ಕುಡಿದ ಮತ್ತಲ್ಲಿ `KSRTC’ ಬಸ್ ಗೆ ಕಲ್ಲು ತೂರಿದ ಕಿಡಿಗೇಡಿಗಳು

ಕುಡಿದ ಮತ್ತಲ್ಲಿ `KSRTC' ಬಸ್ ಗೆ ಕಲ್ಲು ತೂರಿದ ಕಿಡಿಗೇಡಿಗಳು

ಕುಡಿದ ಮತ್ತಲ್ಲಿ `KSRTC' ಬಸ್ ಗೆ ಕಲ್ಲು ತೂರಿದ ಕಿಡಿಗೇಡಿಗಳು

ಮಂಡ್ಯ :- ಸರ್ಕಾರಿ ಬಸ್ ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಯುವಕರ ತಂಡ ಬಸ್ ಗೆ ಕಲ್ಲು ಹೊಡೆದ ಪರಿಣಾಮ ಬಸ್ಸಿನ ಗಾಜು ಪುಡಿ ಪುಡಿಯಾಗಿ ಮಹಿಳೆ ಗಾಯಗೊಂಡಿರುವ ಘಟನೆ ಮದ್ದೂರು ಪಟ್ಟಣದ ಕೊಪ್ಪ ಸರ್ಕಲ್ ಬಳಿ ಗುರುವಾರ ಸಂಜೆ ನಡೆದಿದೆ.

ಮಹೇಶ್, ಗಿರೀಶ್, ಮಧುಕುಮಾರ್, ಯಶವಂತ್, ದೀಪು ಎಂಬ 5 ಮಂದಿ ಯುವಕರ ತಂಡ ಕಂಠ ಪೂರ್ತಿ ಕುಡಿದು ಕೊಪ್ಪ ಸರ್ಕಲ್ ಬಳಿ ಬೆಂಗಳೂರಿಗೆ ತೆರಳುತ್ತಿದ್ದ (KA -42-F-2146) ಬಸ್ ಹತ್ತಲು ಮುಂದಾಗಿದ್ದಾರೆ.

ಯುವಕರು ಬಸ್ ಹತ್ತಲು ತಡ ಮಾಡಿದ ಪರಿಣಾಮ ನಿರ್ವಾಹಕ ಇವರನ್ನು ಬಿಟ್ಟು ತೆರಳಲು ಚಾಲಕನಿಗೆ ಸೂಚನೆ ನೀಡಿದ್ದಾನೆ.

ಇದರಿಂದ ಆಕ್ರೋಶಗೊಂಡ ಯುವಕರ ಗುಂಪು ಬಸ್ ಮುಂದಕ್ಕೆ ಚಲಿಸುತ್ತಿದ್ದಂತೆ ಹಿಂಬದಿ ಗಾಜಿಗೆ ಕಲ್ಲಿನಿಂದ ತೂರಿದ್ದಾರೆ. ಈ ವೇಳೆ ಕಲ್ಲು ಬಸ್ಸಿನ ಹಿಂಬದಿ ಗಾಜಿಗೆ ಒಡೆದ ಪರಿಣಾಮ ಗಾಜು ಪುಡಿ ಪುಡಿಯಾಗಿ ಬಸ್ ನಲ್ಲಿದ್ದ ಮಹಿಳೆಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಇದರಿಂದ ಆತಂಕಗೊಂಡ ಪ್ರಯಾಣಿಕರು ಏನಾಯಿತೆಂದು ವಿಚಾರಿಸಿದಾಗ ಯುವಕರು ಕಲ್ಲು ತೂರಿರುವುದು ಬೆಳಕಿಗೆ ಬಂದಿದೆ.

ಯುವಕರು ಮದ್ಯಪಾನ ಮಾಡಿದ್ದರು ಎಂದು ಪ್ರಯಾಣಿಕರು ಹಾಗೂ ಬಸ್ ನಿರ್ವಾಹಕ ಅನುಮಾನ ವ್ಯಕ್ತಪಡಿಸಿದ್ದಾರೆ. ನಂತರ ಬಸ್ ನಿರ್ವಾಹಕ ಬಸ್ ಅನ್ನು ನಿಲ್ಲಿಸಿ ಸಾರ್ವಜನಿಕರ ಸಹಾಯದಿಂದ ಅಲ್ಲೆ ಇದ್ದ ಒಬ್ಬ ಯುವಕನನ್ನು ಹಿಡಿದುಕೊಳ್ಳುತ್ತಿದ್ದಂತೆ ನಾಲ್ವರು ಯುವಕರು ಪರಾರಿಯಾಗಿದ್ದಾರೆ.

ಯುವಕರು ಯಾವ ಊರು ಹಾಗೂ ಮಹಿಳೆ ಯಾರು, ಯಾವ ಊರ ಎಂಬ ಮಾಹಿತಿ ತಿಳಿದು ಬಂದಿಲ್ಲ. ಬಳಿಕ ಪೋಲೀಸರಿಗೆ ಒಬ್ಬನನ್ನು ಒಪ್ಪಿಸಿ ನಂತರ ಬಸ್ ನಲ್ಲಿದ್ದ ಪ್ರಯಾಣಿಕರನ್ನು ಬೇರೆ ಬಸ್ಸಿನಲ್ಲಿ ತೆರಳಲು ಅವಕಾಶ ಮಾಡಿಕೊಟ್ಟು ನಂತರ ಪೋಲೀಸರು ಬಸ್ಸನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *