ಬೆಂಗಳೂರು : ಕರೂರ್ ವೈಶ್ಯ ಬ್ಯಾಂಕ್ ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಈ ನಿಮಿತ್ತ ಅರ್ಹ ಅಭ್ಯರ್ಥಿಗಳಿಂದ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆಸಕ್ತಿ ಇರುವವರು ಯಾವುದೇ ಅಭ್ಯರ್ಥಿಗಳು ಸೆಪ್ಟಂಬರ್ 15ರೊಳಗೆ ಅರ್ಜಿ ಸಲ್ಲಿಸುವಂತೆ ಅಧಿಸೂಚನೆ ತಿಳಿಸಿದೆ.
ಕರೂರ್ ವೈಶ್ಯ ಬ್ಯಾಂಕ್ ನಲ್ಲಿ ಅನೇಕ ಬ್ರಾಂಚ್ ಸೇಲ್ಸ್ ಮತ್ತು ಸರ್ವೀಸ್ ಮ್ಯಾನೇಜರ್ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಈ ಕೂಡಲೇ ಅರ್ಜಿ ಸಲ್ಲಿಸಬೇಕು. ಆಯ್ಕೆ ಆಗುವವರಿಗೆ ಭಾರತದಲ್ಲಿ ಎಲ್ಲಿ ಬೇಕಾದರೂ ಪೋಸ್ಟಿಂಗ್ ಸಿಗಲಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅದಕ್ಕು ಮೊದಲು ವಿದ್ಯಾರ್ಹತೆ ಏನಿರಬೇಕು, ಅರ್ಹತೆ, ವಯೋಮಿತಿ, ಅರ್ಜಿ ಸಲ್ಲಿಕೆ ಲಿಂಕ್ ಮುಂದಾದ ನೇಮಕಾತಿ ಮಾಹಿತಿ ಇಲ್ಲಿದೆ ನೋಡಿ.
ನೇಮಕಾತಿ ಫುಲ್ ಡಿಟೇಲ್ಸ್ ಇಲ್ಲಿದೆ
ನೇಮಕಾತಿ ಸಂಸ್ಥೆ: ಕರೂರ್ ವೈಶ್ಯ ಬ್ಯಾಂಕ್
ಹುದ್ದೆಗಳು ಹೆಸರು: ಬ್ರಾಂಚ್ ಸೇಲ್ಸ್ ಮತ್ತು ಸರ್ವೀಸ್ ಮ್ಯಾನೇಜರ್
ಎಷ್ಟು ಹುದ್ದೆಗಳು: ಅನೇಕ
ಪೋಸ್ಟಿಂಗ್ ಎಲ್ಲಿ: ಭಾರತದಲ್ಲಿ ಎಲ್ಲಿಯಾದರೂ
ಅರ್ಜಿ ಸಲ್ಲಿಕೆ ವಿಧಾನ: ಆನ್ಲೈನ್
ಅರ್ಜಿ ಸಲ್ಲಿಕೆ ಕೊನೆ ದಿನಾಂಕ: ಸೆಪ್ಟಂಬರ್ 15
ವಿದ್ಯಾರ್ಹತೆ ಏನಿರಬೇಕು?
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಇಲ್ಲವೇ ಮಂಡಳಿಯಿಂದ ಪದವಿ, ಸ್ನಾತಕೋತ್ತರ ಪದವಿ ಪಡೆದಿರುವುದು ಕಡ್ಡಾಯ ಎಂದು ನೇಮಕಾತಿ ಅಧಿಸೂಚನೆಯಲ್ಲಿ ಕರೂರ್ ವೈಶ್ಯ ಬ್ಯಾಂಕ್ ತಿಳಿಸಿದೆ.
ವಯಸ್ಸಿನ ಮಿತಿ ವಿವರ
ಕರೂರ್ ವೈಶ್ಯ ಬ್ಯಾಂಕ್ ಪ್ರಕಾರ, ಇಲ್ಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರಿಗೆ ಗರಿಷ್ಠ 35 ವರ್ಷ ಮೀರಿರಬಾರದು. ಅಂಹತವರು ಅರ್ಜಿ ಸಲ್ಲಿಸಬೇಕಿದ್ದು, ಜಾತಿ ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಸಿಗುತ್ತದೆ.
ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಬ್ಯಾಂಕ್ ಸ್ಕ್ರೀನಿಂಗ್ ಹಾಗೂ ಸಂದರ್ಶನ ನಡೆಸುತ್ತದೆ. ಅಲ್ಲಿ ಉತ್ತೀರ್ಣ ಆಗುವವರನ್ನು ಶಾರ್ಟ್ ಲಿಸ್ಟ್ ಸಿದ್ಧಪಡಿಸಿ ಪ್ರಕಟಿಸುತ್ತದೆ. ಸದ್ಯ ಮಾಸಿಕ ವೇತನ ನಿಯಮಾನುಸಾರ ಸಿಗಲಿದೆ. ಆಯ್ಕೆ ಆದವರಿಗೆ ಭಾರತದಲ್ಲಿ ಎಲ್ಲಿ ಬೇಕಾದರೂ ಉದ್ಯೋಗ ಸ್ಥಳ ಹಂಚಿಕೆ ಮಾಡಬಹುದು. ಎಲ್ಲ ಜಾತಿ ವರ್ಗದವರಿಗೂ ಅರ್ಜಿ ಶುಲ್ಕ ಇಲ್ಲ, ಉಚಿತವಾಗಿರಲಿದೆ ಎಂದು ಬ್ಯಾಂಕ್ ಅಧಿಸೂಚನೆ ತಿಳಿಸಿದೆ.
ಅರ್ಜಿ ಸಲ್ಲಿಕೆ ವಿಳಾಸ
ಆಸಕ್ತರು ಸೂಕ್ತ ದಾಖಲಾತಿಗಳ ಸಮೇತವಾಗಿ ಇಲ್ಲಿ ನೀಡಲಾಗಿರುವ ಕರೂರ್ ವೈಶ್ಯ ಬ್ಯಾಂಕ್ ಅಧಿಕೃತ ವೆಬ್ಸೈಟ್ https://careers.karurvysyabank.co.in/karurvysyabank/jobslist ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.
ನೆನಪಿಡಬೇಕಾದ ದಿನಗಳು
ಅರ್ಜಿ ಸಲ್ಲಿಕೆ ಆರಂಭ ದಿನ: 2024 ಆಗಸ್ಟ್ 06 ಅರ್ಜಿ ಸಲ್ಲಿಕೆ ಕಡೆಯ ದಿನಾಂಕ: 2024 ಸೆಪ್ಟೆಂಬರ್ 15