Keshav Maharaj: ಪಾಕಿಸ್ತಾನಕ್ಕೆ ಸೋಲುಣಿಸಿದ ಆಂಜನೇಯ ಭಕ್ತ

ಭಾರತ ಮೂಲದ ಕೇಶವ್​​ ಮಹಾರಾಜ್​​, ಪಾಕಿಸ್ತಾನ ವಿರುದ್ಧದ ಅದ್ಭುತ ಗೆಲುವಿನ ಬಳಿಕ ತನ್ನ ಇನ್​​ಸ್ಟಾ ಅಕೌಂಟ್​​ನಲ್ಲಿ ಒಂದು ಪೋಸ್ಟ್ ಶೇರ್ ಮಾಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಆ ಪೋಸ್ಟ್ ಸಖತ್ ವೈರಲ್​ ಆಗುತ್ತಿದೆ. ಏಕೆಂದರೆ ಆ ಪೋಸ್ಟ್ನಲ್ಲಿ ಜೈ ಶ್ರೀ ಹನುಮಾನ್​​​ ಎಂದು ದಕ್ಷಿಣ ಆಫ್ರಿಕಾ ಸ್ಟಾರ್ ಆಲ್​​ ರೌಂಡರ್ ಜಪಿಸಿದ್ದಾರೆ.

ICC ODI ವಿಶ್ವಕಪ್ 2023ರ ಭಾಗವಾಗಿ, ದಕ್ಷಿಣ ಆಫ್ರಿಕಾದ ಆಟಗಾರ ಕೇಶವ್ ಮಹಾರಾಜ್, ನಿನ್ನೆ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ತೋರಿದ ಪ್ರದರ್ಶನದಿಂದ ಹೀರೋ ಆಗಿದ್ದಾರೆ.

ಯುವಕ

ಆಲ್ ರೌಂಡರ್ ಆಗಿದ್ದರೂ ಮಹಾರಾಜ್ ಬೌಲಿಂಗ್ ನಲ್ಲಿ ಒಂದೇ ಒಂದು ವಿಕೆಟ್ ಪಡೆಯಲಿಲ್ಲ. ಬ್ಯಾಟಿಂಗ್ ನಲ್ಲೂ 21 ಎಸೆತಗಳಲ್ಲಿ ಕೇವಲ 7 ರನ್ ಗಳಿಸಿತು. ಆದರೆ 9 ವಿಕೆಟ್ ಕಳೆದುಕೊಂಡು ಸೋಲಿನ ಅಂಚಿನಲ್ಲಿದ್ದ ತಮ್ಮ ತಂಡಕ್ಕೆ ಮಹಾರಾಜ್ ಭರ್ಜರಿ ಜಯ ತಂದುಕೊಟ್ಟಿದ್ದರು. ಪಾಕಿಸ್ತಾನದ ಬೌಲರ್ ಗಳನ್ನು ಧೈರ್ಯದಿಂದ ಎದುರಿಸಿ ಸಮಯೋಚಿತ ಆಟವಾಡಿದ ಕೇಶವ್ ಮಹಾರಾಜ್ ತಂಡಕ್ಕೆ ಹೀರೋ ಎನಿಸಿಕೊಂಡರೆ ಪಾಕಿಸ್ತಾನ ಪಾಳಿಗೆ ವಿಲನ್ ಆಗಿದ್ದಾರೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 46.4 ಓವರ್‌ಗಳಲ್ಲಿ 270 ರನ್ ಗಳಿಸಿತ್ತು. ಆ ಬಳಿಕ ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 47.2 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 271 ರನ್ ಗಳಿಸಿ ಗೆಲುವಿನ ಸಹಿ ಸವಿಯಿತು. ಭಾರತ ಮೂಲದ ಕೇಶವ್ ಮಹಾರಾಜ್ ಅವರು ಪಾಕಿಸ್ತಾನದ ವಿರುದ್ಧದ ಗೆಲುವಿನ ನಂತರ ತಮ್ಮ Instagram ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಆ ಪೋಸ್ಟ್ ಸಖತ್ ವೈರಲ್​ ಆಗುತ್ತಿದೆ.

ಏಕೆಂದರೆ ಆ ಪೋಸ್ಟ್ನಲ್ಲಿ ಜೈ ಶ್ರೀ ಹನುಮಾನ್​​​ ಎಂದು ದಕ್ಷಿಣ ಆಫ್ರಿಕಾ ಸ್ಟಾರ್ ಆಲ್​​ ರೌಂಡರ್ ಜಪಿಸಿದ್ದಾರೆ. ನನಗೆ ದೇವರಲ್ಲಿ ನಂಬಿಕೆ ಇದೆ. ನಮ್ಮ ಆಟಗಾರರಾದ ಶಮ್ಸಿ ಮತ್ತು ಮಾರ್ಕ್ರಾಮ್ ಅದ್ಭುತವಾಗಿ ಆಡಿದರು. ಇದು ನಮ್ಮ ಪಾಲಿಗೆ ವಿಶೇಷ ಸಾಧನೆ. ಸ್ಟಾರ್ ಆಲ್‌ರೌಂಡರ್ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ‘ಜೈ ಶ್ರೀ ಹನುಮಾನ್’ ಎಂದು ಬರೆದಿದ್ದಾರೆ.

ಭಾರತೀಯ ಮೂಲದ ಕೇಶವ ಮಹಾರಾಜ್ ಫೆಬ್ರವರಿ 7, 1990 ರಂದು ಡರ್ಬನ್‌ನಲ್ಲಿ ಜನಿಸಿದರು. ಆಂಜನೇಯ ಸ್ವಾಮಿ ಹೆಚ್ಚು ಪೂಜಿಸುವ ಮಹಾರಾಜ್​ ತಮ್ಮ ಇನ್‌ಸ್ಟಾ ಬಯೋದಲ್ಲೂ ಜೈ ಶ್ರೀ ರಾಮ್, ಜೈ ಶ್ರೀ ಹನುಮಾನ್ ಎಂದು ಬರೆದಿದ್ದಾರೆ. ಅಲ್ಲದೇ, ಅವರ ಬ್ಯಾಟ್ ಮೇಲೆಯೂ ಓಂ ಎಂದು ಬರೆಯಲಾಗಿದೆ ಎಂಬುದು ಗಮನಾರ್ಹ ಅಂಶವಾಗಿದೆ.

ಭಾರತದ ಮೂಲವನ್ನು ಮರೆಯದ ಸ್ಟಾರ್ ಆಲ್ ರೌಂಡರ್ ಕೇಶವ್ ಮಹಾರಾಜ್​ ಆಗಾಗ ಭಾರತಕ್ಕೆ ಬಂದು ಇಲ್ಲಿನ ಪ್ರಸಿದ್ಧ ಪುರಾಣ ದೇಗುಲಗಳಲ್ಲಿ ದರ್ಶನ ಪಡೆದುಕೊಳ್ಳುತ್ತಾರೆ. ಐಪಿಸಿ ಏಕದಿನ ವಿಶ್ವಕಪ್​​ ಪ್ರಾರಂಭವಾಗುವ ಮೊದಲು ಮಹಾರಾಜ್ ಅವರು ತಿರುವನಂತಪುರಂ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

Pragati TV Social Connect for more latest u

Leave a Reply

Your email address will not be published. Required fields are marked *