ಕರಾಟೆ ದಾಳಿ ಮಾಡಲು ಉಪಯೋಗಿಸುವ ಕಲೆಯಲ್ಲ…!

ತುಮಕೂರು: ಕರಾಟೆ ಇನ್ನೊಬ್ಬರ ಮೇಲೆ ದಾಳಿ ಮಾಡಲು ಉಪಯೋಗಿಸುವಂತಹ ಕಲೆಯಲ್ಲ. ನಮ್ಮ ಸ್ವಯಂರಕ್ಷಣೆಗೆ  ಇರುವಂತಹ ಕಲೆ. ಇದನ್ನು ಪ್ರತಿಯೊಬ್ಬರು ಕಲಿಯುವುದರಿಂದ ನಮ್ಮ ಮೇಲಾಗುವ ದಬ್ಬಾಳಿಕೆ, ದೌಜನ್ಯವನ್ನು ತಡೆಗಟ್ಟಬಹುದು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.

ನಗರದ ತುಮಕೂರು ವಿಶ್ವವಿದ್ಯಾಲಯದ ಡಾ.ಶ್ರೀಶಿವಕುಮಾರಸ್ವಾಮೀಜಿಗಳ ಸಭಾಂಗಣದಲ್ಲಿ ಲಯನ್ ಮಾರ್ಷಲ್ ಆರ್ಟ್್ಸ ಸಂಸ್ಥೆವತಿಯಿAದ ಆಯೋಜಿಸಿದ್ದ 7ನೇ ರಾಷ್ಟಿಯ ಕರಾಟೆ ಚಾಂಪಿಯನ್ ಶಿಫ್ ಗೆ ಚಾಲನೆ ನೀಡಿ ಮಾತನಾಡಿ, ಕರಾಟೆಗೆ ವಿಶ್ವದೆಲ್ಲೆಡೆ ಮಾನ್ಯತೆ ಇದೆ. ಇಂದು ಒಂದು ಪ್ರದೇಶಕ್ಕೆ ಸಿಮೀತವಾಗಿಲ್ಲ ಎಂದರು.

ಯುವಕ

ಕ್ರೀಡೆ ಭಾತೃತ್ವ ಬೆಸೆಯುವ ಆಟವಾಗಿದೆ.ಕರಾಟೆ ಒಂದು ಶಿಸ್ತು ಬದ್ದ ಅಟ.ಕರಾಟೆ ಕಲಿಯುವುದರಿಂಧ ಮನುಷ್ಯನಲ್ಲಿ ಶಿಸ್ತು ಮತ್ತು ಸಂಯಮ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ.ಶಿಸ್ತು ಇರುವ ಮನುಷ್ಯ ಜೀವನದಲ್ಲಿ ಉತ್ತರೋತ್ತರಕ್ಕೆ ಬೆಳೆಯಲು ಸಹಕಾರಿ ಕರಾಟೆ ಇದಕ್ಕೆ ಸಹಕಾರಿಯಾಗಲಿದೆ.

ಸೋಲು,ಗೆಲುವು ಕ್ರೀಡೆಯಲ್ಲಿ ಸಹಜ.ಕ್ರೀಡೆಯಲ್ಲಿ ಆಟದ ಜೊತೆಗೆ ಇನ್ನೊಬ್ಬರೊಂದಿಗೆ ಹೇಗೆ ನಡೆದುಕೊಳ್ಳಬೇಕೆಂಬ ಗುಣಗಳನ್ನು ಕಲಿಸುತ್ತಿದೆ.ಭವಿಷ್ಯ ಉತ್ತಮವಾಗಿರಲು ಕ್ರೀಡೆ ಸಹಕಾರಿಯಾಗಲಿದೆ ಎಂದು ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.

ನಗರಪಾಲಿಕೆ 19ನೇ ವಾರ್ಡ್ನ ಸದಸ್ಯೆ ರೂಪಾಶೆಟ್ಟಾಳಯ್ಯ ಮಾತನಾಡಿ, ಕನಾಟಕವಲ್ಲದೆ ದೇಶದ 11ಕ್ಕೂ ಹೆಚ್ಚು ರಾಜ್ಯಗಳ 1500ಕ್ಕೂ ಹೆಚ್ಚು ಮಕ್ಕಳು ಇಲ್ಲಿ ಪಾಲ್ಗೊಂಡಿದ್ದಾರೆ. ಅವರ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದರು.

ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಚಿ.ನಿ.ಪುರುಷೋತ್ತಮ್ ಮಾತನಾಡಿ,ಸ್ವಯಂ ರಕ್ಷಣೆಯ ಕಲೆಯಾದ ಕರಾಟೆಯನ್ನು ಪ್ರತಿಯೊಬ್ಬರು ಕಲಿತು, ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಈ ವೇಳೆ ಹಿರಿಯ ಸಹಕಾರಿ ಪಿ. ಮೂರ್ತಿ, ಜಿಲ್ಲಾ ಸಹಕಾರ ಯೂನಿಯ್ ಅಧ್ಯಕ್ಷ ಬಿ.ಜಿ. ವೆಂಕಟೇಗೌಡ, ರಾಘವೇಂದ್ರ ಸ್ವಾಮಿ, ಲಯಮ್ ಮಾರ್ಷಲ್ ಆರ್ಟ್ನ ಸಿ.ಜಿ.ಪ್ರಕಾಶ್, ಕಲ್ಪನಾ ಪ್ರಕಾಶ್, ಶ್ರೀನಿವಾಸ್, ಕೆ.ಬಿ. ರಾಜ್,  ರವಿತೇಜ, ದರ್ಶನ್, ವಿಜಯ್, ಕಾರ್ತಿಕ್, ಸಿದ್ದಾರ್ಥ್ ಕೆ. ಶೆಟ್ಟಿ, ಸುಮುಖತ್ರೇಯ, ಶ್ರೀನಿಧಿ, ಶ್ರೀರಂಗ, ಗ್ರೀತೇಯು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಹರಿಯಾಣ, ಚಂಡಿಘಡ, ಗುಜರಾತ್, ಮಹಾರಾಷ್ಟ್ರ ಸೇರಿದಂತೆ 11 ರಾಜ್ಯಗಳ ಸುಮಾರು 1500ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡು ಕತಾ ಮತ್ತು ಕುಮಿತೆಯಲ್ಲಿ ಪ್ರದರ್ಶನ ನೀಡಿದರು.

ಕ್ರೀಡಾಕೂಟದಲ್ಲಿ ಪ್ರಾಸ್ತಾವಿಕ ಮಾತನಾಡಿದ ಕನ್ನಡ ಸೇನೆಯ ಜಿಲ್ಲಾಧ್ಯಕ್ಷ  ಧನಿಯಕುಮಾರ್,ಲಯನ್ ಮಾರ್ಷಲ್ ಆರ್ಟ್ ಸಂಸ್ಥೆ ಕಳೆದ ಹತ್ತಾರು ವಷಗಳಿಂದ ತಾಲೂಕು, ಜಿಲ್ಲಾ ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಕೂಟಗಳನ್ನು ನಡೆಸುತ್ತ ಜಿಲ್ಲೆಯಲ್ಲಿ ಕರಾಟೆಯನ್ನು ಜನಪ್ರಿಯಗೊಳಿಸಿದ್ದಾರೆ. ಶಿಕ್ಷಣದ ಜೊತೆ ಜೊತೆಗೆ ಕ್ರೀಡೆ ಒಂದು ಒಳ್ಳೆಯ ಬೆಳವಣಿಗೆ, ಇತ್ತೀಚಿನ ಕುಲುಷಿತ ವಾತಾವರಣದಲ್ಲಿ ಹೆಣ್ಣು ಮಕ್ಕಳು ತಮ್ಮ ಪ್ರಾಣ ಮತ್ತು ಮಾನ ರಕ್ಷಣೆಗೆ ಕರಾಟೆಯನ್ನು ಕಲಿಸಲು ಸರಕಾರವೇ ಮುಂದಾಗಿದೆ. ಹಾಗಾಗಿ ಎಲ್ಲಾ ಹೆಣ್ಣು ಮಕ್ಕಳು ಇದನ್ನು ಕಲಿತು ಸಬಲರಾಗಬೇಕು.ಕರಾಟೆ,ಶೂಟಿಂಗ್ ಸೇರಿದಂತೆ ಒಳಾಂಗಣ ಕ್ರೀಡೆಗಳ ಅಭ್ಯಾಸಕ್ಕೆ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಅಭ್ಯಾಸಕ್ಕೆ ಅವಕಾಶ ಕಲ್ಪಿಸಬೇಕೆಂದು ಸಚಿವರಲ್ಲಿ ಮನವಿ ಮಾಡಿದರು.

ತುಮಕೂರಿನಲ್ಲಿ ಲಯನ್ ಮಾರ್ಷಲ್ ಆರ್ಟ್  ಸಂಸ್ಥೆವತಿಯಿoದ ಆಯೋಜಿಸಿದ್ದ 7ನೇ ರಾಷ್ಟ್ರೀಯ  ಕರಾಟೆ ಚಾಂಪಿಯನ್ ಶಿಫ್ ಗೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ಚಾಲನೆ ನೀಡಿದರು. ಪಾಲಿಕೆ ಸದಸ್ಯೆ ರೂಪಾ ಶೆಟ್ಟಾಳಯ್ಯ, ಧನಿಯಾಕುಮಾರ್, ಪಿ.ಮೂರ್ತಿ, ಚಿ.ನಿ.ಪುರುಷೋತ್ತಮ್, ಬಿ.ಜಿ.ವೆಂಕಟೇಗೌಡ, ಸಿ.ಜಿ.ಪ್ರಕಾಶ್, ಕಲ್ಪನಾ, ಶ್ರೀನಿವಾಸ್, ಟಿ.ಕೆ.ಆನಂದ್ ಇತರರಿದ್ದರು.

Pragati TV Social Connect for more latest u

Leave a Reply

Your email address will not be published. Required fields are marked *