ಆರ್ಟ್ ಆಫ್ ಲಿವಿಂಗ್‌ನಲ್ಲಿ ಮಹಾಶಿವರಾತ್ರಿ ಸಂಭ್ರಮ.

ಆರ್ಟ್ ಆಫ್ ಲಿವಿಂಗ್‌ನಲ್ಲಿ ಮಹಾಶಿವರಾತ್ರಿ ಸಂಭ್ರಮ.

ಗುರುದೇವರ ಸಾನ್ನಿಧ್ಯದಲ್ಲಿ ರಾತ್ರಿಯಿಡೀ ಆಧ್ಯಾತ್ಮಿಕ ಮಹೋತ್ಸವ.

ಬೆಂಗಳೂರು: ಆರ್ಟ್ ಆಫ್ ಲಿವಿಂಗ್​​ನ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಈ ವರ್ಷವೂ ಮಹಾಶಿವರಾತ್ರಿ ಮಹೋತ್ಸವವನ್ನು ಅತ್ಯಂತ ಭಕ್ತಿಭಾವದಿಂದ ಮತ್ತು ವೈದಿಕ ಸಂಪ್ರದಾಯದಂತೆ ಆಚರಿಸಲಾಗುತ್ತಿದೆ. ರಾತ್ರಿಯಿಡೀ ನಡೆಯಲಿರುವ ಈ ಮಹೋತ್ಸವದಲ್ಲಿ ರುದ್ರಪೂಜೆ, ಭಜನೆ, ಧ್ಯಾನ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳು ಜರುಗಲಿದ್ದು, ಭಾರತದೆಲ್ಲೆಡೆಯಿಂದ ಮಾತ್ರವಲ್ಲದೆ ವಿದೇಶಗಳಿಂದಲೂ ಸಾವಿರಾರು ಭಕ್ತರು ಭಾಗವಹಿಸಲಿದ್ದಾರೆ. ಗುರುದೇವ ಶ್ರೀ ಶ್ರೀ ರವಿ ಶಂಕರರು ಅವರ ಸಾನ್ನಿಧ್ಯದಲ್ಲಿ ನಡೆಯುವ ಈ ಪವಿತ್ರ ಸಮಾರಂಭವು ಅಂತರಂಗದ ಶಾಂತಿ, ಸಮೂಹ ಪ್ರಾರ್ಥನೆ ಮತ್ತು ಆತ್ಮಪುನಶ್ಚೇತನದ ಅನನ್ಯ ಅನುಭವವನ್ನು ನೀಡಲಿದೆ.

ಮಹಾಶಿವರಾತ್ರಿಯು ವೈದಿಕ ಪರಂಪರೆಯಲ್ಲಿ ಅತ್ಯಂತ ಪವಿತ್ರವಾದ ರಾತ್ರಿಯಾಗಿ ಪರಿಗಣಿಸಲ್ಪಡುತ್ತದೆ. ಇದು ಆಳವಾದ ವಿಶ್ರಾಂತಿ, ಅರಿವಿನ ಉನ್ನತ ಸ್ಥಿತಿ ಮತ್ತು ಆಂತರಿಕ ಪರಿವರ್ತನೆಗೆ ದಾರಿ ಮಾಡಿಕೊಡುವ ವಿಶಿಷ್ಟ ಸಮಯವೆಂದು ಗುರುತಿಸಲಾಗಿದೆ. ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ರಾತ್ರಿಯಿಡೀ ನಡೆಯುವ ಆಚರಣೆ ವೈದಿಕ ವಿಧಿ-ವಿಧಾನಗಳು ಮತ್ತು ಹೃದಯಸ್ಪರ್ಶಿಯಾದ ಸಂಗೀತದಿಂದ ಉಂಟಾಗುವ ಚೈತನ್ಯಮಯ ವಾತಾವರಣಕ್ಕಾಗಿ ಜಾಗತಿಕವಾಗಿ ಪ್ರಸಿದ್ಧವಾಗಿದೆ. ಈ ಮಹೋತ್ಸವವು ಲಕ್ಷಾಂತರ ಭಕ್ತರ ಮನಸ್ಸಿನಲ್ಲಿ ಆಧ್ಯಾತ್ಮಿಕ ಸ್ಪಂದನೆಯನ್ನು ಉಂಟುಮಾಡುತ್ತದೆ.

ಶಿವರಾತ್ರಿಯ ಮಹತ್ವವನ್ನು ವಿವರಿಸುತ್ತಾ ಗುರುದೇವ ಶ್ರೀ ಶ್ರೀ ರವಿ ಶಂಕರರು, “ಶಿವರಾತ್ರಿಯು ಭೌತಿಕ ಜಗತ್ತು ಮತ್ತು ನಮ್ಮ ಆಂತರ್ಯದ ಅಲೌಕಿಕ ಜಗತ್ತಿನ ನಡುವಿನ ಸೇತುವೆ. ಇದು ಕೇವಲ ಪದ್ಧತಿ ಅಥವಾ ಮನರಂಜನೆಗಾಗಿ ಅಲ್ಲ; ಇದು ಧ್ಯಾನಸ್ಥ ಅರಿವಿನ ಸ್ಥಿತಿಗೆ ಪ್ರವೇಶಿಸುವ ಅವಕಾಶ. ಸಂತೋಷದ ಹಿಂದೆ ಓಡುವುದರಿಂದ ದಣಿವು ಬರುತ್ತದೆ, ಆದರೆ ಆತ್ಮದಲ್ಲಿ ವಿಶ್ರಾಂತಿ ಪಡೆದಾಗ ನಿಜವಾದ ಬಲ ಮತ್ತು ಸಂತೋಷ ದೊರೆಯುತ್ತದೆ. ಮಹಾಶಿವರಾತ್ರಿ ಅಂದರೆ ನಿಮ್ಮೊಳಗಿನ ಆಳವಾದ ವಿಶ್ರಾಂತಿಯ ಸ್ಥಿತಿಗೆ ತಲುಪುವುದು,” ಎಂದು ತಿಳಿಸಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *