ಡ್ರಗ್ ಮಾಫಿಯಾದೊಂದಿಗೆ ಖಾಕಿ ಕೈಜೋಡಿಕೆ! ಇನ್ಸ್‌ಪೆಕ್ಟರ್ ಸೇರಿದಂತೆ 11 ಪೊಲೀಸ್ ಸಿಬ್ಬಂದಿ ಅಮಾನತ್ತು.

ಡ್ರಗ್ ಮಾಫಿಯಾದೊಂದಿಗೆ ಖಾಕಿ ಕೈಜೋಡಿಕೆ! ಇನ್ಸ್‌ಪೆಕ್ಟರ್ ಸೇರಿದಂತೆ 11 ಪೊಲೀಸ್ ಸಿಬ್ಬಂದಿ ಅಮಾನತ್ತು.

ಬೆಂಗಳೂರು: ಡ್ರಗ್ಸ್ ಮುಕ್ತ ಕರ್ನಾಟಕ ಎಂಬ ಸಂಕಲ್ಪದೊಂದಿಗೆ ಸರ್ಕಾರ ಕಾರ್ಯನಿರ್ವಹಿಸುತ್ತಿದ್ದರೆ, ಮಾಫಿಯಾ ವಿರುದ್ಧ ಹೋರಾಟ ನಡೆಸಬೇಕಾದ ಖಾಕಿ ಧಾರಿ ಶಕ್ತಿ ಮಾಫಿಯಾ ಪಾಲಾಗಿದೆ ಎಂಬ ಆಘಾತಕಾರಿ ಬೆಳವಣಿಗೆ ಬೆಳಕಿಗೆ ಬಂದಿದೆ. ಚಾಮರಾಜಪೇಟೆ ಠಾಣೆಯ ಇನ್ಸ್ಪೆಕ್ಟರ್ ಟಿ. ಮಂಜಣ್ಣ ಸೇರಿ 11 ಪೊಲೀಸ್ ಸಿಬ್ಬಂದಿ ಡ್ರಗ್ ಪೆಡ್ಲರ್‌ಗಳ ಜೊತೆ ಮೈತ್ರಿ ಸಾಧಿಸಿದ್ದೆಂದು ತನಿಖೆ ದೃಢಪಡಿಸಿದೆ.

ಡ್ರಗ್ ಡೀಲಿಂಗ್‌ಗೆ ‘ಪೊಲೀಸ್ ರಕ್ಷೆ’?

ಆರ್ಆರ್ ನಗರ ಪೊಲೀಸರು ಟೈಡಲ್ ಮಾತ್ರೆಗಳ ಪೆಡ್ಲಿಂಗ್ ಮಾಫಿಯಾದ ಮೇಲೆ ಇತ್ತೀಚೆಗೆ ದಾಳಿ ನಡೆಸಿ, ಸಲ್ಮಾನ್ ಅಲಿಯಾಸ್ ಪಾಪ, ಪುಟಾಟ್, ನಯಾಜ್, ನವಾಜ್, ರೇಷ್ಮಾ ಸೇರಿ 6 ಮಂದಿಯನ್ನು ಬಂಧಿಸಿದ್ದರು. ಅವರಿಂದ ₹4 ಲಕ್ಷ ನಗದು ಮತ್ತು 1,000 ಟೈಡಲ್ ಟ್ಯಾಬ್ಲೆಟ್ಗಳು ವಶಪಡಿಸಿಕೊಳ್ಳಲಾಗಿತ್ತು.

ತನಿಖೆಯಲ್ಲಿ ಚಾಮರಾಜಪೇಟೆ ಹಾಗೂ ಜೆಜೆ ನಗರ ಠಾಣೆಯ ಕೆಲವು ಪೊಲೀಸರೇ ಪೆಡ್ಲರ್ಗಳಿಗೆ ರಕ್ಷಕವಾಗಿದ್ದರು ಎಂಬ ಶಾಕಿಂಗ್ ವಿವರಗಳು ಬಹಿರಂಗವಾಗಿವೆ. ಪೆಡ್ಲರ್‌ಗಳಿಂದ ಪ್ರತಿ ತಿಂಗಳು ₹1 ರಿಂದ ₹1.5 ಲಕ್ಷಕಮಿಷನ್ ಪಡೆಯುತ್ತಿದ್ದರೆಂಬ ಮಾಹಿತಿ ಲಭ್ಯವಾಗಿದೆ.

ಸಸ್ಪೆಂಡ್ ಆದ ಪೊಲೀಸ್ ಸಿಬ್ಬಂದಿ:

ಚಾಮರಾಜಪೇಟೆ ಠಾಣೆಯಿಂದ:

  • ಇನ್ಸ್‌ಪೆಕ್ಟರ್ ಟಿ. ಮಂಜಣ್ಣ
  • ಎಸ್‌ಬಿ ಕಾನ್ಸ್ಟೇಬಲ್ ಶಂಕರ್
  • ಪ್ರಸನ್ನ, ಶಿವರಾಜ್, ಆನಂದ್, ರಮೇಶ್ ಬಾನೋಂದ್

ಜೆಜೆ ನಗರ ಠಾಣೆಯಿಂದ:

  • ಕುಮಾರ್
  • ಆನಂದ
  • ಬಸವಣ್ಣ
  • ಮಹೇಶ್

ತನಿಖೆ ಮತ್ತು ಕ್ರಮ

ಈ ಘಟನೆ ಸಂಬಂಧ ಪಶ್ಚಿಮ ವಿಭಾಗ ಡಿಸಿಪಿ ಗಿರೀಶ್ ಅವರ ಶಿಫಾರಸಿನ ಮೇರೆಗೆ ಎಸಿಪಿ ಚಂದನ್ ತನಿಖೆ ನಡೆಸಿದ್ದು, ಸಾಕ್ಷ್ಯಾಧಾರಗಳ ಆಧಾರದ ಮೇಲೆ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ 11 ಮಂದಿ ಪೊಲೀಸರನ್ನು ಅಮಾನತ್ತಿಗೆ ಒಳಪಡಿಸಿದ್ದಾರೆ.

ತನಿಖೆ ಇನ್ನೂ ಮುಂದುವರಿದಿದೆ!

ನಗರದ ಇನ್ನೂ ಹಲವು ಠಾಣೆಗಳ ಪೊಲೀಸರು ಹಾಗೂ ಸಿಬ್ಬಂದಿಗಳು ಡ್ರಗ್ ಜಾಲದಲ್ಲಿ ಭಾಗಿಯಾಗಿರುವ ಶಂಕೆ ಇದೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ತನಿಖೆ ನಡೆಯುತ್ತಿದೆ. ಈ ಪ್ರಕರಣ ಡ್ರಗ್ ಮಾಫಿಯಾ ಹಾಗೂ ಅದರ ಪೊಲೀಸರೂ ಸೇರಿರುವ ಬಲವಾದ ನೆಟ್‌ವರ್ಕ್‌ನ್ನು ಬಹಿರಂಗಪಡಿಸಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *