ಹುಬ್ಬಳ್ಳಿ; ಬಿಜೆಪಿಯವರು ಮಾಡಿದ ಹಗರಣ ಮೊದಲು ಒಪ್ಪಿಕೊಳ್ಳಬೇಕು ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹುಬ್ಬಳ್ಳಿಯಲ್ಲಿ ಹೇಳಿದ್ದಾರೆ.
ಮೈಸೂರು ನಗರಾಭಿವೃದ್ಧಿ ಹಾಗೂ ವಾಲ್ಮೀಕಿ ನಿಗಮದಲ್ಲಿ ಹಗರಣದಲ್ಲಿ ಸಿಎಂ ರಾಜೀನಾಮೆಗೆ ವಿಚಾರವಾಗಿ ವಿರೋಧ ಪಕ್ಷಗಳು ಒತ್ತಾಯ ನಡೆಸಿವೆ.
ಇದಕ್ಕೆ ಈಗಾಗಲೇ ಮುಖ್ಯಮಂತ್ರಿಗಳು ಸ್ಪಷ್ಟನೆ ಕೊಟ್ಟಿದ್ದಾರೆ. ವಿಪಕ್ಷಗಳಿಗೆ ಸಿಎಂ ಹೇಗೆ ಸ್ಪಷ್ಟನೇ ನೀಡಬೇಕು. ಬಿಜೆಪಿ ಕಾಲದಲ್ಲಿ ಏನು ಆಗಿದೆ ಮೊದಲು ಅವರನ್ನು ಹೇಳಲಿ ಎಂದು ಗುಡುಗಿದರು.
ಬಿಜೆಪಿ ಸ್ಪಷ್ಟೀಕರಣ ನೀಡಿದೆಯಾ?
ಬಿಜೆಪಿ ಅಧಿಕಾರವಧಿಯಲ್ಲಿ ನಡೆದ ಹಗರಣದ ಬಗ್ಗೆ ಬಿಜೆಪಿ ಸ್ಪಷ್ಟೀಕರಣ ನೀಡಿದೆಯಾ. ಅವರ ಕಾಲದಲ್ಲಿ ಆದ ಹಗರಣ ಬಗ್ಗೆ ಸ್ಪಷ್ಟೀಕರಣ ಕೊಟ್ಟಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿಯಲ್ಲಿ ಆದ ಹಗರಣ ಕುರಿತು ತಪ್ಪು ಮಾಹಿತಿ ಕೊಟ್ಟಿದ್ದೇವೆ ಅಂತಾರಾ. ಬಿಜೆಪಿಯವರು ಮಾಡಿದ ಹಗರಣ ಮೊದಲು ಒಪ್ಪಿಕೊಳ್ಳಬೇಕು ಅವರ ಕಾಲದಲ್ಲಿ ಏನು ಆಗಿದೆ ಸ್ಪಷ್ಟತೆ ಕೊಡಲಿ ಎಂದು ಸಚಿವರು ತಿಳಿಸಿದ್ದಾರೆ.
ವಿರೋಧ ಪಕ್ಷದವರು ಏಕೆ ಪಾದಯಾತ್ರೆ ಮಾಡುತ್ತಾರೆ ಎಂದು ಅವರನ್ನೇ ಕೇಳಬೇಕು. ನಮ್ಮ ಕಾಲದಲ್ಲಿ ತಪ್ಪಾಗಿದೆ ನಾವು ಸಹ ಕಾನೂನು ಬಾಹಿರವಾಗಿ ಕೊಟ್ಟಿದ್ದೇವೆ. ನಮ್ಮ ಕಾಲದಲ್ಲಿ 2019 ರಿಂದ 2024 ರವರೆಗೆ ಮುಡಾದಲ್ಲಿ ಹಂಚಿಕೆಯಾದ ಸೈಟ್ ಕಾನೂನು ಬಾಹಿರ ಆಗಿವೆ. ಈ ಬಗ್ಗೆ ಜನರು ಗಮನ ಹರಿಸುತ್ತಾರೆ. ಬಿಜೆಪಿ ಅವರು ತಾವು ಮಾಡಿದ ತಪ್ಪನ್ನು ಒಪ್ಪಿಕೊಳ್ಳಲಿ ಎಂದಿದ್ದಾರೆ.
ಇನ್ನು ಮುಂದೆ ಮಾತನಾಡಿದ ಸಂತೋಷ್ ಲಾಡ್, ನೀಟ್ ಸಿಇಟಿ ಪರೀಕ್ಷೆಯಲ್ಲಿ ಆದ ಹಗರಣ ಕುರಿತು ಅವರು ಮಾತನಾಡುತ್ತಾರಾ ಎಂದು ತಿಳಿಸಿದ್ದಾರೆ. ರಾಮನಗರ ಜಿಲ್ಲೆಯ ಹೆಸರು ಬದಲಾವಣೆಗೆ ಬಿಜೆಪಿ ವಿರೋಧ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಸಚಿವರು, ವಿರೋಧ ಪಕ್ಷದವ ಕೆಲಸವನ್ನು ಅವರು ಮಾಡ್ತಾ ಇದ್ದಾರೆ.
ಹೊಸ ತಾಲೂಕು ಹೊಸ ಜಿಲ್ಲೆ ಆಗುತ್ತೇವೆ ಅಭಿವೃದ್ಧಿಗಾಗಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ವಿವಿಧ ಭೇಡಿಕೆ ಕುರಿತು ಸರ್ಕಾರದ ಜೊತೆಗೆ ಈಡೇರಿಕೆಗಾಗಿ ಸಂಬಂಧಿಸಿದ ಸಚಿವರ , ಮುಖ್ಯಮಂತ್ರಿ ಗಳ ಜೊತೆಗೆ ಮಾತನಾಡುವೆ, ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ. ಇದು ಕೇವಲ ಕಲಘಟಗಿ ವಿಧಾನ ಕ್ಷೇತ್ರದ ಸಮಸ್ಯೆ ಅಲ್ಲಾ ಕರ್ನಾಟಕ ರಾಜ್ಯದಾದ್ಯಂತ ಸಮಸ್ಯೆ ಇದೆ. ನಾಳೆ ನಾಡಿದ್ದು ಬಾಕಿ ಇರುವ ಮಾಶಸಾನ ಬಿಡುಗಡೆ ಮಾಡುವೆ ಎಂದಿದ್ದಾರೆ.