‘ಸು ಫ್ರಮ್ ಸೋ’ ಚಿತ್ರದ ಶೂಟಿಂಗ್ಗೆ ನಿಜವಾದ ಹಳ್ಳಿಯ ಮನೆಯನ್ನು ಬಳಸಲಾಗಿದೆ ಎಂಬುದು ವಿಶೇಷ. ರಾಜ್ ಬಿ ಶೆಟ್ಟಿ ಅವರು ಚಿತ್ರದ ಹಳ್ಳಿಗಾಡಿನ ವಾತಾವರಣವನ್ನು ನಿಖರವಾಗಿ ತೋರಿಸಲು ಈ ರೀತಿ ಮಾಡಿದ್ದಾರೆ. ಒಂದು ತಿಂಗಳ ಕಾಲ ಈ ಮನೆಯನ್ನು ಬಳಸಿಕೊಂಡು ಚಿತ್ರೀಕರಣ ಮಾಡಲಾಗಿದೆ. ಮನೆಯ ಮಾಲೀಕರ ಸಹಕಾರ ಮತ್ತು ಚಿತ್ರತಂಡದ ಶ್ರಮದ ಬಗ್ಗೆ ಈ ವಿಡಿಯೋ ವಿವರಿಸುತ್ತದೆ.
ಸಾಮಾನ್ಯವಾಗಿ ಸಿನಿಮಾ ಶೂಟ್ ಮಾಡುವಾಗ ಸೆಟ್ಗಳ ನಿರ್ಮಾಣ ಮಾಡುತ್ತಾರೆ. ಸೆಟ್ನಲ್ಲಿಯೇ ಸಿನಿಮಾ ಶೂಟ್ ಮಾಡುತ್ತಾರೆ. ಶೂಟಿಂಗ್ ವೇಳೆ ಜನರು ಕಿಕ್ಕಿರಿದು ನೆರೆಯುತ್ತಾರೆ. ಈ ಕಾರಣಕ್ಕೆ ಬಹುತೇಕರು ಸೆಟ್ನ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ, ರಾಜ್ ಬಿ ಶೆಟ್ಟಿ ಅವರು ನಿಜವಾದ ಮನೆಯನ್ನೇ ಆಯ್ಕೆ ಮಾಡಿಕೊಂಡು ಶೂಟಿಂಗ್ ಮಾಡಿದ್ದಾರೆ. ‘ದುರ್ಗ ಕಾಕ್ಯಾಪಡವು’ ಹೆಸರಿನ ಯೂಟ್ಯೂಬ್ ಚಾನೆಲ್ನವರು ‘ಸು ಫ್ರಮ್ ಸೋ’ ಚಿತ್ರದ ಚಿತ್ರೀಕರಣದ ರಿಯಲ್ ಲೊಕೇಶನ್ ತೋರಿಸಿದ್ದಾರೆ
‘ಸು ಫ್ರಮ್ ಸೋ’ ಸಿನಿಮಾ ಪಕ್ಕಾ ಹಳ್ಳಿ ಸೊಗಡಿನ ಕಥೆ. ಈ ಚಿತ್ರದ ಕಥೆ ಸಂಪೂರ್ಣವಾಗಿ ಹಳ್ಳಿಯಲ್ಲೇ ಸಾಗುತ್ತದೆ. ಈ ಕಾರಣಕ್ಕೆ ಅಂಥದ್ದೇ ಮನೆಗಾಗಿ ರಾಜ್ ಬಿ. ಶೆಟ್ಟಿ ಅವರು ಹುಡುಕಾಟ ನಡೆಸಿದ್ದರು. ಈ ರೀತಿ ಹುಡುಕಾಟದಲ್ಲಿರುವ ರಾಜ್ ಬಿ. ಶೆಟ್ಟಿಗೆ ಅಂಥದ್ದೊಂದು ಮನೆ ಸಿಕ್ಕಿತ್ತು. ಆ ಮನೆ ಹೇಗಿದೆ ಎಂಬುದನ್ನು ದುರ್ಗಪ್ರಸಾದ್ ಅವರು ತೋರಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
‘ಸು ಫ್ರಮ್ ಸೋ’ದ ಬಹುತೇಕ ಕಥೆ ಅಶೋಕನ ಮನೆಯಲ್ಲಿ ಸಾಗುತ್ತದೆ. ಇದಕ್ಕಾಗಿ ಒಂದು ತಿಂಗಳು ಮನೆಯೊಂದನ್ನು ತೆಗೆದುಕೊಳ್ಳಲಾಗಿತ್ತು. ಮನೆಯ ಮಾಲೀಕರು ಸಹ ಖುಷಿಯಿಂದ ಮನೆಯನ್ನು ಶೂಟಿಂಗ್ಗೆ ನೀಡಿದ್ದರು. ಸಂಪೂರ್ಣ ಮನೆಯನ್ನು ತಮಗೆ ಬೇಕಾದ ರೀತಿಯಲ್ಲಿ ಬದಲಾಯಿಸಿಕೊಳ್ಳಲಾಗಿತ್ತು. ಸಿನಿಮಾದಲ್ಲಿ ನೋಡಿದ ಮನೆಗೂ ಆ ಲೊಕೇಶ್ನಗೂ ಈಗ ಸಾಕಷ್ಟು ವ್ಯತ್ಯಾಸ ಇದೆ.
‘ಒಂದು ತಿಂಗಳು ಮನೆಯಲ್ಲಿ ಶೂಟ್ ಮಾಡಿದರು. ಶೂಟಿಂಗ್ ನಮಗೆ ಹೊಸದಾಗಿತ್ತು. ಲೈಟ್ ಸೆಟಿಂಗ್ ಕೂಡ ದೊಡ್ಡದಾಗಿತ್ತು. ರಾಜ್ ಬಿ ಶೆಟ್ಟಿ ಅವರು ದೊಡ್ಡ ಸ್ಟಾರ್. ಅವರು ನಮ್ಮ ಜೊತೆ ಸಾಮಾನ್ಯರಂತೆ ಬೆರೆತು ಹೋಗಿದ್ದರು. ಜೆಪಿ ತುಮಿನಾಡ್ ಸರಳ ವ್ಯಕ್ತಿ’ ಎಂದು ಮನೆಯ ಮಾಲೀಕರು ಹೊಗಳಿದ್ದಾರೆ.
For More Updates Join our WhatsApp Group: