ಮಾರ್ಚ್ 19ಕ್ಕೆ ‘Love Mocktail 3’ ರಿಲೀಸ್

ಮಾರ್ಚ್ 19ಕ್ಕೆ ‘Love Mocktail 3’ ರಿಲೀಸ್

Toxic ’ ಮುಂದೂಡಿಕೆ; ಕೃಷ್ಣ ತಂಡದಿಂದ ಸರ್ಪ್ರೈಸ್.

ಮಾರ್ಚ್ 19ರಂದು ‘ಟಾಕ್ಸಿಕ್’ ಸಿನಿಮಾ ನೋಡಲು ಸಿನಿಪ್ರಿಯರು ಕಾದಿದ್ದರು. ಆದರೆ ಕಾರಣಾಂತರಗಳಿಂದ ಆ ಸಿನಿಮಾದ ರಿಲೀಸ್ ದಿನಾಂಕವನ್ನು ಮುಂದೂಡಲಾಗಿದೆ. ಈಗ ‘ರಾಕಿಂಗ್ ಸ್ಟಾರ್’ ಯಶ್ ನಟನೆಯ ‘ಟಾಕ್ಸಿಕ್’ ಚಿತ್ರದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗುತ್ತಲೇ, ಆ ದಿನಾಂಕದಲ್ಲಿ ‘ಲವ್ ಮಾಕ್ಟೇಲ್ 3’ ಸಿನಿಮಾವನ್ನು ಬಿಡುಗಡೆ ಮಾಡಲು ಡಾರ್ಲಿಂಗ್ ಕೃಷ್ಣ ಸಜ್ಜಾಗಿದ್ದಾರೆ. ಆ ಮೂಲಕ ಅವರು ಅಭಿಮಾನಿಗಳಿಗೆ ಗುಡ್​ ನ್ಯೂಸ್ ನೀಡಿದ್ದಾರೆ.

ಯುಗಾದಿಯ ರಜೆ, ಅದರ ಬೆನ್ನಲ್ಲಿಯೇ ಶುರುವಾಗುವ ವೀಕೆಂಡ್ ಸೇರಿದಂತೆ ಮಾರ್ಚ್ 19 ಎಲ್ಲ ರೀತಿಯಿಂದಲೂ ಚಿತ್ರತಂಡಗಳಿಗೆ ಸೂಕ್ತವಾದ ದಿನಾಂಕ. ಆ ದಿನಾಂಕದಂದು ‘ಟಾಕ್ಸಿಕ್’ ಬಿಡುಗಡೆ ಆಗದಿದ್ದರೂ, ಅದೇ ದಿನ ‘ಲವ್ ಮಾಕ್ಟೇಲ್ 3’ ಚಿತ್ರವನ್ನು ಬಿಡುಗಡೆ ಮಾಡಲು ‘ಕೆವಿಎನ್’ ಸಂಸ್ಥೆ ತೀರ್ಮಾನಿಸಿದೆ. ಈ ಸಿನಿಮಾವನ್ನು ಕೆವಿಎನ್ ಸಂಸ್ಥೆ ವಿತರಿಸುತ್ತಿದೆ.

ಮಾರ್ಚ್ 19ರ ಸಮಯದಲ್ಲಿ ಯುಗಾದಿ, ರಂಜಾನ್ ಮುಂತಾದ ಹಬ್ಬಗಳಿಗೆ ಸಾಲು ಸಾಲು ರಜೆಗಳು ಇರಲಿವೆ. ಸಿನಿಮಾದ ಬಾಕ್ಸ್ ಆಫೀಸ್​​ ಗಳಿಕೆಗೆ ಅದು ಪ್ರಶಸ್ತವಾದ ಸಮಯ. ಅಂತಹ ಲಾಭದಾಯಕ ದಿನಾಂಕವು ‘ಲವ್ ಮಾಕ್ಟೇಲ್ 3’ ಸಿನಿಮಾಗೆ ಸಿಕ್ಕಿದೆ. ‘ಕ್ರಿಸ್‌ಮಿ’ ಬ್ಯಾನರ್ ಮೂಲಕ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಅವರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.

 ‘ಲವ್ ಮಾಕ್ಟೇಲ್’ ಮತ್ತು ‘ಲವ್ ಮಾಕ್ಟೇಲ್ 2’ ಹಿಟ್ ಆಗಿದ್ದರಿಂದ ‘ಲವ್ ಮಾಕ್ಟೇಲ್ 3’ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ಈ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಜೊತೆ ಮಿಲನಾ ನಾಗರಾಜ್, ಸಂವೃತ, ಅಮೃತಾ ಅಯ್ಯಂಗಾರ್, ರೇಚಲ್ ಡೇವಿಡ್, ಅಭಿಲಾಶ್ ದಳಪತಿ ಮುಂತಾದವರು ನಟಿಸಿದ್ದಾರೆ. ಈಗಾಗಲೇ ಹಾಡುಗಳು ಬಿಡುಗಡೆಯಾಗಿ ಗಮನ ಸೆಳೆಯುತ್ತಿವೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *