ಈ ಸಂಖ್ಯೆಗಳಿಂದ ಮಿಸ್ಡ್‌ ಕಾಲ್‌ ಬರುತ್ತಿದೆಯೇ? ವಾಟ್ಸ್‌ಆ್ಯಪ್​ ಬಳಕೆದಾರರೇ ಎಚ್ಚರ

ವಿಶೇಷ ಸೂಚನೆ: ಯಾವುದೇ ವಂಚನೆ ಪ್ರಕರಣಗಳ ಕುರಿತು ಹೆಚ್ಚಿನ ಮಾಹಿತಿಗೆ 4123ಗೆ ಕರೆ ಮಾಡಬಹುದು.

ತಂತ್ರಜ್ಞಾನ ವರವೂ ಹೌದು, ಶಾಪವೂ ಹೌದು. ತಂತ್ರಜ್ಞಾನ ಜಗತ್ತಿನ ಎಲ್ಲಾ ಮಾಹಿತಿಯನ್ನು ಬೆರಳ ತುದಿಗೆ ತಂದಿಡುತ್ತಿದೆ. ಮತ್ತೊಂದೆಡೆ, ನಮ್ಮೆಲ್ಲಾ ಮಾಹಿತಿಗೆ ಕನ್ನ ಹಾಕುವ, ವಂಚನೆ ಎಸಗುವ ಪ್ರಯತ್ನಗಳೂ ನಿತ್ಯ ಸಾಗುತ್ತಿವೆ. ಇದರ ಭಾಗವಾಗಿಯೇ ಇತ್ತೀಚಿನ ದಿನಗಳಲ್ಲಿ ಆನ್‌ಲೈನ್​ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದೆ. ತಂತ್ರಜ್ಞಾನದ ಮೂಲಕವೇ ಸೈಬರ್​ ಅಪರಾಧಿಗಳು ಜನರನ್ನು ಮೋಸ ಮಾಡಲು ವಿವಿಧ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಅದರಲ್ಲೂ ಜನಪ್ರಿಯ ವಾಟ್ಸ್‌ಆ್ಯಪ್​ ಮೂಲಕ ಹೊಸದಾಗಿ ವಂಚನೆ ಪ್ರವೃತ್ತಿ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್​ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯುರೋ (ಬಿಪಿಆರ್​ಡಿ) ಬಳಕೆದಾರರಿಗೆ ಎಚ್ಚರಿಕೆ ನೀಡಿದೆ.

ಸಂಖ್ಯೆಗಳಿಂದ ಮಿಸ್ಕಾಲ್ಬರುತ್ತಿದೆಯೇ?: ಬಳಕೆದಾರರಿಗೆ ಅನೇಕ ಬಾರಿ ವಾಟ್ಸ್‌ಆ್ಯಪ್​ನಲ್ಲಿ ಅಪರಿಚಿತ ನಂಬರ್​ನಿಂದ ಮಿಸ್ಡ್​​ಕಾಲ್​ಗಳು ಬರುತ್ತವೆ. ಒಂದೆರಡು ಬಾರಿ ರಿಂಗ್​ ಆದ ಬಳಿಕ ಈ ಕರೆಗಳು ಕಟ್​ ಆಗುತ್ತವೆ. ಇಂಥವು ಹ್ಯಾಕರ್​ಗಳು ಮಾಡುವ ಕರೆಗಳಾಗಿದೆ. ಈ ರೀತಿ ಕರೆ ಮಾಡುವ ಮೂಲಕ ವಾಟ್ಸ್‌ಆ್ಯಪ್​​ ಅನ್ನು ಪತ್ತೆ ಮಾಡಿ, ವಿವಿಧ ಮಾರ್ಗವಾಗಿ ಅವರಿಗೆ ಸೈಬರ್​​ ಬೆದರಿಕೆ ಒಡ್ಡುವ ಪ್ರಯತ್ನ ನಡೆಯುತ್ತಿದೆ. ಈ ಮಿಸ್​​ ಕಾಲ್​​​ಗಳು ಸಾಮಾನ್ಯವಾಗಿ +254, +63, +1(218) ಈ ಆರಂಭಿಕ ಸಂಖ್ಯೆಗಳಿಂದ ಪ್ರಾರಂಭವಾಗುತ್ತವೆ. ಈ ಸಂಖ್ಯೆಗಳು ವಿಯೆಟ್ನಾಂ, ಕೀನ್ಯಾ, ಇಥಿಯೋಪಿಯಾ ಮತ್ತು ಮಲೇಷ್ಯಾ ದೇಶಗಳಿಂದ ಬರುತ್ತವೆ. ಹೀಗಾಗಿ ಮಿಸ್​ ಕಾಲ್​/ಈ ಸಂಖ್ಯೆಯಿಂದ ಕರೆ ಬಂದಾಗ ಹೆಚ್ಚು ಜಾಗ್ರತೆ ವಹಿಸುವಂತೆ ಬಿಪಿಆರ್​ಡಿ ತಿಳಿಸಿದೆ.

ಉದ್ಯೋಗದ ಆಮಿಷಸೈಬರ್​ ವಂಚಕರು ಬಹುತೇಕ ಬಾರಿ ಉತ್ತಮ ವೇತನದೊಂದಿಗಿನ ಉದ್ಯೋಗ ಭರವಸೆಯ ಸಂದೇಶಗಳನ್ನು ಕಳುಹಿಸುತ್ತಾರೆ. ಯಾವುದೇ ಡಿಪಿ ಇಲ್ಲದ ವಾಟ್ಸ್‌ಆ್ಯಪ್​ ನಂಬರ್​​ಗಳಿಂದ ಪೂರ್ಣಕಾಲಿಕ, ಅರೆಕಾಲಿಕ, ವರ್ಕ್​ ಫ್ರಮ್​ ಹೋಮ್‌ ಉದ್ಯೋಗದ ಆಮಿಷ ತೋರಿಸುತ್ತಾರೆ. ಇಂತಹ ಸಂದೇಶಗಳಿಗೆ ಅಪ್ಪಿತಪ್ಪಿಯೂ ಪ್ರತಿಕ್ರಿಯಿಸಬೇಡಿ ಎಂದು ಬಿಪಿಆರ್​ಡಿ ಹೇಳಿದೆ.

ಬ್ಯಾಂಕ್ಮಾಹಿತಿಗೆ ಕನ್ನ: ವಾಟ್ಸ್‌ಆ್ಯಪ್‌ನಲ್ಲಿ ಸ್ಕ್ರೀನ್​ ಶೇರಿಂಗ್​ ಫೀಚರ್​ ಲಭ್ಯವಿದೆ. ವಿಡಿಯೋ ಕಾಲ್‌ನಲ್ಲಿ ಈ ಆಯ್ಕೆ ಸಿಗುತ್ತದೆ. ಬೇರೆ ವ್ಯಕ್ತಿ ನಿಮ್ಮ ಸ್ಕ್ರೀನ್​ ಹಂಚಿಕೊಳ್ಳುವ ಮೂಲಕ ಮಾಹಿತಿ ಪಡೆಯಬಹುದು. ಸೈಬರ್​​ ಅಪರಾಧಿಗಳು ಅಕೌಂಟ್​ ದಾಖಲಾತಿ ಮತ್ತು ಖಾಸಗಿ ಮಾಹಿತಿಯನ್ನು ಪಡೆಯಬಹುದು. ಇದರ ಹೊರತಾಗಿ ಕೆಲವು ಮಾಹಿತಿ ಕದಿಯುವ ಆ್ಯಪ್​ಗಳನ್ನು ಬಳಕೆದಾರರ ಫೋನ್‌ನಲ್ಲಿ ಅಳವಡಿಸಬಹುದು.

ಟ್ರೇಡಿಂಗ್​ ಸಲಹೆ ನೀಡುವುದಾಗಿ ಮೋಸ: ಅನೇಕರು ತಾವು ವ್ಯಾಪಾರದ ಕೌಶಲ್ಯ ಹೊಂದಿದ್ದು, ಇದರಲ್ಲಿ ಲಾಭ ಗಳಿಸಲು ಸಲಹೆ ನೀಡುವುದಾಗಿ ಸಂದೇಶ ಕಳುಹಿಸುತ್ತಾರೆ. ಅನಧಿಕೃತ ಅಪ್ಲಿಕೇಷನ್​ ಲಿಂಕ್​ ಕಳುಹಿಸಿ, ಅದರಲ್ಲಿ ಖಾತೆ ತೆರೆದು ಹಣದ ಹೂಡಿಕೆ ಮಾಡುವಂತೆ ಪ್ರೋತ್ಸಾಹಿಸುತ್ತಾರೆ. ಆರಂಭದಲ್ಲಿ ಬಳಕೆದಾರರಿಗೆ ಲಾಭ ತೋರಿಸಿ, ಮತ್ತಷ್ಟು ಹೂಡಿಕೆ ಮಾಡುವಂತೆ ಪ್ರೇರೇಪಿಸುತ್ತಾರೆ. ಇದನ್ನು ನಂಬಿ ಅನೇಕರು ಹೂಡಿಕೆ ಮಾಡುತ್ತಾರೆ. ಈ ರೀತಿ ಹೂಡಿಕೆ ಮಾಡಿದ ಮಂದಿ ಮತ್ತೆ ತಮ್ಮ ಖಾತೆ ತೆರೆದಾಗ ಮೋಸ ಹೋಗಿರುವುದು ಕಂಡು ಬರುತ್ತದೆ.

Pragati TV Social Connect for more latest u

Leave a Reply

Your email address will not be published. Required fields are marked *