ಲವ್ ಜಿಹಾದ್ ಮಸೂದೆ ಅಂಗೀಕಾರ : ಜೀವಾವಧಿ ಶಿಕ್ಷೆ

ಲವ್ ಜಿಹಾದ್ ಗೆ ಸಂಬಂಧಿಸಿದ ಮಸೂದೆಯನ್ನು ಉತ್ತರಪ್ರದೇಶ ವಿಧಾನಸಭೆ ಅಂಗೀಕರಿಸಲಾಯಿತು. ಈ ಮಸೂದೆ ಮೂಲಕ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸುವ ಅವಕಾಶವಿದ್ದು, ಈ ಕಾನೂನಿನಲ್ಲಿ ಲವ್ ಜಿಹಾದ್ ಅಡಿಯಲ್ಲಿ ಹಲವು ಹೊಸ ಅಪರಾಧಗಳಿಗೆ ಶಿಕ್ಷೆಯನ್ನು ದ್ವಿಗುಣಗೊಳಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಮಸೂದೆಯನ್ನು ಯೋಗಿ ಸರ್ಕಾರ ಸದನದಲ್ಲಿ ಮಂಡಿಸಿತ್ತು.

ಹೊಸ ಮಸೂದೆಯಲ್ಲಿನ ನಿಬಂಧನೆಗಳು

1. ಹೊಸ ಕಾನೂನಿನಲ್ಲಿ ತಪ್ಪಿತಸ್ಥರೆಂದು ಕಂಡುಬಂದಲ್ಲಿ 20 ವರ್ಷಗಳ ಜೈಲು ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆಯ ಅವಕಾಶವಿದೆ.

2. ಮತಾಂತರದ ಪ್ರಕರಣಗಳಲ್ಲಿ ಈಗ ಯಾವುದೇ ವ್ಯಕ್ತಿ ವಿರುದ್ಧ ಎಫ್ಐಆರ್ ದಾಖಲಿಸಬಹುದು.

3. ಈ ಮೊದಲು ಮಾಹಿತಿ ಅಥವಾ ದೂರು ನೀಡಲು ಸಂತ್ರಸ್ತೆ, ಪೋಷಕರು ಅಥವಾ ಒಡಹುಟ್ಟಿದವರ ಉಪಸ್ಥಿತಿ ಅಗತ್ಯವಾಗಿತ್ತು.

4. ಸೆಷನ್ಸ್ ನ್ಯಾಯಾಲಯದ ಕೆಳಗಿರುವ ಯಾವುದೇ ನ್ಯಾಯಾಲಯವು ಲವ್ ಜಿಹಾದ್ ಪ್ರಕರಣಗಳ ವಿಚಾರಣೆ ನಡೆಸುವುದಿಲ್ಲ.

5. ಲವ್ ಜಿಹಾದ್ ಪ್ರಕರಣದಲ್ಲಿ ಸರ್ಕಾರಿ ವಕೀಲರಿಗೆ ಅವಕಾಶ ನೀಡದೆ ಜಾಮೀನು ಅರ್ಜಿಯನ್ನು ಪರಿಗಣಿಸುವುದಿಲ್ಲ.

6. ಇದರಲ್ಲಿ ಎಲ್ಲಾ ಅಪರಾಧಗಳನ್ನು ಜಾಮೀನು ರಹಿತವನ್ನಾಗಿ ಮಾಡಲಾಗಿದೆ.

ಉತ್ತರ ಪ್ರದೇಶದ ಯೋಗಿ ಸರ್ಕಾರವು 2020ರಲ್ಲಿ ಲವ್ ಜಿಹಾದ್ ವಿರುದ್ಧ ಮೊದಲ ಕಾನೂನನ್ನು ಮಾಡಿತ್ತು. ಇದರ ನಂತರ, ಯುಪಿ ಸರ್ಕಾರವು ಅಸೆಂಬ್ಲಿಯಲ್ಲಿ ಧಾರ್ಮಿಕ ಮತಾಂತರ ನಿಷೇಧ ಮಸೂದೆ 2021 ಅನ್ನು ಅಂಗೀಕರಿಸಿತು. ಈ ಮಸೂದೆಯಲ್ಲಿ 1 ರಿಂದ 10 ವರ್ಷಗಳವರೆಗೆ ಶಿಕ್ಷೆಗೆ ಅವಕಾಶವಿತ್ತು. ಈ ಮಸೂದೆಯಲ್ಲಿ ಮದುವೆಗಾಗಿ ಮಾತ್ರ ಮಾಡುವ ಧಾರ್ಮಿಕ ಮತಾಂತರವನ್ನು ಅಸಿಂಧು ಎಂದು ಪರಿಗಣಿಸುವ ಅವಕಾಶವಿತ್ತು.

Leave a Reply

Your email address will not be published. Required fields are marked *