ಕೆಂಗೇರಿ: ಉಪನಗರದ ಹೊಯ್ಸಳ ವೃತ್ತದಿಂದ ಗಣೇಶ ಮೈದಾನದವರೆಗೆ ಯಶವಂತಪುರ ವಿಧಾನಸಭಾ ಕ್ಷೇತ್ರ ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ, ಯಶವಂತಪುರ ವಿಧಾನಸಭಾ ಕ್ಷೇತ್ರ ಒಕ್ಕಲಿಗರ ಯುವ ವೇದಿಕೆ, ಹಲವು ದಲಿತ ಸಂಘಟನೆಗಳು ಮತ್ತು ಮಹಿಳಾ ಸಂಘಟನೆಗಳ ವತಿಯಿಂದ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ವಿರುದ್ಧ ಜಾತಿ ನಿಂದನೆ ಹಾಗೂ ಗುತ್ತಿಗೆದಾರ ಚೆಲುವರಾಜ ಅವರ ಪತ್ನಿ ವಿರುದ್ಧ ನೀಡಿದ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ ಸಾರ್ವಜನಿಕರು ಪ್ರಗತಿಪರರು ಜಾತ್ಯಾತೀತ ನಾಯಕರುಗಳು ಮೌನ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾದ ಎಸ್. ಟಿ. ಸೋಮಶೇಖರ್ ಭಾಗವಹಿಸಿದ್ದು ವಿಶೇಷವಾಗಿತ್ತು ಮೌನ ಪ್ರತಿಭಟನೆಯಲ್ಲಿ ಪಾಲ್ಗೊಂಡು ಎಸ್.ಟಿ.ಸೋಮಶೇಖರ್ ಮಾತನಾಡಿ, ಒಬ್ಬ ಜನಪ್ರತಿನಿಧಿ ದಲಿತ ಸಮುದಾಯದವರನ್ನು ಹಿಯಾಳಿಸಿ ಮಹಿಳೆಯರಿಗೆ ಅಗೌರವ ತೋರುವ ದರ್ಪ ಮೆರೆದಿದ್ದಾರೆ, ಬಿಜೆಪಿ ಶಾಸಕನ ದುರ್ವರ್ತನೆಯನ್ನು ಖಂಡಿಸಬೇಕಾದ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಬಾಯಿ ಮುಚ್ಚಿಕೊಂಡು ಕುಳಿತುಕೊಳ್ಳುವ ಮೂಲಕ ಮುನಿರತ್ನ ಹೇಳಿಕೆಯನ್ನು ಸಮರ್ಥಿಸುತ್ತಿದ್ದಾರೆ ಇದು ನ್ಯಾಯವೇ ಎಂದು ಪ್ರಶ್ನಿಸಿದರು. ನೂರಕ್ಕೆ ನೂರರಷ್ಟು ವೈರಲ್ ಆಗಿರುವ ಆಡಿಯೋದಲ್ಲಿ ಇರುವ ಧ್ವನಿ ಬಿಜೆಪಿ ಶಾಸಕ ಮುನಿರತ್ನ ರವರದೇ ಎಂದು ಖಚಿತಪಡಿಸಿದರು. ಬಿಜೆಪಿ ಹಾಗೂ ಜೆಡಿಎಸ್ ಪಕ್ಷದವರು ಬಾಯಿ ಮುಚ್ಚಿಕೊಂಡು ಕುಳಿತುಕೊಂಡಿದ್ದಾರೆ, ನಾನು ನಾನು ಸುಮ್ಮನೆ ಕೂರುವುದಿಲ್ಲ ಸಮಾಜದ ಪರವಾಗಿ ನ್ಯಾಯ ಒದಗಿಸಲು ಪಕ್ಷಾತೀತವಾಗಿ ಹೋರಾಟದಲ್ಲಿ ಪಾಲ್ಗೊಂಡಿದ್ದೇನೆ ಎಂದು ತಿಳಿಸಿದರು.
ಕ್ಷೇತ್ರದ ಸಾರ್ವಜನಿಕರು, ಮಹಿಳಾ ಸಂಘಟನೆಗಳು, ದಲಿತ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದಾಗ ಮಹಿಳೆಯಗೆ ಆದ ಅವಮಾನ ಹಾಗೂ ದಲಿತರನ್ನು ಹೀಯಾಳಿಸಿದಕ್ಕಾಗಿ ಸಾಮಾಜಿಕ ಬದ್ಧತೆಯಿಂದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹನುಮಂತರಾಯಪ್ಪ ಮಾತನಾಡಿ, ದಲಿತ ಸಮುದಾಯದವರನ್ನು ಹಾಗೂ ಮಹಿಳೆಯರನ್ನ ತುಚ್ಚವಾಗಿ ಕಾಣುವ ಮನೋಭಾವ ರೂಡಿಸಿಕೊಂಡಿರುವ ಮುನಿರತ್ನ ರವರಿಗೆ ಜನತೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದರು. ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ರಾಮೋಜಿ ಗೌಡ, ಮಾಜಿ ಪ್ರಧಾನ ಕಾರ್ಯದರ್ಶಿ ಬಿ .ಆರ್. ಶಿವಮಾದಯ್ಯ, ಜಿಲ್ಲಾ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷ ಜಿ.ಎಸ್. ಪುಟ್ಟೇಗೌಡ, ದೊಡ್ಡಬಿದರಕಲ್ಲು ವಾರ್ಡ್ ಕಮಿಟಿ ಸದಸ್ಯ ಎಂ. ಮಂಜುನಾಥ್, ಅಮೃತ್ ಗೌಡ, ಸೋಮನಹಳ್ಳಿ ಗ್ರಾ.ಪಂ ಉಪಾಧ್ಯಕ್ಷ ಕೇಶವ, ಹಾಗೂ. ಮಹಿಳಾ ಮುಖಂಡರಾದ ಡಾ. ಅನುಪಮಾ ಪಂಚಾಕ್ಷರಿ, ಸುಮಾ ಜನಾರ್ಧನ್ ರೋಹಿಣಿ, ಸುರೇಶ್, ಸಾರ್ವಜನಿಕರು ದಲಿತ ಸಂಘಟನೆಗಳು, ಮಹಿಳಾ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.