ಗರಿಷ್ಠ ಪ್ರಮಾಣದ ಎಲ್ಪಿಜಿ ಉತ್ಪಾದನೆಗೆ ಕಂಪನಿ ನಿರ್ಧಾರ.
ಮುಂಬೈ : ಮಧ್ಯಪ್ರಾಚ್ಯದಲ್ಲಿ ಯುದ್ಧದ ಪರಿಣಾಮವಾಗಿ ಕರ್ನಾಟಕ ಸೇರಿ ಭಾರತದ ಹಲವೆಡೆ ಎಲ್ಪಿಜಿ ಸಿಲಿಂಡರ್ಗಳ ಅಭಾವ ತಲೆದೋರಿದೆ. ಈ ಹೊತ್ತಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮಹತ್ತರವಾದ ಘೋಷಣೆ ಮಾಡಿದ್ದು, ಜಾಮ್ ನಗರದಲ್ಲಿನ ಸಂಸ್ಕರಣಾಗಾರ ಹಾಗೂ ಪೆಟ್ರೋಕೆಮಿಕಲ್ಸ್ ಸಮುಚ್ಚಯದಿಂದ ಎಲ್ಪಿಜಿ ಉತ್ಪಾದನೆಯನ್ನು ಸ್ವಯಂಪ್ರೇರಿತವಾಗಿ ಗರಿಷ್ಠ ಪ್ರಮಾಣದಲ್ಲಿ ಹೆಚ್ಚಿಸುವುದಕ್ಕೆ ನಿರ್ಧಾರ ಕೈಗೊಂಡಿರೋದಾಗಿ ತಿಳಿಸಿದೆ. ಜಾಮ್ ನಗರದಲ್ಲಿ ಇರುವ ಈ ಘಟಕ ವಿಶ್ವದಲ್ಲಿಯೇ ಅತಿದೊಡ್ಡ ಸಂಯೋಜಿತ ಸಂಸ್ಕರಣೆ ಹಬ್ ಎಂಬ ದಾಖಲೆಗೆ ಪಾತ್ರವಾಗಿದೆ ಎಂದು ಕಂಪನಿಯ ಹೇಳಿದ್ದು, KG- D6 ಬ್ಲಾಕ್ನಲ್ಲಿ ಉತ್ಪಾದನೆ ಆದ ಅನಿಲವನ್ನು ಆದ್ಯತೆ ವಲಯಗಳಿಗೆ ಪೂರೈಕೆಮಾಡಲಾಗುವುದು. ರಾಷ್ಟ್ರೀಯ ಇಂಧನ ಆದ್ಯತೆಗಳು ಹಾಗೂ ಸರ್ಕಾರಿ ಮಾರ್ಗದರ್ಶನದ ಅನ್ವಯ ಆದ್ಯತಾ ವಲಯಗಳಿಗೆ ಪೂರೈಕೆ ಬೆಂಬಲ ನೀಡುವುದಕ್ಕಾಗಿ ಈ ಮಹತ್ವದ ಘೋಷಣೆ ಮಾಡಿರೋದಾಗಿ ಕಂಪನಿ ತಿಳಿಸಿದೆ.
ರಿಲಯನ್ಸ್ಗೆ ಕೋಟ್ಯಂತರ ಭಾರತೀಯ ಕುಟುಂಬಗಳ ಯೋಗಕ್ಷೇಮ ಹಾಗೂ ಭಾರತೀಯ ಇಂಧನ ಭದ್ರತೆ ಯಾವಾಗಲೂ ಮೊದಲು. ನಾವು ಭಾರತ ಸರ್ಕಾರದ ಜೊತೆಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ. ಮತ್ತು ರಾಷ್ಟ್ರೀಯ ಮಾರ್ಗದರ್ಶಿ ಸೂತ್ರಗಳಿಗೆ ಮತ್ತು ವಿತರಣೆ ಆದ್ಯತೆಗಳಿಗೆ ಸಂಪೂರ್ಣ ಬದ್ಧರಾಗಿದ್ದೇವೆ. ಇಂಧನ ಪೂರೈಕೆ ಯಾವ ವಲಯಕ್ಕೆ ಹಾಗೂ ಸಮುದಾಯಕ್ಕೆ ಬಹಳ ಅಗತ್ಯ ಆಗಿರುತ್ತದೋ ಅವರಿಗೆ ತಲುಪಿಸುವುದನ್ನು ಖಾತ್ರಿ ಪಡಿಸುತ್ತೇವೆ ಎಂದು ಕಂಪನಿ ಹೇಳಿದೆ. ನಾವು ದೇಶದೊಂದಿಗೆ ದೃಢವಾಗಿ ನಿಲ್ಲುತ್ತೇವೆ ಮತ್ತು ಭಾರತದ ಇಂಧನ ಭದ್ರತೆಗೆ ಹಾಗೂ ದೇಶಕ್ಕೆ ಬೇಕಾದ ಅಗತ್ಯ ಇಂಧನ ಪೂರೈಕೆ ವಿಶ್ವಾಸಾರ್ಹತೆ ಉಳಿಯುವುದಕ್ಕೆ ಏನೆಲ್ಲ ಮಾಡುವುದಕ್ಕೆ ಸಾಧ್ಯವೋ ಆ ಎಲ್ಲವನ್ನೂ ಮಾಡುವುದಕ್ಕೆ ಬದ್ಧರಾಗಿದ್ದೇವೆ ಎಂದು ತಿಳಿಸಿದೆ.
For More Updates Join our WhatsApp Group :




