ಶಾಸಕರೇ ಮಹಾತ್ಮ ಗಾಂಧಿ ಕ್ರೀಡಾಂಗಣ ಉದ್ಘಾಟನೆ ಯಾವಾಗ..?

ತುಮಕೂರು : ನಗರದ ಹೃದಯಭಾಗದಲ್ಲಿದೆ ಮಹಾತ್ಮಗಾಂಧಿ ಕ್ರೀಡಾಂಗಣ. ಆದ್ರೆ ಇದು ಕ್ರೀಡಾಪಟುಗಳಿಗೆ ಇದ್ದರೂ ಇಲ್ಲದಂತಾಗಿದೆ. ಕಾರಣ ಕಳೆದ ಮೂರು ವರ್ಷದಿಂದ ಕ್ರೀಡಾಂಗಣದ ನಿರ್ಮಾಣ ಕಾರ್ಯದಿಂದ ಬಹುತೇಕ ಕ್ರೀಡಾಚಟುವಟಿಕೆ ಸ್ತಬ್ದಗೊಂಡಿವೆ. ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ಕ್ರೀಡಾಕೂಟಗಳಿಗೆ ಪೂರ್ವ ತಯಾರಿಗೆ ಹಿನ್ನಡೆಯಾಗಿದೆ. ಸರಿಯಾದ ಟ್ರಾಕ್ ಇಲ್ಲದೆ ಅಭ್ಯಾಸಕ್ಕೆ ತೊಂದರೆಯಾಗಿ ಸಾಕಷ್ಟು ಸಂಕಷ್ಟ ಅನುಭವಿಸಬೇಕಾದ ಪರಿಸ್ಥಿತಿ ಇದೆ.

ಕ್ರೀಡಾಂಗಣ ಶೇ100ಕ್ಕೆ 100 ರಷ್ಟು ಸಿದ್ದವಾಗಿದೆ. ಇದರ ಜೊತೆಗೆ ಪಕ್ಕದಲ್ಲಿಯೇ ಕ್ರೀಡಾ ಕಾಂಪ್ಲೆಕ್ಸ್ ಸಹ ಸಿದ್ದಗೊಂಡಿದೆ. ಕ್ರೀಡಾಂಗಣವನ್ನು ಉದ್ಘಾಟಿಸಿ, ಮಕ್ಕಳ ಅಭ್ಯಾಸಕ್ಕೆ ಅವಕಾಶ ಕಲ್ಪಿಸಿ ಎಂದು ಹಲವಾರು ಬಾರಿ ಜಿಲ್ಲಾ ಮಂತ್ರಿಗಳು, ಕ್ರೀಡಾ ಮಂತ್ರಿಗಳು, ಕ್ರೀಡಾ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಎಲ್ಲರೂ ಒಬ್ಬರ ಮೇಲೆ ಮತ್ತೊಬ್ಬರು ಜವಾಬ್ದಾರಿ ಹಾಕುವ ಮೂಲಕ ಕಾಲಾಹರಣ ಮಾಡುತ್ತಿದ್ದಾರೆ ಎಂದು ಕ್ರೀಡಾಪಟುಗಳ ಗಂಭೀರ ಆರೋಪ ವಾಗಿದೆ.

ಕ್ರೀಡಾಂಗಣದಲ್ಲಿ ಕ್ರೀಡಾಪಟುಗಳಿಗೆ ಅಭ್ಯಾಸಕ್ಕೆ ಅವಕಾಶ ಕಲ್ಪಿಸಬೇಕು. ಜೊತೆಗೆ, ಕ್ರೀಡಾ ಕಾಂಪ್ಲೆಕ್ಸ್ನಲ್ಲಿ ಕ್ರೀಡಾ ಕ್ಲಬ್ಗಳಿಗೆ ಬಾಡಿಗೆ ಆಧಾರದಲ್ಲಿ ಮಳಿಗೆ ನೀಡುವಂತೆ ಪುಟ್ಬಾಲ್, ವಾಲಿಬಾಲ್, ಬ್ಯಾಸ್ಕೇಟ್ಬಾಲ್, ಶೂಟಿಂಗ್, ಜಿಮ್ನಾಸ್ಟಿಕ್ ಸೇರಿದಂತೆ ಎಲ್ಲಾ ಅಸೋಸಿಯೇಷನ್ಗಳ ಒತ್ತಾಯವಾಗಿದೆ. ಆದರೆ ನಾಲ್ಕು ಅಂತಸ್ಥನ್ನು ಖಾಸಗಿಯವರಿಗೆ ನೀಡಲು ಹುನ್ನಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಕಷ್ಟಪಟ್ಟು ನಾವು ಬಾಡಿಗೆ ಮಳಿಗೆಗಳಲ್ಲಿ ಮಕ್ಕಳಿಗೆ ತರಬೇತಿ ನೀಡುತ್ತಿದ್ದೇವೆ. ಅದೆ ಬಾಡಿಗೆಯನ್ನು ಕ್ರೀಡಾ ಇಲಾಖೆಗೆ ನೀಡಲು ಸಿದ್ದ. ನಮಗೂ ಮಳಿಗೆ ನೀಡಿ ಎಂದು ಕ್ರೀಡಾಪಟುಗಳು ಒತ್ತಾಯಿಸಿದ್ದಾರೆ. ಅಲ್ಲದೆ ಜಿಲ್ಲಾಡಳಿತ ಫೆ.4 ಒಳಗೆ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ ಫೆ.5 ರಿಂದ ಅಹೋರಾತ್ರಿ ಧರಣಿ ನಡೆಸುವ ಎಚ್ಚರಿಕೆ ನೀಡಿದೆ.

ಕ್ರೀಡಾಂಗಣ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಆದರೆ ತುಮಕೂರು ನಗರ ಶಾಸಕ ಜ್ಯೋತಿಗಣೇಶ್ ಸ್ವಹಿತಾಸಕ್ತಿ, ಸ್ವಪ್ರತಿಷ್ಠೆಗೋಸ್ಕರ ಲೋಕಾರ್ಪಣೆಗೆ ಹಿಂದೇಟು ಹಾಕಿದ ಆರೋಪ ಕೇಳಿ ಬಂದಿದೆ. ಶಾಸಕರ ವರ್ತನೆಯಿಂದ ಕ್ರೀಡಾ ಚಟುವಟಿಕೆಗಳು ಕುಸಿತ ಕಾಣುತ್ತಿವೆ. ಇದರ ಹಿಂದೆ ಯಾವ ರಾಜಕೀಯ ಷಡ್ಯಂತ್ರ ಅಡಗಿದೆಯೋ ಗೊತ್ತಿಲ್ಲ. ನಮಗೆ ರಾಜಕಾರಣ ಬೇಡ. 2023ರ ಚುನಾವಣೆಗೆ ಸ್ಟೇಡಿಯಂನ್ನು ಪ್ರಚಾರಕ್ಕೆ ಬಳಸಿಕೊಂಡರೆ ನಮ್ಮ ಅಡ್ಡಿಯಿಲ್ಲ. ಆದರೆ ಮಕ್ಕಳಿಗೆ ಅಭ್ಯಾಸಕ್ಕೆ ಅವಕಾಶ ಕಲ್ಪಿಸಿ. ಈ ಕುರಿತು ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಶೀಘ್ರವಾಗಿ ನಿರ್ಧಾರ ಕೈಗೊಂಡರೆ ಒಳ್ಳೆಯದು ಎಂದು ವಿವಿಧ ಕ್ರೀಡಾಕ್ಲಬ್ಗಳ ಮುಖ್ಯಸ್ಥರು ಆಗ್ರಹಿಸಿದರು.

ವರದಿ : ಟಿ.ಯೋಗಿಶ್, ಕ್ಯಾಮರಾಮನ್ ನಾಗರಾಜು

Pragati TV Social Connect for more latest u

Leave a Reply

Your email address will not be published. Required fields are marked *