ಕಲಬುರಗಿ: ಹಿಂದೂ ಯುವಕರು ಮುಸ್ಲಿಂ ಯುವತಿಯರನ್ನು ಪ್ರೀತಿಸಿ ಮದುವೆಯಾದರೆ ತಲಾ ಐದು ಲಕ್ಷ ರೂ ನೀಡುತ್ತೇನೆಂಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸದ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಹೀಗಿರುವಾಗ ಅವರ ವಿರುದ್ಧ ದೂರು ದಾಖಲಾಗಿದೆ. ಹಿಂದೂ ಯುವಕರಿಗೆ ಪ್ರಚೋದಿಸಿದ ಆರೋಪದಡಿ ನಗರದ ರೋಜಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ನಗರದ ರೋಜಾ ಪೊಲೀಸ್ ಠಾಣೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಖಿದ್ಮತ್ ಎ ಮಿಲ್ಲತ್ ಕಮಿಟಿ ಅಧ್ಯಕ್ಷ ಜುನೈದ್ ಖುರೇಶಿ ದೂರು ನೀಡಿದ್ದು, ಕಲಂ 196, 299, 353(1)(c), 353(2)ಅಡಿ ಕೇಸ್ ದಾಖಲಾಗಿದೆ. ಒಂದು ಸಮುದಾಯವನ್ನು ವಿಭಜನೆ ದ್ವೇಷ ಹೇಳಿಕೆ ಅಂತಾ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದೂರಿನಲ್ಲೇನಿದೆ?
ಕಲಬುರಗಿಯ ಖಿದ್ಮತ್ ಎ ಮಿಲ್ಲತ್ ಕಮಿಟಿ ಅಧ್ಯಕ್ಷ ಜುನೈದ್ ಖುರೇಶಿ ಆಗಸ್ಟ್ 12 ರಂದು ರಾತ್ರಿ 10:30 ಗಂಟೆಗೆ ಠಾಣೆಗೆ ಹಾಜರಾಗಿ ಇಂಗ್ಲಿಷನಲ್ಲಿ ಟೈಪ್ ಮಾಡಿದ ಫಿರ್ಯಾದಿ ಹಾಜರುಪಡಿಸಿದ್ದ ಸಾರಾಂಶವೆನೆಂದರೆ ಶ್ರೀ ಬಸವನಗೌಡ ಪಾಟೀಲ್ ಯತ್ನಾಳ್ ಎಂಎಲ್ಎ ಬಿಜಾಪುರ ನಗರದವರು ಹಲವಾರು ವರ್ಷಗಳಿಂದ ಸಮುದಾಯಗಳನ್ನು ವಿಭಜಿಸುವ ಒಂದು ನಿರ್ದಿಷ್ಟ ಧಾರ್ಮಿಕ ಗುಂಪನ್ನು ಗುರಿಯಾಗಿಸುವ ಮತ್ತು ಸಾರ್ವಜನಿಕ ಶಾಂತಿ ಮತ್ತು ಸೌಹಾರ್ದತೆಯನ್ನು ಕದಡುವ ಸಾರ್ವಜನಿಕ ಹೇಳಿಕೆಗಳು ಮತ್ತು ಭಾಷಣಗಳನ್ನು ನೀಡುತ್ತಾ ಬಂದಿರುತ್ತಾರೆ.
ಈ ಹೇಳಿಕೆಗಳು ದ್ವೇಷವನ್ನು ಉತ್ತೇಜಿಸುತ್ತವೆ, ಸಮಾಜದಲ್ಲಿ ವಿಭಜನೆಯನ್ನು ಸೃಷ್ಟಿಸುತ್ತವೆ. ಇತ್ತಿಚೀಗೆ ಆ.11 ರಂದು ಅವರು ಕೊಪ್ಪಳದಲ್ಲಿ ಹಿಂದೂ ಹುಡುಗರು ಮುಸ್ಲಿಂ ಹುಡುಗಿಯರನ್ನು ಮದುವೆಯಾದರೆ 5 ಲಕ್ಷ ರೂ. ಗಳನ್ನು ನಗದು ಪ್ರೋತ್ಸಾಹ ಧನ ನೀಡಲಾಗುವುದೆಂದು ಸಾರ್ವಜನಿಕವಾಗಿ ಘೋಷಿಸಿದ್ದರು. ಈ ಹೇಳಿಕೆಯು ಒಂದು ಸಮುದಾಯವನ್ನು ಗುರಿಯಾಗಿಸಲು ಮತ್ತು ಇನ್ನೊಂದು ಸಮುದಾಯವನ್ನು ಪ್ರಚೋದಿಸಲು ಸ್ಪಷ್ಟವಾಗಿ ಉದ್ದೇಶಿಸಿದ್ದು, ಇದು ಕಲಬುರಗಿ ಸೇರಿಂದಂತೆ ಹಲವು ಕಡೆ ಗಂಭಿರ ಕಾನೂನು ಸುವ್ಯವಸ್ಥೆಗೆ ಕಾರಣವಾಗಬಹುದೆಂದು ನೀಡಿದ ದೂರುದಾರರ ದೂರಿನ ಆಧಾರದಲ್ಲಿ ಕಲಂ 196,299,353(1)(c)353(2) ಬಿಎನ್ ಎಸ್ ಆ್ಯಕ್ಟ್ ಅಡಿ ಪ್ರಕರಣ ದಾಖಲಾಗಿದೆ ಎಂದು ಉಲ್ಲೇಖಿಸಲಾಗಿದೆ.
For More Updates Join our WhatsApp Group :