ಮೈಖಲ್ ಜಾಕ್ಸನ್ ಧರಿಸುವ ಬಟ್ಟೆ, ಅವರ ಹ್ಯಾಟು, ಅವರ ಡ್ಯಾನ್ಸ್ ಮೂವ್ಗಳಂತೂ ಇಂದಿಗೂ ಐಕಾನಿಕ್. ಮೈಖಲ್ ಜಾಕ್ಸನ್ 2009 ರಲ್ಲಿ ನಿಧನ ಹೊಂದಿದರು. ಅದಾದ ಬಳಿಕ ಅವರಿಗೆ ಸೇರಿದ ವಸ್ತುಗಳನ್ನು ಆಕ್ಷನ್ ಮಾಡುತ್ತಾ ಬರಲಾಗುತ್ತಿದೆ. ಇದೀಗ ಅವರು ಕಾರ್ಯಕ್ರಮವೊಂದರಲ್ಲಿ ಧರಿಸಿದ್ದ ಕಾಲುಚೀಲವನ್ನು ಹರಾಜು ಹಾಕಲಾಗಿದ್ದು, ಕೋಟ್ಯಂತರ ರೂಪಾಯಿಗೆ ಅದು ಮಾರಾಟವಾಗಿದೆ.
ಮೈಖಲ್ ಜಾಕ್ಸನ್ ವಿಶ್ವದ ನಂಬರ್ 1 ಮ್ಯೂಸಿಕ್ ಸ್ಟಾರ್. ಮೈಖಲ್ ನಿಧನ ಹೊಂದಿ ವರ್ಷಗಳೇ ಆಗಿದ್ದರು ಇಂದಿಗೂ ಸಹ ಅವರ ಜನಪ್ರಿಯತೆ ತುಸು ಸಹ ತಗ್ಗಿಲ್ಲ. ಮೈಖಲ್ ಬದುಕಿದ್ದಾಗ ಅವರು ಮಾಡಿದ್ದೆಲ್ಲವೂ ಸ್ಟೈಲ್, ಟ್ರೆಂಡ್ ಆಗುತ್ತಿತ್ತು. ಮೈಖಲ್ ಧರಿಸುವ ಬಟ್ಟೆ, ಅವರ ಹ್ಯಾಟು, ಅವರ ಡ್ಯಾನ್ಸ್ ಮೂವ್ಗಳಂತೂ ಇಂದಿಗೂ ಐಕಾನಿಕ್. ಮೈಖಲ್ ಜಾಕ್ಸನ್ 2009 ರಲ್ಲಿ ನಿಧನ ಹೊಂದಿದರು. ಅದಾದ ಬಳಿಕ ಅವರಿಗೆ ಸೇರಿದ ವಸ್ತುಗಳನ್ನು ಆಕ್ಷನ್ ಮಾಡುತ್ತಾ ಬರಲಾಗುತ್ತಿದೆ. ಇದೀಗ ಅವರು ಕಾರ್ಯಕ್ರಮವೊಂದರಲ್ಲಿ ಧರಿಸಿದ್ದ ಕಾಲುಚೀಲವನ್ನು ಹರಾಜು ಹಾಕಲಾಗಿದ್ದು, ಕೋಟ್ಯಂತರ ರೂಪಾಯಿಗೆ ಅದು ಮಾರಾಟವಾಗಿದೆ
ಮೈಖಲ್ ಜಾಕ್ಸನ್ 1997 ರಲ್ಲಿ ನಡೆಸಿದ್ದ ಕಾನ್ಸರ್ಟ್ ಒಂದು ಭಾರಿ ಯಶಸ್ಸು ಗಳಿಸಿತ್ತು. ಕಾನ್ಸರ್ಟ್ನಲ್ಲಿ ಹೊಳೆಯುವ ಕಾಲು ಚೀಲಗಳನ್ನು ಮೈಖಲ್ ಜಾಕ್ಸನ್ ಧರಿಸಿದ್ದರು. ಆ ಹೊಳೆಯುವ ಕಾಲು ಚೀಲ ಆಗ ಬಲು ಜನಪ್ರಿಯವಾಗಿತ್ತು. ಫ್ರ್ಯಾನ್ಸ್ ನಿಮೆನ್ ನಗರದಲ್ಲಿ ಕಾನ್ಸರ್ಟ್ ನಡೆದಾಗ ಕಾರ್ಯಕ್ರಮದ ಬಳಿಕ ಮೈಖಲ್ ಜಾಕ್ಸನ್ ಅವರ ಡ್ರೆಸ್ಸಿಂಗ್ ಕೋಣೆಯ ಬಳಿ ಅವರದ್ದೇ ತಂಡದಲ್ಲಿದ್ದ ವ್ಯಕ್ತಿಯೊಬ್ಬನಿಗೆ ಜಾಕ್ಸನ್ ಅವರ ಕಾಲು ಚೀಲ ದೊರೆತಿತ್ತಂತೆ. ಅದನ್ನು ಆತ ಇಷ್ಟು ವರ್ಷ ಸಂಗ್ರಹಿಸಿ ಇಟ್ಟುಕೊಂಡಿದ್ದ.
ಇದೀಗ ಆ ಹೊಳೆಯುವ ಕಾಲು ಚೀಲಗಳನ್ನು ಫ್ರ್ಯಾನ್ಸ್ನಲ್ಲಿ ಹರಾಜು ಹಾಕಲಾಗಿದೆ. ಕಾಲಾಂತರದಲ್ಲಿ ಬಿಳಿಯ ಬಣ್ಣದ ಕಾಲು ಚೀಲ ತುಸು ಹಳದಿ ಆಗಿದೆ, ಅದರ ಅಲಂಕಾರಕ್ಕೆ ಬಳಸಲಾಗಿರುವ ಹರಳುಗಳು ಸಹ ತುಸು ಮಬ್ಬಾಗಿವೆ. ಆದರೂ ಸಹ ಕಾಲು ಚೀಲ ಭಾರತೀಯ ರೂಪಾಯಿ ಲೆಕ್ಕದಲ್ಲಿ 7.70 ಲಕ್ಷ ರೂಪಾಯಿಗೆ ಹರಾಜಾಗಿದೆ. ಮೈಖಲ್ ಅವರ ಇತರೆ ವಸ್ತುಗಳ ಹರಾಜಿಗೆ ಹೋಲಿಸಿದರೆ ಇದು ಕಡಿಮೆ ಮೊತ್ತವೇ ಆಗಿದೆ.
ಅದೇ ಕಾರ್ಯಕ್ರಮದಲ್ಲಿ ಮೈಖಲ್ ಧರಿಸಿದ್ದ ಟೋಪಿಯನ್ನು 2023 ರಲ್ಲಿ ಪ್ಯಾರಿಸ್ನಲ್ಲಿ ಹರಾಜು ಹಾಕಿದ್ದಾಗ ಅದು ಬರೋಬ್ಬರಿ 70 ಲಕ್ಷಕ್ಕೆ ಹರಾಜಾಗಿತ್ತು. ಮೈಖಲ್ ಜಾಕ್ಸನ್ ಧರಿಸಿದ್ದ ಕೈಗವುಸು 2009 ರಲ್ಲಿ ಹರಾಜಾಗಿದ್ದಾಗ 3 ಕೋಟಿಗೂ ಹೆಚ್ಚು ಬೆಲೆ ತೆತ್ತು ಖರೀದಿ ಮಾಡಲಾಗಿತ್ತು.
ಮೈಖಲ್ ಜಾಕ್ಸನ್ ವಿಶ್ವದ ನಂಬರ್ 1 ಪಾಪ್ ತಾರೆಯರಾಗಿದ್ದರು. ಅವರ ಹಾಡು ಮತ್ತು ಡ್ಯಾನ್ಸ್ ವಿಡಿಯೋಗಳು ಇಂದಿಗೂ ಟ್ರೆಂಡಿಂಗ್ನಲ್ಲಿರುತ್ತವೆ. ಭಾರಿ ಸಂಖ್ಯೆಯ ಅಭಿಮಾನಿಗಳು ಇಂದಿಗೂ ಅವರಿಗೆ ಇದ್ದಾರೆ. ಜೂನ್ 25, 2009 ರಲ್ಲಿ ತಮ್ಮ 50ನೇ ವಯಸ್ಸಿಗೆ ಮೈಖಲ್ ಜಾಕ್ಸನ್ ನಿಧನ ಹೊಂದಿದರು. ಜಾಕ್ಸನ್ ಕೆಲವು ದೈಹಿಕ ಮತ್ತು ಮಾನಸಿಕ ಖಾಯಿಲೆಗಳಿಂದ ಬಳಲುತ್ತಿದ್ದರು. ಜೂನ್ 25 ರಂದು ಅವರಿಗೆ ಹೃದಯಾಘಾತವಾಗಿತ್ತು. ನಿದ್ದೆ ಮಾತ್ರೆಯ ಓವರ್ಡೋಸ್ನಿಂದಾಗಿ ಅವರಿಗೆ ಹೃದಯಾಘಾತವಾಗಿದೆ ಎನ್ನಲಾಯ್ತು.