ಆದಿಚುಂಚನಗಿರಿ ಶ್ರೀಗೆ ಬಹಿರಂಗ ಕ್ಷಮೆಯಾಚಿಸಿದ ಕುಮಾರಸ್ವಾಮಿ.

ಆದಿಚುಂಚನಗಿರಿ ಶ್ರೀಗೆ ಬಹಿರಂಗ ಕ್ಷಮೆಯಾಚಿಸಿದ ಕುಮಾರಸ್ವಾಮಿ.

ಜಾತೀಯ ರಾಜಕಾರಣ ಕುರಿತ ಹಳೆಯ ಹೇಳಿಕೆ.

ಮಂಡ್ಯ : ಜಾತಿಯ ಹೆಸರಿನಲ್ಲಿ ಧಾರ್ಮಿಕ ಕ್ಷೇತ್ರ ದುರುಪಯೋಗ ಪಡಿಸಿಕೊಳ್ಳುವುದು ಯಾವ ರಾಜಕಾರಣಿಗೂ ಶೋಭೆ ತರುವುದಿಲ್ಲ ಎಂಬಿತ್ಯಾದಿ ಹೇಳಿಕೆ ನೀಡಿದ್ದ ಹೆಚ್.ಡಿ. ಕುಮಾರಸ್ವಾಮಿ, ಮಂಡ್ಯದ ವಿಸಿ ಫಾರಂನಲ್ಲಿ ನಡೆದ ಕೃಷಿ ಮೇಳದಲ್ಲಿ ಆದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳಿಗೆ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ಈ ಹಿಂದೆ ನಾನು ನೀಡಿದ್ದ ಹೇಳಿಕೆಯಿಂದ ಸ್ವಾಮೀಜಿಗಳಿಗೆ ಯಾವುದೇ ರೀತಿಯ ಅಪಚಾರ ಆಗಿದ್ದರೆ ಸಾರ್ವಜನಿಕವಾಗಿ ಕ್ಷಮೆ ಕೋರುತ್ತೇನೆಂದ ಅವರು, ನಮ್ಮ ನಿಷ್ಠೆ ಹೃದಯದಲ್ಲಿದೆ, ಅದನ್ನು ಹೊರಗೆ ತೋರಿಸಿಕೊಳ್ಳಬೇಕಾಗಿಲ್ಲ. ಪರಮಪೂಜ್ಯರಿಗೆ ನನ್ನಿಂದ ಏನಾದರೂ ಅಪಚಾರ ಆಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಹೇಳಿದರು.

ಈ ಹಿಂದೆ ಮಾಧ್ಯಮದೊಂದಿಗೆ ಮಾತನಾಡಿದ ಹೆಚ್.ಡಿ.ಕೆ, ತಾವು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾಗಲೂ ಅಧಿಕಾರ ಕಳೆದುಕೊಂಡಾಗ ಯಾವುದೇ ಮಠಾಧೀಶರ ನೆರವು ಕೇಳಿರಲಿಲ್ಲ. ಮಠಾಧೀಶರ ಕೆಲಸವೇ ಬೇರೆ ಎಂದು ಹೇಳಿದ್ದರು. ರಾಜ್ಯದಲ್ಲಿ ನಡೆಯುತ್ತಿರುವ ಜಾತೀಯ ರಾಜಕಾರಣದಿಂದ ರಾಜ್ಯಕ್ಕೆ ನಷ್ಟವಾಗುತ್ತದೆ ಹೊರತು ಯಾರಿಗೂ ಲಾಭವಿಲ್ಲ. ಇದು ಸಮಾಜಗಳ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತದೆ ಎಂದಿದ್ದರು.ಇಂತಹ ಸ್ವಾಮಿಗಳು ಇಲ್ಲಿಗೆ ಬರಬಾರದು ಎನ್ನುವ ಅರ್ಥದಲ್ಲಿ ಹೇಳಿದ್ದೆ. ಅಂದರೆ ಅವರಿಗೆ ಅಗೌರವ ಆಗಬಾರದು ಎನ್ನುವ ನಿಟ್ಟಿನಲ್ಲಿ ಹೇಳಿದ್ದೆ ಅಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *