ಜುಡೋ: ಮನೋಜ್, ಯಾಕೂಬ್ ಬಂಗಾರದ ಬೇಟೆ.
ತುಮಕೂರು: ತುಮಕೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ಕ್ರೀಡಾಕೂಟದ ಜೊಡೋ ಸ್ಪರ್ಧೆಯ ಪುರುಷರ 81 ಕೆಜಿ ವಿಭಾಗದಲ್ಲಿ ಬೆಂಗಳೂರು ನಗರದ ಮೊಹಮ್ಮದ್ ಯಾಕುಬ್ ಖಾನ್ ಚಿನ್ನದ ಪದಕ ಗೆದ್ದಿದ್ದಾರೆ.
ಡಾ.ಜಿ. ಪರಮೇಶ್ವರ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸ್ಪರ್ಧೆಯಲ್ಲಿ ವಿಜಯಪುರದ ಸಂದೀಪ್ ರಮೇಶ್ ರಾಥೋಡ್ ಬೆಳ್ಳಿ ಗೆದ್ದರು. ಬೆಳಗಾವಿಯ ಪವನ್ ವಿಕಾಸ್ ವೈಂಗಡೆ ಹಾಗೂ ಮೈಸೂರಿನ ಜಯಸೂರ್ಯ ಎಸ್. ಕಂಚಿನ ಪದಕ ಪಡೆದರು.
ಪುರುಷರ 90 ಕೆಜಿ ವಿಭಾಗದಲ್ಲಿ ಬೆಂಗಳೂರಿನ ಆರ್. ಮನೋಜ್ ನಾಯ್ಡು, ಬೆಳಗಾವಿಯ ಬಿ.ಎಸ್. ರೋಹನ್ ಮೊದಲೆರಡು ಸ್ಥಾನ ಪಡೆದರು. ವಿಜಯಪುರದ ಅಭಿಷೇಕ್ ವಿ. ಕಾಳೆ ಹಾಗೂ ಕೆ. ತೌಸಿಫ್ ಕಂಚು ಗೆದ್ದರು.
ಪುರುಷರ ಮೈನಸ್ 100 ಕೆಜಿ: ಬೆಂಗಳೂರಿನ ರವಿಚಂದ್ರ ಎಸ್., ವಿಜಯಪುರದ ಸಂದೀಪ್ ಪಿ. ಲಮಾಣಿ, ಬೆಳಗಾವಿಯ ಓಂಕಾರ್ ಮಿನಾಚೆ ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದರು.
ಪುರುಷರ ಪ್ಲಸ್ 100 ಕೆಜಿ: ಮೈಸೂರಿನ ವಿಕಾಸ್ ಕುಮಾರ್ ಎನ್., ಬೆಳಗಾವಿಯ ರಾಹುಲ್ ಲಂಕೆನ್ನವರ್ ಮೊದಲೆರಡು ಸ್ಥಾನ ಪಡೆದರು.
ಮಹಿಳೆಯರ ಮೈನಸ್ 48 ಕೆಜಿ: ಬೆಳಗಾವಿಯ ರಮ್ಯಾ ಎ. ಜಿರಾಲಿ, ದಾವಣಗೆರೆ ಯ ಎಸ್.ಎಸ್. ಚೈತ್ರ, ವಿಜಯನಗರದ ಸಾಧಿಯಾ ಎ. ಕ್ರಮವಾಗಿ ಮೊದಕ ಮೂರು ಸ್ಥಾನ ಪಡೆದರು.
ಮಹಿಳೆಯರ ಮೈನಸ್ 52 ಕೆಜಿ: ವಿಜಯಪುರದ ಆರತಿ ಎಸ್. ಸೊನ್ನಡ, ಶಿವಮೊಗ್ಗದ ಸ್ವಾತಿ ಬಾಯ್ ಮೊದಲೆರಡು ಸ್ಥಾನ. ವಿಜಯನಗರದ ಐಶ್ವರ್ಯ ಜಿ.ಆರ್. , ದಾವಣಗೆರೆಯ ಐಶ್ವರ್ಯ ಜಿ. ಜಂಟಿ 3ನೇ ಸ್ಥಾನ.
ಮಹಿಳೆಯರ ಮೈನಸ್ 57 ಕೆಜಿ: ಶ್ರೀನಿದಿ ವಿ.ಎಸ್. (ದಾವಣಗೆರೆ), ಲಕ್ಷ್ಮಿ ಎನ್. (ವಿಜಯನಗರ), ಪೂರ್ವಿ ಎ.ಪಿ. (ಮಂಡ್ಯ) ಮೊದಲ ಮೂರು ಸ್ಥಾನ.
ಮಹಿಳೆಯರ ಮೈನಸ್ 73 ಕೆಜಿ: ಅಕ್ಷತ ಟಿ. ಸುಂಕದ (ಬೆಳಗಾವಿ), ತನುಶ್ರೀ ವಿ. ಕಾಳೆ (ವಿಜಯಪುರ), ಜಯಲಕ್ಷ್ಮಿ ಆರ್. (ಮೈಸೂರು) ಕ್ರಮವಾಗಿ ಮೊದಲ ಮೂರು ಸ್ಥಾನ.
For More Updates Join our WhatsApp Group :




