ಮೈಲಾರ ಜಾತ್ರೆ: ಯುವಕರು ಕಲ್ಲಿನಿಂದ ಮಂದಿರ ಕಟ್ಟಿದರು.

ಮೈಲಾರ ಜಾತ್ರೆ: ಯುವಕರು ಕಲ್ಲಿನಿಂದ ಮಂದಿರ ಕಟ್ಟಿದರು.

ಮದುವೆ ಸಂಕಷ್ಠದ ಯುವಕರು ಭಕ್ತಿಯಿಂದ ಬೇಡಿಕೊಂಡ ವಿಶೇಷತೆ.

ವಿಜಯನಗರ : ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಮೈಲಾರ ಲಿಂಗೇಶ್ವರನ ಜಾತ್ರೆ ಎಂದರೆ ಅದು ಕೇವಲ ಧಾರ್ಮಿಕ ಉತ್ಸವವಲ್ಲ, ಅದು ಲಕ್ಷಾಂತರ ಭಕ್ತರ ನಂಬಿಕೆಗಳ ಪ್ರತಿಬಿಂಬ. ಆದರೆ ಈ ಬಾರಿ ಮೈಲಾರ ಜಾತ್ರೆಯಲ್ಲಿ ಕಂಡುಬಂದ ಒಂದು ದೃಶ್ಯ ಮಾತ್ರ ಎಲ್ಲರ ಗಮನ ಸೆಳೆದಿದೆ ಮತ್ತು ಇಂದಿನ ಸಾಮಾಜಿಕ ಸ್ಥಿತಿಗತಿಯ ಬಗ್ಗೆಯೂ ಚರ್ಚೆ ಹುಟ್ಟುಹಾಕಿದೆ.

ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದ ಯುವಕರಿಗೆ, ಅದರಲ್ಲೂ ವಿಶೇಷವಾಗಿ ಕೃಷಿಯನ್ನೇ ನಂಬಿಕೊಂಡಿರುವ ರೈತ ಯುವಕರಿಗೆ ಹೆಣ್ಣು ಸಿಗುವುದು ದೊಡ್ಡ ಸವಾಲಾಗಿದೆ. ಇದೇ ಕಾರಣಕ್ಕೆ ನೂರಾರು ಯುವಕರು ಮೈಲಾರಲಿಂಗೇಶ್ವರನ ಜಾತ್ರೆಯಲ್ಲಿ ವಿಶಿಷ್ಟವಾಗಿ ಬೇಡಿಕೊಂಡಿದ್ದಾರೆ.

ಇನ್ನು ಮನೆ ಕಟ್ಟುವವರು ಮೈಲಾರ ಲಿಂಗೇಶ್ವರನ ಬಳಿ ಬೇಡಿಕೊಂಡ ನೂರಾರು ಯುವಕರು ಮೈಲಾರ ಕಾರ್ಣೀಕದ ವೇಳೆ ಅಲ್ಲೇ ಸಿಗೋ ಸಣ್ಣ ಸಣ್ಣ ಕಲ್ಲುಗಳಿಂದ ಮನೆ ಆಕೃತಿ ನಿರ್ಮಿಸಲಾಗುತ್ತಾರೆ. ಹೀಗೆ ಮನೆ ಆಕೃತಿ ಮಾಡಿ ಭಕ್ತಿಯಿಂದ ಬೇಡಿಕೊಂಡ್ರೆ, ಬಹುದಿನಗಳ ಕನಸು ನನಸಾಗುತ್ತೆ ಎಂಬ ನಂಬಿಕೆ ಭಕ್ತರದ್ದು. ಇದೇ ರೀತಿ ಮದುವೆ ಆಗದ ಯುವಕರು ಹುಲ್ಲಿನಲ್ಲಿ ಹಂದರ ಕಟ್ಟಿದರೆ (ಮದುವೆ ಮಂಟಪ) ಕಂಕಣ ಭಾಗ್ಯ ಕೂಡಿ ಬರಲಿದೆ ಎಂಬ ನಂಬಿಕೆ. ಹೀಗಾಗಿ ಕಾರ್ಣೀಕದ ದಿನವೇ ಮೈಲಾರದ ಡಂಕಣಮರಡಿ ಎಂಬಲ್ಲಿ ಕುಳಿತು ಹಂದಿರ ನಿರ್ಮಿಸಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *