ಕಾವೇರಿ, ಕಬಿನಿ, ಕಪಿಲಾ ನದಿಗಳಲ್ಲಿ ಪುಣ್ಯಸ್ನಾನ, ಪಾಪಮುಕ್ತಿಗೆ ನಂಬಿಕೆ.
ಮೈಸೂರು : ಟಿ. ನರಸೀಪುರದಲ್ಲಿರುವ ಪವಿತ್ರ ತ್ರಿವೇಣಿ ಸಂಗಮದಲ್ಲಿ ಮಾಘ ಮಾಸ ಹುಣ್ಣಿಮೆಯ ಪುಣ್ಯಸ್ನಾನಕ್ಕೆ ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ್ದಾರೆ. ಕಾವೇರಿ, ಕಬಿನಿ ಮತ್ತು ಕಪಿಲಾ ನದಿಗಳು ಸೇರುವ ಈ ಸಂಗಮ ಸ್ಥಳದಲ್ಲಿ ಸ್ನಾನ ಮಾಡಿದರೆ ಪಾಪಗಳು ಕಳೆಯುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ. ಪ್ರತಿ ವರ್ಷದಂತೆ ಈ ಬಾರಿಯೂ, ಮಧ್ಯರಾತ್ರಿಯಿಂದಲೇ ಸಹಸ್ರಾರು ಭಕ್ತರು ಸಂಗಮ ಸ್ಥಳದಲ್ಲಿ ಪವಿತ್ರ ಸ್ನಾನ ಕೈಗೊಂಡರು.
ಪುಣ್ಯಸ್ನಾನದ ನಂತರ, ಭಕ್ತರು ಸಮೀಪದಲ್ಲಿರುವ ಐತಿಹಾಸಿಕ ಗುಂಜಾ ನರಸಿಂಹಸ್ವಾಮಿ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು. ಈ ಶುಭ ಸಂದರ್ಭದಲ್ಲಿ ಧಾರ್ಮಿಕ ಆಚರಣೆಗಳನ್ನು ನಡೆಸಲು ಕರ್ನಾಟಕದ ವಿವಿಧ ಭಾಗಗಳಿಂದ ಭಕ್ತರು ಟಿ. ನರಸೀಪುರಕ್ಕೆ ದಂಡು ಹರಿದುಬಂದಿತ್ತು. ನದಿತೀರದಲ್ಲಿ ಜನಜಂಗುಳಿ ನಿರ್ಮಾಣವಾಗಿತ್ತು. ಈ ಸಮೂಹ ಸ್ನಾನವು ಹಿಂದೂ ಧರ್ಮದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಪ್ರತಿಬಿಂಬಿಸುತ್ತದೆ.
For More Updates Join our WhatsApp Group :




