ದಿಲ್ ಸೇ, ಮನ್, ಇಂಡಿಯನ್, ಇತ್ತೀಚಿನ ‘ಹೀರಾಮಂಡಿ’ (Heeramandi) ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಮನಿಷಾ ಕೊಯಿರಾಲಾ (Manisha Koirala) ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗ ತಮಗಾದ ಕಹಿ ಘಟನೆ ನೆನೆದು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
ನಾನು ಚಿತ್ರರಂಗಕ್ಕೆ ಬಂದ ಹೊಸತರಲ್ಲಿ ಒಮ್ಮೆ ಫೋಟೋಶೂಟ್ ಮಾಡಿಸುವಂತೆ ಹೇಳಿದ್ದರು. ಆಗ ಖ್ಯಾತ ಫೋಟೋಗ್ರಾಫರ್ ಒಬ್ಬರು ಇದ್ದರು. ಅಮ್ಮನ ಜೊತೆ ನಾನು ಅವರ ಬಳಿ ಫೋಟೋಶೂಟ್ ಮಾಡಿಸಿಕೊಳ್ಳಲು ಹೋಗಿದ್ದೆ. ಆಗ ಆತ ನನ್ನನ್ನು ನೋಡಿ ನೀವೇ ಮುಂದಿನ ಸ್ಟಾರ್ ಎಂದರು. ಬಳಿಕ ಫೋಟೋ ಕ್ಲಿಕ್ಕಿಸಲು ಬಿಕಿನಿ ಧರಿಸಿ ಬರುವಂತೆ ಹೇಳಿದ್ದರು. ನಾನು ಒಪ್ಪದಾಗ ಬಹಳ ಒತ್ತಾಯಿಸಿದರು ಎಂದು ಮನಿಷಾ ಮಾತನಾಡಿದ್ದಾರೆ
ನಾನು ಬೀಚ್ಗೆ ಹೋದಾಗ ಅಥವಾ ಈಜಲು ಹೋದಾಗ ಮಾತ್ರ ಈ ರೀತಿ ಬಟ್ಟೆ ಧರಿಸುತ್ತೇನೆ. ಒಂದು ವೇಳೆ ಈ ರೀತಿಯಲ್ಲಿ ನಾನು ಸಿನಿಮಾ ಅವಕಾಶ ಪಡೆಯಬೇಕು ಎನ್ನುವುದಾದರೆ ಅದು ನನಗೆ ಬೇಡ. ನಾನು ಬಿಕಿನಿ ಧರಿಸುವುದಿಲ್ಲ. ನನ್ನ ಫೋಟೋ ತೆಗೆಯುವುದಾದರೆ ಪೂರ್ತಿ ಬಟ್ಟೆಯಲ್ಲೇ ತೆಗೆಯಿರಿ ಅಂತ ಆತನಿಗೆ ಉತ್ತರಿಸಿದ್ದೆ ಎಂದು ಆ ಘಟನೆಯನ್ನು ನಟಿ ಮನಿಷಾ ಮೆಲುಕು ಹಾಕಿದ್ದಾರೆ.