ಚಾರ್ಮಾಡಿ ಘಾಟ್ ನಲ್ಲಿ ಆಂಬ್ಯುಲೆನ್ಸ್ ಗೆ ತೊಂದರೆ ಕೊಟ್ಟ ಪ್ರವಾಸಿಗರು…!

ಚಿಕ್ಕಮಗಳೂರು: ಮಂಗಳೂರಿನ ಖಾಸಗಿ ಆಸ್ಪತ್ರೆಗೆ ರೋಗಿಯೊಬ್ಬರನ್ನು ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್ ಚಾರ್ಮಾಡಿ ಘಾಟ್‌ನ ಕಿರಿದಾದ ರಸ್ತೆಯಲ್ಲಿ ಪ್ರವಾಸಿಗರು ಸೆಲ್ಫಿ ತೆಗೆಯಲು ವಾಹನಗಳನ್ನು ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿಕೊಂಡಿತ್ತು.

ಆಂಬ್ಯುಲೆನ್ಸ್ ಸೈರನ್ ಮೊಳಗುತ್ತಿದ್ದರೂ ಸಹ, ಜನರು ತಮ್ಮ ವಾಹನಗಳನ್ನು ನಿರ್ಬಂಧಿಸಿದ ರಸ್ತೆಯಿಂದ ತೆಗೆದುಹಾಕಲು ಯಾವುದೇ ಪ್ರಯತ್ನ ಮಾಡಲಿಲ್ಲ. ಆಂಬ್ಯುಲೆನ್ಸ್ ಚಾಲಕ ಹಾದುಹೋಗಲು ಹರಸಾಹಸ ಪಡುತ್ತಿದ್ದರೂ ರಸ್ತೆಯ ಇಕ್ಕೆಲಗಳಲ್ಲಿ ಹಲವಾರು ಕಾರುಗಳನ್ನು ನಿಲ್ಲಿಸಿದ್ದರಿಂದ ಕಿರಿದಾದ ರಸ್ತೆಯಲ್ಲಿ ಸಾಗಲು ಸಾದ್ಯವಾಗಲಿಲ್ಲ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಬಣಕಲ್ ಗ್ರಾಮದಿಂದ ರೋಗಿಯೊಬ್ಬರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಆಂಬುಲೆನ್ಸ್ ಸ್ಥಳಾಂತರಿಸುತ್ತಿತ್ತು. ಮಾನ್ಸೂನ್ ಸಮಯದಲ್ಲಿ ಭೂಕುಸಿತಕ್ಕೆ ಒಳಗಾಗುವ ಕುಖ್ಯಾತ ಚಾರ್ಮಾಡಿ ಘಾಟ್ ಚಿಕ್ಕಮಗಳೂರು ಜಿಲ್ಲೆಯನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕಿಸುತ್ತದೆ.

Pragati TV Social Connect for more latest u

Leave a Reply

Your email address will not be published. Required fields are marked *