8 ವರ್ಷಗಳ ವಿಚಾರಣೆಗೆ ತೆರೆ — ದಿಲೀಪ್ ಮೇಲೆ ಸಂಚು ಆರೋಪ ನಿಲ್ಲಲಿಲ್ಲ,
ಖ್ಯಾತ ನಟಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣದಲ್ಲಿ ಮಲಯಾಳಂ ನಟ ದಿಲೀಪ್ ನಿರ್ದೋಷಿ ಎಂದು ಕೇರಳ ಕೋರ್ಟ್ ತೀರ್ಪು ನೀಡಿದೆ. 2017ರಲ್ಲಿ ಈ ಪ್ರಕರಣ ನಡೆದಿತ್ತು. ಈ ಕೇಸ್ನಲ್ಲಿ ದಿಲೀಪ್ ಅವರು 8ನೇ ಆರೋಪಿ ಆಗಿದ್ದರು. ಅಪರಾಧ ಕೃತ್ಯಕ್ಕೆ ಸಂಚು ರೂಪಿಸಿದ್ದು ಹಾಗೂ ಸಾಕ್ಷಿ ನಾಶದ ಆರೋಪ ಅವರ ಮೇಲಿತ್ತು. ಆದರೆ ಈ ಪ್ರಕರಣದಲ್ಲಿ ದಿಲೀಪ್ ಅವರ ಪಾತ್ರ ಇಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಇದರಿಂದಾಗಿ ದಿಲೀಪ್ ಅವರು ನಿಟ್ಟುಸಿರು ಬಿಟ್ಟಿದ್ದಾರೆ. 8 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ಕೋರ್ಟ್ ಈ ತೀರ್ಪು ನೀಡಿದೆ. ದಿಲೀಪ್ ಅವರನ್ನು ಖುಲಾಸೆಗೊಳಿಸಿದೆ.
ಇದೇ ಪ್ರಕರಣದಲ್ಲಿ 6 ಆರೋಪಿಗಳು ಅಪರಾಧ ಎಸಗಿರುವುದು ಸಾಬೀತಾಗಿದೆ. ಸಾಮೂಹಿಕ ಅತ್ಯಾಚಾರ, ಅಪಹರಣ, ಅಪರಾಧ ಕೃತ್ಯದ ಸಂಚು, ವಿವಸ್ತ್ರಗೊಳಿಸುವ ಯತ್ನ ಸೇರಿದಂತೆ ಹಲವು ಕೃತ್ಯಗಳಲ್ಲಿ 6 ಜನರು ಅಪರಾಧಿಗಳು ಎಂದು ಕೋರ್ಟ್ ತೀರ್ಪು ನೀಡಿದೆ. ಈ 6 ಮಂದಿಗೆ ಡಿಸೆಂಬರ್ 12ರಂದು ಶಿಕ್ಷೆ ಪ್ರಕಟ ಆಗಲಿದೆ.
ತಮ್ಮ ಮೇಲಿನ ಈ ಪ್ರಕರಣ ಖುಲಾಸೆ ಆಗಿದ್ದಕ್ಕೆ ನಟ ದಿಲೀಪ್ ಕುಮಾರ್ ಅವರು ಧನ್ಯವಾದ ತಿಳಿಸಿದ್ದಾರೆ. ಮಾಧ್ಯಮಗಳಿಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಪ್ರಮುಖ ಆರೋಪಿ ಪಲ್ಸರ್ ಸುನಿ ಹಾಗೂ ಆತನ ಸಹಚರರ ಜೊತೆ ಪೊಲೀಸರು ಸೇರಿಕೊಂಡು ನನ್ನ ವಿರುದ್ಧ ಕಥೆ ಕಟ್ಟಿದ್ದರು. ಕೆಲವು ಮಾಧ್ಯಮದವರ ಜೊತೆ ಕೈ ಜೋಡಿಸಿ ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದರು. ಆದರೆ ನ್ಯಾಯಾಲಯದಲ್ಲಿ ಆ ಸುಳ್ಳು ಕಥೆ ನಿಲ್ಲಲಿಲ್ಲ. ನಿಜವಾಗಿ ಸಂಚು ನಡೆದಿದ್ದು ನನ್ನ ವಿರುದ್ಧ. ಈ 9 ವರ್ಷಗಳಲ್ಲಿ ನನ್ನ ಗೌರವ ಮತ್ತು ಜೀವನ ಹಾಳಾಗಿದೆ’ ಎಂದು ದಿಲೀಪ್ ಹೇಳಿದ್ದಾರೆ.
For More Updates Join our WhatsApp Group :
https://chat.whatsapp.com/JVoHqE476Wn3pVh1gWNAcH




