ಕುಕ್ಕೆ ಸುಬ್ರಹ್ಮಣ್ಯದ ರಸ್ತೆ ಬದಿ ಅನಾಥವಾಗಿದ್ದ ಯುವಕ : ತಾಯಿ ಮಡಿಲು ಸೇರಿಸಲು ಶ್ರಮ

ಕುಕ್ಕೆ ಸುಬ್ರಹ್ಮಣ್ಯ(ದಕ್ಷಿಣ ಕನ್ನಡ): ಪತ್ರಕರ್ತರು ಸುದ್ದಿಗಳಿಗೆ ಮಾತ್ರ ಸೀಮಿತವಾಗಿರದೆ ಸಾಮಾಜಿಕವಾಗಿಯೂ ತೊಡಗಿಕೊಂಡಿರುತ್ತಾರೆ. ಇದಕ್ಕೆ ಹೊಸ ನಿದರ್ಶನ ಸಿಕ್ಕಿದೆ. ಕಳೆದ ತಿಂಗಳಿನಿಂದ ಕುಕ್ಕೆ ಸುಬ್ರಹ್ಮಣ್ಯದ ಫುಟ್‌ಪಾತ್‌ನಲ್ಲಿ ಜೀವನ ಕಳೆಯುತ್ತಿದ್ದ ತಮಿಳುನಾಡಿನ ಯುವಕನನ್ನು ಆತನ ಮನೆಗೆ ಸೇರಿಸುವಲ್ಲಿ ವರದಿಗಾರರು ಸಾಕಷ್ಟು ಪ್ರಯತ್ನಿಸಿದ್ದಾರೆ.

ಕೊಯಮತ್ತೂರಿನ ಸತೀಶ್ ಎಂಬ ಯುವಕ ಸುಬ್ರಹ್ಮಣ್ಯದ ರಸ್ತೆಬದಿಯಲ್ಲಿ ಮಳೆ, ಬಿಸಿಲೆನ್ನದೆ ದಿನ ದೂಡುತ್ತಿದ್ದ. ಆತನಿಗೆ ತಮಿಳು ಬಿಟ್ಟು ಬೇರೆ ಭಾಷೆ ಗೊತ್ತಿಲ್ಲ. ಯುವಕನನ್ನು ಗಮನಿಸಿದ ಸುಬ್ರಹ್ಮಣ್ಯದ ಪತ್ರಕರ್ತ ಶಿವಭಟ್ ಸಂಹವನ ಕೊರತೆಯ ನಡುವೆಯೂ ಮಾತನಾಡಿಸಿದ್ದರು. ತಮಿಳು ಭಾಷೆಯಲ್ಲಿ ಪ್ರತಿಕ್ರಿಯೆ ನೀಡಿದ ಯುವಕ ತಾನು ಒಂದು ತಿಂಗಳಿನಿಂದ ಇಲ್ಲಿರುವುದಾಗಿ ತಿಳಿಸಿದ್ದಾನೆ. ಈ ಬಗ್ಗೆ ಕೂಡಲೇ ಗ್ರಾ.ಪಂ ಪಿಡಿಒ ಮಹೇಶ್ ಅವರಿಗೆ ಮಾಹಿತಿ ನೀಡಲಾಗಿತ್ತು.

ಇದೇ ಸಮಯದಲ್ಲಿ ಸಾಮಾಜಿಕ ಕಾರ್ಯಕರ್ತ ರವಿ ಕಕ್ಕೆಪದವು ಮತ್ತು ಗ್ರಾ.ಪಂ ಸದಸ್ಯ ಹರೀಶ್ ಇಂಜಾಡಿ ಎಂಬವರು ಆಗಮಿಸಿ, ಇತರ ಕೆಲವರ ಸಹಕಾರದೊಂದಿಗೆ ಸತೀಶ್​ನನ್ನು ಕರೆದುಕೊಂಡು ಹೋಗಿ ಸ್ನಾನ ಮಾಡಿಸಿದ್ದರು. ಹೊಸ ಬಟ್ಟೆ ನೀಡಿ, ತಿಂಡಿ ತಿನ್ನಿಸಿ ಉಪಚರಿಸಿದ್ದರು. ನಂತರ ಮತ್ತಷ್ಟು ವಿಚಾರಿಸಿದಾಗ, ತನ್ನ ಹೆಸರು ತಿಳಿಸಿ, ಕೊಯಮತ್ತೂರಿನಲ್ಲಿ ತನಗೆ ತಾಯಿ ಮತ್ತು ಸಹೋದರಿಯರು ಇದ್ದಾರೆ ಎಂದು ವಿವರಿಸಿದ್ದಾನೆ. ಆಗ ಪತ್ರಕರ್ತ ಶಿವಭಟ್ ಕೊಯಮತ್ತೂರಿನ ಪೊಲೀಸರ ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಿದ್ದರು. ಆದರೆ ಯಾವುದೇ ಪ್ರಯೋಜನ ಆಗಲಿಲ್ಲ.

Leave a Reply

Your email address will not be published. Required fields are marked *