ಬಿರಿಯಾನಿ ಅಂಗಡಿ ಫ್ರೀಜರ್‌ನಲ್ಲಿ ವ್ಯಕ್ತಿ ಶವ ಪತ್ತೆ.

ಬಿರಿಯಾನಿ ಅಂಗಡಿ ಫ್ರೀಜರ್‌ನಲ್ಲಿ ವ್ಯಕ್ತಿ ಶವ ಪತ್ತೆ.

ಲಕ್ನೋದಲ್ಲಿ ಶಾಕ್ ಘಟನೆ.

ಲಕ್ನೋ : ಉತ್ತರ ಪ್ರದೇಶದ ಲಕ್ನೋದಲ್ಲಿರುವ ಬಿರಿಯಾನಿ ಅಂಗಡಿಯ ಫ್ರೀಜರ್​​ನಲ್ಲಿ 35 ವರ್ಷ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿರುವ ಘಟನೆ ನಡೆದಿದೆ. ಬಕ್ಷಿ ಕಾ ತಾಲಾಬ್ ಪ್ರದೇಶದಲ್ಲಿರುವ ಅಂಡಗಿಯಲ್ಲಿ ಈ ಘಟನೆ ನಡೆದಿದೆ. ಮೃತರನ್ನ ವಿಜಯ್ ಪಾಲ್ ಎಂದು ಗುರುತಿಸಲಾಗಿದೆ. ಅವರು ಬಿಕೆಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕಿಶನ್​ಪುರ್ ಮಾಜ್ರಾ ನಿವಾಸಿಯಾಗಿದ್ದರು.

ಅಂಗಡಿ ಮಾಲೀಕರಾದ ಶನಿ ರಾವತ್​ ಅವರ ತಂದೆ ಮೃತಪಟ್ಟ ಹಿನ್ನೆಲೆಯಲ್ಲಿ ಅಂಗಡಿಯು ಕಳೆದ ನಾಲ್ಕು ದಿನಗಳಿಂದ ಮುಚ್ಚಿತ್ತು. ರಾವತ್ ಭಾನುವಾರ ಬೆಳಗ್ಗೆ ಔಟ್ಲೆಟ್ ಅನ್ನು ಮತ್ತೆ ತೆರೆಯಲು ರಾವತ್ ಬಂದಾಗ, ಫ್ರೀಜರ್ ಒಳಗೆ ಶವವನ್ನು ಕಂಡು ಆಘಾತಕ್ಕೊಳಗಾದರು. ಅವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಶವವನ್ನು ಫ್ರೀಜರ್‌ನಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ದಿನಗೂಲಿ ಕೆಲಸಗಾರ ವಿಜಯ್ ಪಾಲ್ ಐದು ವರ್ಷಗಳ ಹಿಂದೆ ತನ್ನ ಹೆಂಡತಿಯಿಂದ ಬೇರ್ಪಟ್ಟ ನಂತರ ಒಂಟಿಯಾಗಿ ವಾಸಿಸುತ್ತಿದ್ದರು ಮತ್ತು ಮದ್ಯದ ಚಟಕ್ಕೆ ಒಳಗಾಗಿದ್ದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯಿಂದ ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ ಎಂದು ಎಡಿಸಿಪಿ (ಉತ್ತರ ವಲಯ) ರಿಷಭ್ ರನ್ವಾಲ್ ಹೇಳಿದ್ದಾರೆ.

ಮತ್ತೊಂದುಘಟನೆ ಕೊಡಲಿಯಿಂದ ತಂದೆಯನ್ನೇ ಕಡಿದು ಕೊಂದು, ಟ್ಯಾಂಕ್​ಗೆ ಎಸೆದು ನೆಮ್ಮದಿಯಿಂದ ಕುಳಿತು ಬಿರಿಯಾನಿ ತಿಂದ ಮಗ ಹೋಳಿ(Holi)ಯ ಹಬ್ಬದ ಅಂಗವಾಗಿ ನಡೆಸುವ ಹೋಳಿ ಕಾ ದಹನ್ ಹಬ್ಬದ ರಾತ್ರಿ ನಡೆದ ಕೌಟುಂಬಿಕ ಕಲಹ ಭೀಕರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಛತ್ತೀಸ್​ಗಢದ ಅಂಬಿಕಾಪುರದಲ್ಲಿ ನಡೆದಿದೆ. ಅಲ್ಲಿ ವ್ಯಕ್ತಿಯೊಬ್ಬ ತಂದೆಯನ್ನು ಕೊಡಲಿಯಿಂದ ಕಡಿದು ಕೊಲೆ ಮಾಡಿ, ಮನೆಯ ಪಕ್ಕದಲ್ಲಿರುವ ನೀರಿನ ತೊಟ್ಟಿಯಲ್ಲಿ ಎಸೆದು ನಂತರ ಶಾಂತವಾಗಿ ಬಿರಿಯಾನಿ ತಿಂದು ಮಲಗಿದ್ದಾನೆ ಎನ್ನಲಾಗಿದೆ.

ಪೊಲೀಸರು ಅದೇ ರಾತ್ರಿ ಆರೋಪಿ ಮಗನನ್ನು ಬಂಧಿಸಿದ್ದಾರೆ.ಮೃತ ಪರಾಸ್ ಕರ್ಕೆಟ್ಟಾ ಬೇರೆ ಮನೆಯಲ್ಲಿ ವಾಸವಾಗಿದ್ದರು, ಅವರ ಮಗ ಪ್ರಭಾತ್ ಅಲಿಯಾಸ್ ಲೆಡಾ ಮನೆ ಕೆಲವೇ ಕೆಲವು ಮೀಟರ್ ದೂರದಲ್ಲಿತ್ತು. ಇಬ್ಬರ ಮನೆಗಳ ಮಧ್ಯೆ ಕೇವಲ ಎರಡು ಮನೆಗಳಿದ್ದವು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *