ರಾಜ್ಯ ರಾಜಕೀಯದ ಬಗ್ಗೆ ಕೋಡಿಶ್ರೀ ಭವಿಷ್ಯ: ಸಿಎಂ ಬದಲಾವಣೆಯಾಗಲಿದ್ದಾರಾ? ಸ್ವಾಮೀಜಿ ಹೇಳಿದ್ದೇನು?

ಕೆಲ ದಿನಗಳ ಹಿಂದೆ ದೇಶಕ್ಕೆ ಗಂಡಾಂತರ ಕಾದಿದೆ. ಭಾರಿ ಮಳೆ, ಭೂ ಕುಸಿತ, ಪ್ರವಾಹ ಸಂಭವಿಸಲಿದೆ ಎಂದು ಭವಿಷ್ಯ ನುಡಿದಿದ್ದ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಅಂದು ತಾವು ಹೇಳಿದ ಭವಿಷ್ಯ ನಿಜವಾಗಿದೆ ಎಂದಿದ್ದಾರೆ. ಅಲ್ಲದೇ ಜಗತ್ತಿನಲ್ಲಿ ರೋಗ ದಿನಗಳು ಹೆಚ್ಚಾಗುವ ಸಾಧ್ಯತೆ ಇದೆ.

ಅಲ್ಪ ಆಯಸ್ಸು ಕಡಿಮೆಯಾಗುತ್ತಿದೆ. ಹೆಣ್ಣು, ಗಂಡು ಮಾನಸಿಕ ಸ್ಥೈರ್ಯ ಕಳೆದುಕೊಳ್ಳಲಿದ್ದಾರೆ. ಬರುವ ದಿನಗಳು ಅಷ್ಟು ಶುಭವಿಲ್ಲ ಎಂದಿದ್ದಾರೆ.

ಬೆಳಗಾವಿಯ ರಾಮತೀರ್ಥನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೋಡಿಮಠದ ಶ್ರೀಗಳು, ಬರುವ ದಿನಗಳಲ್ಲಿ ಒಳ್ಳೆಯ ದಿನಗಳು ಸಹ ಇವೆ. ವಿಶೇಷವಾಗಿ ಕಪ್ಪು, ಬೆಳಕಿನಲ್ಲಿ ಕಪ್ಪು ಹೆಚ್ಚಾಗಿದೆ ಎಂದರು.

ರಾಜ್ಯ ರಾಜಕರಣದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಮಾರ್ಮಿಕವಾಗಿ ನುಡಿದ ಸ್ವಾಮೀಜಿ, ಸನ್ಯಾಸಿ ಕಥೆಯೊಂದನ್ನು ಉಡಾಹರಣೆಯಾಗಿ ನೀಡಿದ್ದಾರೆ. ಒಬ್ಬ ಸನ್ಯಾಸಿ ತಪ್ಪಸ್ಸಿಗೆ ಕುಳಿತಾಗ ಒಬ್ಬ ಬೇಡ ಜಿಂಕೆ ಭೇಟೆಯಾಡಲು ಬರುತ್ತಾನೆ. ಸನ್ಯಾಸಿ ಮುಂದೆ ಜಿಂಕೆ ಓಡಿ ಹೋಗುತ್ತದೆ. ಆಗ ಬೇಡ ಸನ್ಯಾಸಿಗೆ ಕೇಳುತ್ತಾನೆ. ಸ್ವಾಮಿ ಜಿಂಕೆ ಓಡಿ ಹೋಯಿತಾ? ಎಂದು. ಈ ವೇಳೆ ಸ್ವಾಮೀಜಿ ಇಕ್ಕಟ್ಟಿಗೆ ಸಿಲುಕುತ್ತಾರೆ. ಜಿಂಕೆ ಹೋಯಿತು ಎಂದರೆ ಅದನ್ನು ಬೇಡ ಕೊಂದು ಬಿಡುತ್ತಾನೆ. ಆ ಪಾಪ ನನಗೆ ಬಂದು ಬಿಡುತ್ತದೆ. ಇಲ್ಲ ಎಂದು ಹೇಳಿದರೆ ಸುಳ್ಳಾಡಿದಂತಾಗುತ್ತದೆ. ಇಂತಹ ಸಂದಿಗ್ಧಸ್ಥಿತಿಯಲ್ಲಿ ಸನ್ಯಾಸಿ ಒಂದು ಮಾತು ಹೇಳುತ್ತಾನೆ. ಯಾವುದು ನೋಡಿತೋ ಅದು ಮಾತನಾಡಲ್ಲ, ಯಾವುದು ಮಾತನಾಡಿತೋ ಅದು ನೋಡಲ್ಲ. ಕಣ್ಣು ನೋಡುತ್ತದೆ ಆದರೆ ಮಾತನಾಡಲ್ಲ. ನಾಲಿಗೆ ಮಾತನಾಡುತ್ತೆ. ಆದರೆ ನೋಡುವುದಿಲ್ಲ. ಹಾಗೇ ರಾಜಕಾರಣದ ಬಗ್ಗೆ ಹೇಳಬೇಕಾದರೆ ಎಚ್ಚರಿಕೆಯಿಂದ ಹೇಳಬೇಕಾಗುತ್ತದೆ ಎಂದರು.

ಇದೇ ವೇಳೆ ರಾಷ್ಟ್ರ ರಾಜಕಾರಣದ ಬಗ್ಗೆ, ಮಹಾಭಾರತದಲ್ಲಿ ಕೃಷ್ಣ ಇದ್ದ ಎಂದು ಭೀಮ ಗೆದ್ದ. ದುರ್ಯೋಧನ ಸೋತ. ರಾಷ್ಟ್ರ ರಾಜಕಾರಣದಲ್ಲಿ ಕೃಷ್ಣ ಇಲ್ಲ. ದುರ್ಯೋಧನ ಗೆಲ್ಲುತ್ತಾನೆ. ಭೀಮ ಸೋಲುತ್ತಾನೆ. ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಮಹಾಭಾರತದಲ್ಲಿ ಅಭಿಮನ್ಯುವನ್ನು ಮೋಸದಿಂದ ಕತ್ತರಿಸುತ್ತಾರೆ. ರಾಜ್ಯದಲ್ಲಿ ಸಿಎಂ ಬದಲಾವಣೆ ಸದ್ಯಕ್ಕೆ ತೊಂದರೆ ಇಲ್ಲ. ಪ್ರಜಾಪ್ರಭುತ್ವದಲ್ಲಿ ಮತದಾರರು ಮತವನ್ನು ದಾನ ಮಾಡುತ್ತಿಲ್ಲ. ಮಾರಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

ಇನ್ನು ರಾಜ್ಯದಲ್ಲಿ ಭೀಕರ ಮಳೆಯಾಗುತ್ತದೆ. ಗುಡ್ಡ ಕುಸಿತವಾಗುತ್ತದೆ. ಸಾವು, ನೋವು ಸಂಭವಿಸುತ್ತದೆ ಎಂದು ಹೇಳಿದ್ದೆ. ಅದು ಅಮವಾಸ್ಯೆಯವರೆಗೂ ಇರುತ್ತದೆ ಎಂದರು.

Leave a Reply

Your email address will not be published. Required fields are marked *