ಬೆಂಗಳೂರು : ಒಂದು ‘ಮೊಬೈಲ್’ ಕಳೆದು ಹೋದರೆ ಅಥವಾ ಕಳ್ಳತನವಾದರೆ ಏನು ಮಾಡಬೇಕು..? ಮೊಬೈಲ್ ಕಳೆದುಹೋದರೆ ಅಥವಾ ಕಳ್ಳತನವಾದರೆ ತಕ್ಷಣವೇ ಸಿಇಐಆರ್ ವೆಬ್ಸೈಟ್ಗೆ ಭೇಟಿ ನೀಡಬೇಕು. ಈ ಬಗ್ಗೆ ಇಲ್ಲಿದೆ ಮಾಹಿತಿ.
ಕಳೆದುಹೋದ ಅಥವಾ ಕಳ್ಳತನವಾದ ಮೊಬೈಲ್ಗಳನ್ನು ಬ್ಲಾಕ್ ಮಾಡಲು ಸರ್ಕಾರ ರೂಪಿಸಿರುವ ವ್ಯವಸ್ಥೆ CEIR. IMEI ನಂಬರ್ ಮೂಲಕ ಮೊಬೈಲ್ ಪತ್ತೆ ಮಾಡಲು ಈ ವ್ಯವಸ್ಥೆ ಅನುಕೂಲವಾಗಿದೆ.
ಮೊಬೈಲ್ ಕಳೆದುಹೋದರೆ ಅಥವಾ ಕಳ್ಳತನವಾದರೆ ತಕ್ಷಣವೇ ಸಿಇಐಆರ್ ವೆಬ್ಸೈಟ್ಗೆ ಭೇಟಿ ನೀಡಬೇಕು. ಮೊಬೈಲ್ ವಿವರಗಳನ್ನು ಐಎಂಇಐ ನಂಬರ್ ಹಾಗೂ ಒಟಿಪಿ ಸಮೇತ ದಾಖಲಿಸಬೇಕು. ನಂತರ ರಶೀದಿ ಸಿಗುತ್ತದೆ. ಈ ರೀತಿ ದೂರು ಸಲ್ಲಿಕೆ ನಂತರ ಸಂಬಂಧಪಟ್ಟ ಠಾಣೆಗೆ ಮಾಹಿತಿ ಹೋಗುತ್ತದೆ. ತಕ್ಷಣವೇ ಮೊಬೈಲ್ ಬ್ಲಾಕ್ ಆಗುತ್ತದೆ ಎಂದು ಸರ್ಕಾರ ಮಹತ್ವದ ಪ್ರಕಟಣೆ ಹೊರಡಿಸಿದೆ.
ಮೊಬೈಲ್ ಕಳುವಾದರೆ ಏನು ಮಾಡಬೇಕು..?
- ಸಿಇಐಆರ್ ವೆಬ್ಸೈಟ್ ಭೇಟಿ ನೀಡಿ
- ಮೊಬೈಲ್ ವಿವರಗಳನ್ನು ಐಎಂಇಐ ನಂಬರ್ ಹಾಗೂ ಒಟಿಪಿ ಸಮೇತ ದಾಖಲಿಸಬೇಕು
- ನಂತರ ರಶೀದಿ ಸಿಗುತ್ತದೆ
- ಈ ರೀತಿ ದೂರು ಸಲ್ಲಿಕೆ ನಂತರ, ಸಂಬಂಧಪಟ್ಟ ಠಾಣೆಗೆ ಮಾಹಿತಿ ಹೋಗುತ್ತದೆ
- ತಕ್ಷಣವೇ ಕಳೆದುಹೋದ ಮೊಬೈಲ್ ಬ್ಲಾಕ್ ಆಗುತ್ತದೆ