ಬಡವನಹಳ್ಳಿ ಮೈದಾನದಲ್ಲಿ ಯಶಸ್ವಿ ಟೂರ್ನಮೆಂಟ್
ಮಧುಗಿರಿ: ದೊಡ್ಡೇರಿ ಹೋಬಳಿ ಕ್ರೀಡಾಕೂಟಕ್ಕೆ 5 ಎಕರೆ ಜಾಗ ನಿಗದಿಗಾಗಿ ಸರ್ಕಾರಕ್ಕೆ ಮನವಿ ಎಸ್ ಎಲ್ ಆರ್ ಎಸ್ ಪ್ರೀಮಿಯರ್ ಲೀಗ್ ಕಪ್ ಕ್ರಿಕೆಟ್ ಟೂರ್ನಮೆಂಟನ್ನು ದೊಡ್ಡೇರಿ ಹೋಬಳಿಯ ಬಡವನಹಳ್ಳಿ ಗ್ರಾಮದ ಮಾಪನಹಳ್ಳಿ ಕೆರೆ ಮೈದಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಪ್ರಥಮ ಬಹುಮಾನ 50,000 ರೂಗಳು ಹಾಗೂ ದ್ವಿತೀಯ ಬಹುಮಾನ 25,000 ರೂಗಳನ್ನು ಟೂರ್ನಮೆಂಟ್ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಭಾನುವಾರ ಏರ್ಪಡಿಸಲಾಗಿತ್ತು.
ಶಿವಕುಮಾರ್, ಅಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ ಮಧುಗಿರಿ, ದೇವರಾಜ್ ಬಡವನಹಳ್ಳಿ, ಜಗನ್ನಾಥ್ ಕೊಂಡಪ್ಪ, ಮತ್ತು ರಫೀಕ್ ಅಹಮದ್ ಹಾಗೂ ಎಸ ಎಲ್ ಆರ್ ಎಸ್ ಆಯೋಜಕರು ಮತ್ತು ರಂಗನಾಥ್ ರವರು ಎಲ್ಲಾ ಕ್ರೀಡಾ ಅಭಿಮಾನಿಗಳು ಪಾಲ್ಗೊಂಡಿದ್ದರು. ಮೊದಲನೇ ಬಹುಮಾನವನ್ನು ಯುವರತ್ನ ತಂಡ 50,000ರೂ ನಗದು ಬಹುಮಾನವನ್ನು ಪಡೆಯುವಲ್ಲಿ ಯಶಸ್ವಿಯಾಯಿತು. ಎರಡನೇ ಬಹುಮಾನ ಕಿರಣ್ ಬಾಯ್ಸ್ 25,000ರೂ ನಗದು ಬಹುಮಾನದೊಂದಿಗೆ ವಿಜೇತ ತಂಡವಾಯಿತು. ಈ ವೇಳೆ ಬಡವನಹಳ್ಳಿ ದೇವರಾಜ ರವರು ಮಾತನಾಡಿ ದೊಡ್ಡೇರಿ ಹೋಬಳಿಯಲ್ಲಿ ಕ್ರೀಡಾಕೂಟ ನಡೆಸಲು ಮೈದಾನದ ಅವಶ್ಯಕತೆ ಇದ್ದು ಸರ್ಕಾರದಿಂದ ಐದು ಎಕರೆ ಜಾಗವನ್ನು ಗುರುತಿಸಿ ಕೊಡಬೇಕೆಂದು ಈ ಸಂದರ್ಭದಲ್ಲಿ ಮನವಿ ಮಾಡಿದರು.
For More Updates Join our WhatsApp Group :




