ರಾಜ್ಯಸಭಾ ಸದಸ್ಯನಾಗಿ ಪ್ರಮಾಣವಚನ ಸ್ವೀಕರಿಸಿದ Kamal Haasan; ಸಂಬಳ ಎಷ್ಟು?

ರಾಜ್ಯಸಭಾ ಸದಸ್ಯನಾಗಿ ಪ್ರಮಾಣವಚನ ಸ್ವೀಕರಿಸಿದ Kamal Haasan; ಸಂಬಳ ಎಷ್ಟು?

ನಟ ಮತ್ತು ಮಕ್ಕಳ್ ನೀಧಿ ಮೈಯಂ ಪಕ್ಷದ ನಾಯಕ ಕಮಲ್ ಹಾಸನ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಎಲ್ಲರಿಗೂ ಅವರು ಅಭಿನಂದನೆ ತಿಳಿಸಿದ್ದಾರೆ. ಅವರು ತಮಿಳಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು ಮತ್ತು ತಮ್ಮ ಭಾಷೆಯ ಮೇಲಿನ ಪ್ರೀತಿ ತೋರಿಸಿದರು. ಒಬ್ಬ ಭಾರತೀಯನಾಗಿ ತಮ್ಮ ಕರ್ತವ್ಯವನ್ನು ಪೂರೈಸುವುದಾಗಿ ಅವರು ಹೇಳಿದರು. ಕಳೆದ ಲೋಕಸಭಾ ಚುನಾವಣೆಯ ಸಮಯದಲ್ಲಿ ಕಮಲ್ ಡಿಎಂಕೆ ಪಕ್ಷದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದರು. ಇದರೊಂದಿಗೆ, ಡಿಎಂಕೆ ಅವರಿಗೆ ರಾಜ್ಯಸಭಾ ಸದಸ್ಯರಾಗಲು ಸೀಟ್ ನೀಡಿತು. ಈಗ, ಮೊದಲ ಬಾರಿಗೆ, ಅವರು ಭಾರತ ಸರ್ಕಾರದಿಂದ ರಾಜ್ಯಸಭಾ ಸದಸ್ಯರಾಗಿ ಸಂಬಳ ಪಡೆಯಲಿದ್ದಾರೆ. ಸಂಸದರಾಗಿ ಸಂಬಳವು ಕಮಲ್ ಪ್ರಸ್ತುತ ಪಡೆಯುತ್ತಿರುವ ಸಂಭಾವನೆಗಿಂತ ಕಡಿಮೆಯಾಗಿದೆ ಎಂದು ಹೇಳಬಹುದು.

ವರದಿಗಳ ಪ್ರಕಾರ, ರಾಜ್ಯಸಭಾ ಸಂಸದರಾಗಿ ಕಮಲ್ ಹಾಸನ್ ಅವರ ಮಾಸಿಕ ವೇತನ 1,24,000 ರೂಪಾಯಿ. ದೈನಂದಿನ ಭತ್ಯೆ: ಸಂಸತ್ತಿನ ಅಧಿವೇಶನಗಳಲ್ಲಿ ದಿನಕ್ಕೆ ರೂ. 2,500 ಸಿಗಲಿದೆ. ಕಚೇರಿ ವೆಚ್ಚ ಎಂದು ತಿಂಗಳಿಗೆ ರೂ. 75,000 ಸಿಗಲಿದೆ. ಸಹಾಯಕ ಸಿಬ್ಬಂದಿಗೆ 50,000 ರೂಪಾಯಿ ಸಿಗಲಿದ. ಕಚೇರಿ ಅಗತ್ಯಗಳಿಗಾಗಿ 25,000 ಸಿಗಲಿದೆ.

ವರ್ಷಕ್ಕೆ 34 ಉಚಿತ ದೇಶೀಯ ಪ್ರಯಾಣ ಇರುತ್ತದೆ. ಸಂಸದ, ಕುಟುಂಬ; ಸಿಬ್ಬಂದಿ ಅಥವಾ ಸಹಾಯಕರು 8 ಟ್ರಿಪ್ಗಳನ್ನು ಬಳಸಬಹುದು. ಅಧಿಕೃತ ಮತ್ತು ವೈಯಕ್ತಿಕ ಬಳಕೆಗಾಗಿ ಅನಿಯಮಿತ ಪ್ರಥಮ ದರ್ಜೆ ರೈಲು ಪ್ರಯಾಣ ಸಿಗಲಿದೆ. ನವದೆಹಲಿಯಲ್ಲಿ ನಿವಾಸ ನೀಡಲಾಗುತ್ತದೆ. ಉಚಿತ ವಿದ್ಯುತ್ ಕೂಡ ಸಿಗಲಿದೆ. ಉಚಿತ ನೀರು ಕೂಡ ಸಿಗಲಿದೆ.

ಉಚಿತ ಫೋನ್ ಮತ್ತು ಇಂಟರ್ನೆಟ್ ಸೇವೆಗಳು ಸಿಗಲಿದೆ. ಹಿರಿಯ ಸರ್ಕಾರಿ ಅಧಿಕಾರಿಗಳಿಗೆ ನೀಡಲಾಗುವ ವೈದ್ಯಕೀಯ ಸೇವೆ ಇವರಿಗೂ ಸಿಗಲಿದೆ. ನಿವೃತ್ತಿಯ ನಂತರ ತಿಂಗಳಿಗೆ ರೂ. 31,000 ಪಿಂಚಣಿ ಸಿಗಲಿದೆ.  ರಾಜ್ಯಸಭೆಯ ಅವಧಿ ಆರು ವರ್ಷ. ಮೂರನೇ ಒಂದು ಭಾಗದಷ್ಟು ಸದಸ್ಯರು ಪ್ರತಿ ಎರಡು ವರ್ಷಗಳಿಗೊಮ್ಮೆ ನಿವೃತ್ತರಾಗುತ್ತಾರೆ.

Leave a Reply

Your email address will not be published. Required fields are marked *