ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಗ್ರಹಣಗಳಿಗೆ ವಿಶೇಷ ಮಹತ್ವವಿದೆ. 2025ರಲ್ಲಿ ಈಗಾಗಲೇ ನಾಲ್ಕು ಗ್ರಹಣಗಳು ಸಂಭವಿಸಿವೆ. ಇಂದಿನ ಚಂದ್ರಗ್ರಹಣವು ಈ ವರ್ಷದ ಕೊನೆಯದು. ಮಾರ್ಚ್ 14ರಂದು ಮೊದಲ ಚಂದ್ರಗ್ರಹಣ ನಡೆದಿತ್ತು.
ಚಂದ್ರಗ್ರಹಣವು ಭೂಮಿ ಮತ್ತು ಸೂರ್ಯನ ನಡುವೆ ಚಂದ್ರ ಬರುವಾಗ ಸಂಭವಿಸುತ್ತದೆ. ಇದೇ ವೇಳೆ ಸೂರ್ಯಗ್ರಹಣವು ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬರುವಾಗ ಸಂಭವಿಸುತ್ತದೆ. ಈ ಬಾರಿ ರಾಹುಗ್ರಸ್ತ ಚಂದ್ರಗ್ರಹಣವು ರಾತ್ರಿ 9:58ಕ್ಕೆ ಪ್ರಾರಂಭವಾಗಲಿದೆ.
ಜ್ಯೋತಿಷ್ಯ ಪ್ರಕಾರ ಪರಿಣಾಮಗಳು:
ಗ್ರಹಣವು ದ್ವಾದಶ ರಾಶಿಗಳು, ಪ್ರಕೃತಿ ಮತ್ತು ಪಂಚಭೂತಗಳ ಮೇಲೆ ಪರಿಣಾಮ ಬೀರುತ್ತದೆ. ಮನುಷ್ಯರಲ್ಲಿ ಮಾನಸಿಕ ಅಶಾಂತಿ, ಕೋಪ ಹಾಗೂ ಕಲಹ ಉಂಟಾಗುವ ಸಾಧ್ಯತೆ ಇದೆ. ಇದರ ಪರಿಣಾಮ ಮೂರು ತಿಂಗಳವರೆಗೆ ಇರಬಹುದು ಎಂದು ಪಂಡಿತರು ಹೇಳಿದ್ದಾರೆ.
ಅನುಸರಿಸಬೇಕಾದ ಆಚರಣೆಗಳು:
* ಗ್ರಹಣ ಆರಂಭಕ್ಕೆ ಆರು ಗಂಟೆಗಳ ಮುಂಚೆಯೇ ಆಹಾರ ಸೇವನೆ ಮಾಡುವುದು ಉತ್ತಮ.
* ವೃದ್ಧರು, ಗರ್ಭಿಣಿಯರು, ಅನಾರೋಗ್ಯದಿಂದ ಬಳಲುವವರು ಹಾಗೂ ಮಾನಸಿಕ ರೋಗಿಗಳು ವಿಶೇಷ ಎಚ್ಚರಿಕೆ ವಹಿಸಬೇಕು.
* ಮನೆಯಲ್ಲಿಯೇ ಇರಿ, ಜಪ-ತಪ, ಪಾರಾಯಣ ಹಾಗೂ ದೇವರ ಸ್ಮರಣೆ ಮಾಡುವುದು ಶುಭಕರ.
* ದುರ್ಗಾ ಆರಾಧನೆ ಮಾಡಿ “ಓಂ ಹ್ರೀಂ ದೂಮ್ ದುರ್ಗಾಯೇ ನಮಃ” ಮಂತ್ರ ಜಪ ಮಾಡುವುದು ಉತ್ತಮ.
* ರಾತ್ರಿಯ ವೇಳೆ ಪ್ರಯಾಣ ಹಾಗೂ ಹೊಸ ಕಾರ್ಯಗಳನ್ನು ಪ್ರಾರಂಭಿಸುವುದು ಅಶುಭ.
ಗ್ರಹ ಶಾಂತಿಗಾಗಿ:
ಓಂ ನಮಃಶಿವಾಯ, ಚಂದ್ರ ಗಾಯತ್ರಿ ಮಂತ್ರ ಹಾಗೂ ಇತರ ಮಂತ್ರಗಳನ್ನು ಪಠಿಸುವುದು ಶ್ರೇಯಸ್ಕರ.
ದೇವಾಲಯಗಳ ಸ್ಥಿತಿ:
ಗ್ರಹಣದ ವೇಳೆಯಲ್ಲಿ ಹೆಚ್ಚಿನ ದೇವಸ್ಥಾನಗಳು ಮುಚ್ಚಿರುತ್ತವೆ. ಆದರೆ ಕಾಳಹಸ್ತಿ ದೇವಸ್ಥಾನ ಮಾತ್ರ ತೆರೆದಿರುತ್ತದೆ ಎಂದು ತಿಳಿದುಬಂದಿದೆ.
ಗುರುಗಳ ಸಲಹೆ:
ಗ್ರಹಣ ಸಮಯದಲ್ಲಿ ಆಹಾರ ಸೇವನೆ, ಕೆಟ್ಟ ಮಾತುಗಳು ಮತ್ತು ಕೋಪವನ್ನು ತಪ್ಪಿಸಿ ಶಾಂತವಾಗಿರುವುದು ಮುಖ್ಯ.
For More Updates Join our WhatsApp Group :