ದೇವರ’ ದರ್ಶನಕ್ಕೆ ಪ್ರೇಕ್ಷಕರು ಹಾತೊರೆಯುತ್ತಿದ್ದಾರೆ. ಸಿನಿಮಾ ಈಗಾಗಲೇ ಪ್ರಚಾರ ಪ್ರಾರಂಭಿಸಿದ್ದು, ಟ್ರೇಲರ್​​ ಬಿಡುಗಡೆಗೆ ಚಿತ್ರತಂಡ ಎದುರು ನೋಡುತ್ತಿದೆ.

ಗಣೇಶ ಚತುರ್ಥಿಯ ಈ ವಿಶೇಷ ದಿನದಂದು ‘ದೇವರ’ ಚಿತ್ರ ನಿರ್ಮಾಪಕರು ಹೊಸ ಪೋಸ್ಟರ್ ಅನಾವರಣಗೊಳಿಸುವ ಮುಖೇನ ಬಹುನಿರೀಕ್ಷಿತ ಚಿತ್ರದ ಟ್ರೇಲರ್ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ. ಇದೇ ಸೆಪ್ಟೆಂಬರ್ 10 ರಂದು ಚಿತ್ರದ ಪ್ರೋಮೋ ಬಿಡುಗಡೆ ಆಗಲಿದೆ. ಜೂ.ಎನ್​​ಟಿಆರ್ ಅವರನ್ನೊಳಗೊಂಡಿರುವ ಚಿತ್ರದ ಹೊಸ ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಿದೆ.

ಇಂದು ಅನಾವರಣಗೊಂಡಿರುವ ಹೊಸ ಪೋಸ್ಟರ್‌ನಲ್ಲಿ ನಾಯಕ ನಟ ಜೂನಿಯರ್ ಎನ್‌ಟಿಆರ್ ಸಂಪೂರ್ಣ ಕಪ್ಪು ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದಾರೆ. ನಟನ ನೋಟ ಖಡಕ್​​ ಆಗಿದೆ. ಗಂಭೀರ ಭಂಗಿಯಲ್ಲಿ ನಿಂತಿರುವ ನಟನ ಸುತ್ತ ಸಮುದ್ರದಲೆಗಳು ಎದ್ದಿವೆ. ಪೋಸ್ಟರ್ ಹಂಚಿಕೊಂಡಿರುವ ಚಿತ್ರತಂಡ ”ಇಂದು ಆಚರಿಸಿ, ಒಂದೆರಡು ದಿನಗಳಲ್ಲಿ ಜಯಿಸಿ. ಸೆಪ್ಟೆಂಬರ್ 10 ರಂದು ದೇವರ ಟ್ರೇಲರ್​​ ಬಿಡುಗಡೆ ಆಗಲಿದೆ” ಎಂದು ಬರೆದುಕೊಂಡಿದ್ದಾರೆ.

ಪೋಸ್ಟರ್​, ಪೋಸ್ಟ್​ ಶೇರ್​​ ಆಗುತ್ತಿದ್ದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು, ಸಿನಿಪ್ರಿಯರು ತಮ್ಮ ಪ್ರತಿಕ್ರಿಯೆ ಕೊಡಲು ಶುರುಹಚ್ಚಿಕೊಂಡಿದ್ದಾರೆ. ಕಾಮೆಂಟ್ ವಿಭಾಗದಲ್ಲಿ ಓರ್ವರು ಆಲ್ ದಿ ಬೆಸ್ಟ್ ಎನ್​ಟಿಆರ್​​​ ಎಂದು ಬರೆದಿದ್ದಾರೆ. ಹೆಚ್ಚಿನವರು ಫೈಯರ್​ ಮತ್ತು ಹಾರ್ಟ್ ಎಮೋಜಿಗಳೊಂದಿಗೆ ತಮ್ಮ ಕಾತರ, ಉತ್ಸಾಹ, ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

Leave a Reply

Your email address will not be published. Required fields are marked *