ಬೆಂಗಳೂರು: ಸರ್ಕಾರಿ ಶಾಲೆಯ ನೀರಿನ ಸಿಂಟೆಕ್ಸ್ ಟ್ಯಾಂಕ್ ಗೆ ಕಳೆನಾಶಕ ಬೆರೆಸಿರು ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹೂವಿನಕೋಣೆಯಲ್ಲಿ ನಡೆದಿದ್ದು, ಅದೃಷ್ಟವಶಾತ್ ಶಾಲಾ ಮಕ್ಕಳ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ. 32 ಮಕ್ಕಳು ಇರುವ ಹೂವಿನಕೋಣೆಯ ಸರ್ಕಾರಿ ಶಾಲೆಯಲ್ಲಿ ಕುಡಿಯಲು ಬಳಸುತ್ತಿದ್ದ ಎರಡೂ ನೀರಿನ ಸಿಂಟೆಕ್ಸ್ ನಲ್ಲಿ ಕಳೆನಾಶಕ ಬೆರೆಸಲಾಗಿದ್ದು, ಕೈತೊಳೆಯಲು ನೀರು ಬಳಸುತ್ತಿದ್ದಂತೆ ಮಕ್ಕಳಿಗೆ ಅನುಮಾನ ಬಂದಿದೆ. ಕೂಡಲೇ ಮಕ್ಕಳು ಶಿಕ್ಷಕರಿಗೆ ತಿಳಿಸಿದಾಗ ನೀರಿನ ಟ್ಯಾಂಕ್ ನಲ್ಲಿ ವಿಷ ಹಾಕಿರುವುದು ಪತ್ತೆಯಾಗಿದೆ. ಅದೃಷ್ಟವಶಾತ್ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಕ್ಕಳು ಕೈ ತೊಳೆಯಲು ನೀರು ಬಳಸುತ್ತಿದ್ದಂತೆಯೇ ಮಕ್ಕಳಿಗೆ ಅನುಮಾನ ಬಂದಿದ್ದು, ಕೂಡಲೇ ಶಿಕ್ಷಕರಿಗೆ ತಿಳಿಸಿದ್ದಾರೆ.ಆದ್ರೆ ಅಷ್ಟರಾಗಲೇ ಶಾಲೆಯ ಬಿಸಿಯೂಟದ ಅಡುಗೆಗೂ ಅದೇ ನೀರನ್ನು ಬಳಸಲಾಗಿದೆ. ಇನ್ನು ಆ ನೀರಿನಿಂದ ಕೈ ತೊಳೆದಿದ್ದ ಮಕ್ಕಳ ಕೈನಲ್ಲಿ ಗಾಯಗಳಾಗಿರುವುದು ಕಂಡುಬಂದಿದ್ದು, ಕೂಡಲೇ ಮಕ್ಕಳನನ್ಉ ಹೊಸನಗರ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೊಸನಗರ ತಹಶಿಲ್ದಾರ್ ರಶ್ಮಿ ಹಾಲೇಶ್ ಹಾಗೂ ಹೊಸನಗರ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ.
ಸ್ವಲ್ಪ ಹೆಚ್ಚು ಕಡಿಮೆಯಾಗಿ ವಿಷ ಬೆರೆಸಿದ ನೀರಿನಿಂದ ತಯಾರಿಸಿದ್ದ ಬಿಸಿಯೂಟ ಸೇವಿಸಿದ್ದರೆ ಮಕ್ಕಳ ಸ್ಥಿತಿ ಏನಾಗಿರಬೇಡ. ದುಷ್ಕರ್ಮಿಗಳು ಏಕೆ ಶಾಲೆ ನೀರಿನ ಟ್ಯಾಂಕ್ನಲ್ಲಿ ವಿಷ ಹಾಕಿದ್ದಾರೆ ಎನ್ನುವುದೇ ನಿಗೂಢವಾಗಿದೆ. ಯಾರ ಮೇಲೆ ದ್ವೇಷ ಇದ್ದರೂ ಅದನ್ನು ಅವರ ಮೇಲೆ ವೈಯಕ್ತಿಕವಾಗಿ ಅವರೊಂದಿಗೆ ತೀರಿಸಿಕೊಳ್ಳಬೇಕು. ಆದ್ರೆ, ಹತ್ತಾರು ಮಕ್ಕಳು ಕುಡಿಯುವ ನೀರಿನ ಟ್ಯಾಂಕ್ಗೆ ವಿಷ ಹಾಕಿರುವುದು ಎಷ್ಟು ಸರಿ? ನಿಜಕ್ಕೂ ಇದೊಂದು ಕ್ರೂರತನ ಎಂದು ಹೇಳಬಹುದು.