ದಸರಾ ಜಂಬೂ ಸವಾರಿಗೆ 18 ಆನೆಗಳ ಪಟ್ಟಿ ಸಿದ್ಧ, ಯಾವ್ಯಾವ ಆನೆ? ಕ್ಯಾಪ್ಟನ್ ಯಾರು?

ಬೆಂಗಳೂರು: ನಾಡಹಬ್ಬ ದಸರಾ ಮಹೋತ್ಸವದ ಜಂಬೂ ಸವಾರಿಗೆ ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್ ಅರಣ್ಯಾಧಿಕಾರಿಗಳ ತಂಡ ಪಶು ವೈದ್ಯರೊಂದಿಗೆ ಒಟ್ಟು 22 ಆನೆಗಳನ್ನು ಪರಿಶೀಲನೆ ನಡೆಸಿದ್ದು, ಇದರಲ್ಲಿ 18 ಆನೆಗಳನ್ನು ಆಯ್ಕೆ ಮಾಡಿದೆ.

14 ಆನೆಗಳನ್ನು ಜಂಜೂ ಸವಾರಿಯಲ್ಲಿ ಹೆಜ್ಜೆ ಹಾಕಲು ಆಯ್ಕೆ ಮಾಡಿ, ಉಳಿದ 4 ಆನೆಗಳನ್ನು ಕಾಯ್ದಿರಿಸಲು ಉದ್ದೇಶಿಸಲಾಗಿದೆ.

. ಜಂಬೂ ಸವಾರಿಯಲ್ಲಿ ಭಾಗವಹಿಸುವ ಆನೆಗಳಿಗೆ ಎರಡು ತಿಂಗಳ ಮೊದಲೇ ತರಬೇತಿ ನೀಡಬೇಕಿದೆ. ಹೀಗಾಗಿ ಈಗಲೇ ತಯಾರಿ ಆರಂಭಿಸಲಾಗಿದೆ.. ಮೊದಲ ಹಂತದಲ್ಲಿ ಕ್ಯಾಪ್ಟನ್ ಅಭಿಮನ್ಯು, ಭೀಮ, ಏಕಲವ್ಯ, ವರಲಕ್ಷ್ಮೀ, ಧನಂಜಯ, ಗೋಪಿ, ರೋಹಿತ, ಕಂಜನ್ ಆನೆಗಳು ಆಗಮಿಸಲಿವೆ. ಬಳಿಕ ಪ್ರಶಾಂತ, ಸುಗ್ರೀವ, ಮಹೇಂದ್ರ, ಲಕ್ಷ್ಮೀ, ಹಿರಣ್ಯ ಆನೆಗಳು ಮೈಸೂರಿಗೆ ಆಗಮಿಸಲಿದ್ದು, ತರಬೇತಿಯನ್ನು ಪಡೆದುಕೊಳ್ಳಲಿದ್ದಾವೆ.

Leave a Reply

Your email address will not be published. Required fields are marked *