2023ರ ವಿಶ್ವಕಪ್​​ಗಾಗಿ ಕೊಹ್ಲಿ ಸ್ಪೆಷಲ್​ ಡಯಟ್​; ಹೇಗಿದೆ ಕೊಹ್ಲಿಯ ಡಯಟ್ ಮೆನು..?

2023ರ ಒನ್ಡೆ ವಿಶ್ವಕಪ್​​​ ಫಸ್ಟ್​​​ ಹಾಫ್​​ ಎಂಡ್​ ಮುಗಿದಿದೆ. ಟೀಮ್ ಇಂಡಿಯಾ ಆಡಿದ ಐದಕ್ಕೆ ಐದು ಪಂದ್ಯ ಗೆದ್ದು ಸೋಲಿಲ್ಲದ ಸರದಾರನಾಗಿ ಮೆರೆದಾಡ್ತಿದೆ. ಸೆಮಿಫೈನಲ್ ಎಂಟ್ರಿಕೊಡಲು ಇನ್ನೊಂದೇ ಹೆಜ್ಜೆ ಬಾಕಿ ಇದೆ. ಭಾನುವಾರ ಮ್ಯಾಚ್ನಲ್ಲಿ ಇಂಗ್ಲೆಂಡ್ ಮಣಿಸಿದ್ರೆ ಸಾಕು ಸೆಮಿಫೈನಲ್ ಟಿಕೆಟ್​​ ಕನ್ಫರ್ಮ್​ ಆಗಲಿದೆ. ​

ಬಲಾಢ್ಯ ತಂಡಗಳನ್ನೇ ಮಣ್ಣುಮುಕ್ಕಿಸಿರೋ ಭಾರತದ ವಿಜಯಯಾತ್ರೆ ಹಿಂದೆ ಡಯಟ್​​ ಪ್ಲಾನ್ ಅಡಗಿದೆ. ಹೌದು, ಇಡೀ ತಂಡವೇ ವಿಶ್ವಕಪ್​ ಎತ್ತಿಹಿಡಿಯಬೇಕೆಂದು ಕಟ್ಟುನಿಟ್ಟಾಗಿ​ ಡಯಟ್​​​​​ ಫಾಲೋ ಮಾಡ್ತಿದೆ. ಅದ್ರಲ್ಲೂ ಎಸ್ಪೆಷಲಿ ಕಿಂಗ್ ಕೊಹ್ಲಿಯಂತೂ ಈ ವಿಶ್ವಕಪ್​​ಗಾಗಿನೇ ಸ್ಪೆಷಲ್​​​ ಡಯಟ್​ ಪ್ಲಾನ್​ ಫಾಲೋ ಮಾಡ್ತಿದ್ದಾರೆ.

ಯುವಕ

5 ಪಂದ್ಯ, 354 ರನ್​​​..1 ಶತಕ ಹಾಗೂ 3 ಹಾಫ್​​ಸೆಂಚುರಿ.. ಇದು ಕಿಂಗ್ ಕೊಹ್ಲಿ ಪ್ರಸಕ್ತ ವಿಶ್ವಕಪ್​​ನಲ್ಲಿ ಹಾಕಿದ ರನ್​ ಗುಡ್ಡೆ. ಆಡಿದ ಐದು ಪಂದ್ಯಗಳಲ್ಲೇ ವಿರಾಟರೂಪ ತೋರಿಸಿದ್ದಾರೆ. ಅವರ ಟೈಮಿಂಗ್​​, ಟೆಂಪರ್​ಮೆಂಟ್​​​ ಬಗ್ಗೆ ಮಾತಾಡುವ ಹಾಗಿಲ್ಲ. ಸಂದರ್ಭಕ್ಕೆ ತಕ್ಕಂತೆ ಬ್ಯಾಟ್ ಬೀಸಿ ಟೀಮ್ ಇಂಡಿಯಾವನ್ನು ಗೆಲುವಿನ ದಡ ಸೇರಿಸ್ತಿದ್ದಾರೆ. ಮೊದಲ ಐದು ಪಂದ್ಯಗಳಲ್ಲೆ 354 ರನ್​ ಹೊಡೆಯೋದು ಸುಲಭದ ಮಾತಲ್ಲ. ಆದ್ರೆ ಕೊಹ್ಲಿ ಮಾತ್ರ ಸುಲಭವಾಗಿ ರನ್​ ಭಾರಿಸಿದ್ದಾರೆ. ಇದಕ್ಕೆಲ್ಲಾ ರನ್ ಮಷೀನ್ ​​​ನ ಆ ಸ್ಪೆಷಲ್​​​​​​​​​ ಡಯಟ್ ಕಾರಣ. ಹೌದು, ಹೌದು ಟೂರ್ನಿಯನ್ನ ಚಾಲೆಂಜಸ್ ಆಗಿ ಸ್ವೀಕರಿಸುವ ವಿರಾಟ್​​​​ ಪ್ರಸಕ್ತ ವಿಶ್ವಕಪ್​​ಗಾಗಿ ಡಿಫರೆಂಟ್​​ ಡಯಟ್​​ ಪ್ಲಾನ್​​ ಹೊಂದಿದ್ದಾರೆ. ಆ ಡಯಟ್,​​​​​​ ಸೆಂಚುರಿ ಸಾಮ್ರಾಟವನ್ನ ವಿಶ್ವಕಪ್ ದಂಗಲ್​​ನಲ್ಲಿ ಫಿಟ್​​ & ಫೈನ್​​ ಆಗಿ ಇರುವಂತೆ ಮಾಡಿದೆ.

ವಿರಾಟ್ ಕೊಹ್ಲಿ ಸಸ್ಯಹಾರಿ ಪ್ರೊಟೀನ್​​ಯುಕ್ತ ಆಹಾರಗಳಾದ ಸೋಯಾ ಮತ್ತು ಫನ್ನೀರ್​ ಅನ್ನ ಸೇವಿಸುತ್ತಾರೆ. ಇದರ ಜೊತೆ ಹೆವಿ ಫುಡ್​​​​ ಬದಲು ಆವಿಯಿಂದ ಬೇಯಿಸಿದ ಆಹಾರ ಹೊಂದುತ್ತಾರೆ. ತರಕಾರಿ ಆಧಾರಿತ ಸೋಯಾ ಹಾಗೂ ಸಸ್ಯಹಾರಿಯುಕ್ತ ಆಹಾರ ಸೇವಿಸುವುದು ರೂಢಿ. ಊಟದಲ್ಲಿ ಸಾಧ್ಯವಾದಷ್ಟು ಡೈರಿ ಪ್ರಾಡೆಕ್ಟ್​​ ಗೆ ಬ್ರೇಕ್ ಕಡಿವಾಣ ಹಾಕುತ್ತಾರೆ. ರಾಗಿ ದೋಸೆ ಕೊಹ್ಲಿಯ ನೆಚ್ಚಿನ ಆಹಾರವಾಗಿದೆ. ಮಿಲೆಟ್​​​​ ದೋಸೆ, ಮಿಲೆಟ್​​​​ ಇಡ್ಲಿ, ಉರ್ದ್​​ ಮತ್ತು ಚನ ದಾಲ್​​​​​​​​​ ನಿಂದ ತಯಾರಿಸಿದ ಇಡ್ಲಿ ತಿನ್ನುತ್ತಾರೆ. ಗೆಲುವಿನ ನಂತ್ರ ಸಂಭ್ರಮಾಚರಣೆ ಇದ್ದರೆ ನಿಯಮಿತ ಮದ್ಯಪಾನ ಮಾಡುತ್ತಾರೆ.

ಕಿಂಗ್ ಕೊಹ್ಲಿ ಇಂದು ಸೂಪರ್​ಸ್ಟಾರ್ ಆಗಿರಬಹುದು. ಆದ್ರೆ ಅವರೊಳಗಿನ ಸಾಧನೆಯ ಹಸಿವಿನ ದಾಹ ಮಾತ್ರ ಇನ್ನೂ ಕಮ್ಮಿ ಆಗಿಲ್ಲ. ವರ್ಷಗಳೂ ಉರುಳಿದಂತೆ ಅವರೊಳಗಿನ ಹೋರಾಟದ ಕಿಚ್ಚು ಹೆಚ್ಚಾಗುತ್ತಲೇ ಇದೆ. ಅದಕ್ಕೆ 2023ರ ವಿಶ್ವಕಪ್ ಸ್ಪೆಷಲ್​​​​ ಡಯಟ್​​​ ಉತ್ತಮ ನಿದರ್ಶನ.

Pragati TV Social Connect for more latest u

Leave a Reply

Your email address will not be published. Required fields are marked *